Bengaluru CityKarnatakaLatestLeading NewsMain Post

ಸಿದ್ದರಾಮೋತ್ಸವ ಮೂಲಕ ಸಿಎಂ ಕುರ್ಚಿಗಾಗಿ ವ್ಯಕ್ತಿಪೂಜೆ – ಬಿಜೆಪಿ ಟೀಕೆ

ಬೆಂಗಳೂರು: ಸಿದ್ದರಾಮೋತ್ಸವದ (siddaramotsava) ಮೂಲಕ ಸಿಎಂ ಕುರ್ಚಿಗಾಗಿ ವ್ಯಕ್ತಿಪೂಜೆ ಮಾಡಲಾಗಿದೆ ಎಂದು ಸಿದ್ದರಾಮಯ್ಯ ವಿರುದ್ಧ ಬಿಜೆಪಿ (BJP) ವಾಗ್ದಾಳಿ ನಡೆಸಿದೆ. ಸರಣಿ ಟ್ವೀಟ್‌ ಮೂಲಕ ಕಾಂಗ್ರೆಸ್‌ (congress) ಹಾಗೂ ಸಿದ್ದರಾಮಯ್ಯ (Siddaramaiah) ವಿರುದ್ಧ ಬಿಜೆಪಿ ಹರಿಹಾಯ್ದಿದೆ.

ಟ್ವೀಟ್‌ನಲ್ಲೇನಿದೆ?
ಬಿಜೆಪಿ ಪಕ್ಷದ ಒಂದು‌ ಜನಸ್ಪಂದನೆ ಕಾರ್ಯಕ್ರಮಕ್ಕೆ ಬೆದರಿರುವ ಸಿದ್ದರಾಮಯ್ಯ ಅವರೇ, ಮುಂದೆ ಹೇಗೆ? ಇನ್ನೂ ಹಲವಾರು ಸಮಾವೇಶದ ರೂಪುರೇಷೆ ನಡೆಯುತ್ತಿದೆ. ಭ್ರಷ್ಟರಾಮಯ್ಯ ಅವರು ಈಗಲೇ ತಮ್ಮ ಬುಡಕ್ಕೆ ಬೆಂಕಿ ಬಿದ್ದವರಂತೆ ವಿಲವಿಲ ಒದ್ದಾಡುತ್ತಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ, ರಾಜಕೀಯವಾಗಿ ಮೂಲೆಗುಂಪಾಗೋ ದಿನ ದೂರವಿಲ್ಲ: ಕಟೀಲ್ ತಿರುಗೇಟು

ಭಾರತ್ ಜೋಡೋ ಯಾತ್ರೆಯ ಮೂಲಕ‌ ನಕಲಿ ಗಾಂಧಿ ಕುಟುಂಬದ ಪಾದಪೂಜೆ ಮಾಡಲಾಗಿದೆ. ಸಿದ್ದರಾಮೋತ್ಸವದ ಮೂಲಕ ಸಿಎಂ‌ ಕುರ್ಚಿಗಾಗಿ ವ್ಯಕ್ತಿಪೂಜೆಯಾಗಿದೆ. ಜನ ಸಂವೇದನೆಗೆ, ಜನಸ್ಪಂದನೆಯ ಮೂಲಕ ನಾವು ಬೆಲೆ ನೀಡುತ್ತಿದ್ದೇವೆ. ಮಾನ್ಯ ಸಿದ್ದರಾಮಯ್ಯ ಅವರೇ, ನಿಮ್ಮದು ಬರೇ ಅಧಿಕಾರ ಕೇಂದ್ರೀಕೃತ ಸಮಾವೇಶಗಳಲ್ಲವೇ?

ರಾಜ್ಯ ಕಂಡ ಅತಿ ಭ್ರಷ್ಟಾತಿ ಭ್ರಷ್ಟ ಮುಖ್ಯಮಂತ್ರಿ ಎಂದರೆ ಅದು ಸಿದ್ದರಾಮಯ್ಯ. ತಾನು ಮಾಡಿದ ಭ್ರಷ್ಟಾಚಾರಗಳು ತನ್ನನ್ನು ಸುತ್ತಿಕೊಳ್ಳುತ್ತದೆ ಎಂಬ ಭಯ ಕಾಡಿದಾಗ ಭ್ರಷ್ಟಾಚಾರ ತನಿಖಾ ಸಂಸ್ಥೆಗೆ ಬಾಗಿಲು ಹಾಕಿದ ಕೀರ್ತಿ ಇಟಲಿ ಪರಿವಾರದ ಈ ಭ್ರಷ್ಟರಾಮಯ್ಯ ಅವರಿಗೆ ಸಲ್ಲುತ್ತದೆ. ನಿಜವಲ್ವೇ ‘ರೀಡು’ರಾಮಯ್ಯ? ಇದನ್ನೂ ಓದಿ: ನಮಗೆ ಸವಾಲು ಹಾಕುವ ಧಮ್ ನಿಮಗೆ ಇಲ್ಲ: ಬೊಮ್ಮಾಯಿ ವಿರುದ್ಧ ಸಿದ್ದು ಕಿಡಿ

ಜನ್ಮ ದಿನಾಂಕವೇ ಗೊತ್ತಿಲ್ಲ ಎನ್ನುತ್ತಲೇ ಜನನ ದಿನ ದಿನಾಂಕದಲ್ಲೂ ಹಗರಣ ನಡೆಸಿ ಸಿದ್ರಾಮೋತ್ಸವ ಮಾಡಿದ್ದು, ಡಿಕೆಶಿಯನ್ನು ಬೆದರಿಸಲೋ, ನಕಲಿ ಗಾಂಧಿ ಪರಿವಾರವನ್ನು ಬೆದರಿಸಲೋ ಅಥವಾ ಜನ ಸೇರಿಸಿ‌ ಸಿಎಂ ಆಗುತ್ತೇನೆ ಎಂಬ ಭ್ರಮೆಯಿಂದ ಮಾಡಿದ್ದೋ? 2013 ರಲ್ಲಿ ಭ್ರಷ್ಟರಾಮಯ್ಯ ಸಿಎಂ ಆಗಿದ್ದಲ್ಲ, ಅದು ದಲಿತ‌ ನಾಯಕನಿಂದ ಕಿತ್ತುಕೊಂಡ ಪದಭಿಕ್ಷೆ!

Live Tv

Leave a Reply

Your email address will not be published.

Back to top button