Karnataka Assembly Session| ಟಾರ್ಗೆಟ್‌ ಸಿದ್ದರಾಮಯ್ಯ – ಪ್ರತಿಪಕ್ಷಗಳಿಗೆ ಸಿಕ್ಕಿವೆ 3 ಬ್ರಹ್ಮಾಸ್ತ್ರಗಳು

Public TV
2 Min Read
BJP JDS Protest vidhansoudha

– ಜುಲೈ 15ರಿಂದ ಜುಲೈ 26ರ ತನಕ ನಡೆಯಲಿದೆ ಅಧಿವೇಶನ
– ಸಿದ್ದರಾಮಯ್ಯನವರ ರಾಜೀನಾಮೆಗೆ ಆಗ್ರಹಿಸುವುದೇ ಮೊದಲ ಅಜೆಂಡಾ

ಬೆಂಗಳೂರು: ಸೋಮವಾರದಿಂದ 9 ದಿನಗಳ ಕಾಲ ವಿಧಾನಮಂಡಲದ ಅಧಿವೇಶನ (Karnataka Legislative Assembly Session) ನಡೆಯಲಿದೆ. ಪ್ರತಿಪಕ್ಷಗಳಿಗೆ 3 ಬ್ರಹ್ಮಾಸ್ತ್ರಗಳು ಸಿಕ್ಕಿದ್ದು, ಸಿಎಂ ಸಿದ್ದರಾಮಯ್ಯ (CM Siddaramaiah) ವಿರುದ್ಧ ಬಳಸಲು ತಯಾರಿ ನಡೆಸಿವೆ. ಇದೊಂದು ರೀತಿಯಲ್ಲಿ ಟಾರ್ಗೆಟ್ ಸದನವಾಗಿದ್ದು, 3 ಪ್ರಕರಣಗಳಲ್ಲೂ ಸಿದ್ದರಾಮಯ್ಯ ಅವರೇ ಟಾರ್ಗೆಟ್ ಆಗುವ ಸಾಧ್ಯತೆ ಇದೆ.

ಜುಲೈ 15ರಿಂದ ಜುಲೈ 26ರ ತನಕ ನಡೆಲಿರುವ ಕಲಾಪದಲ್ಲಿ ಕಾಂಗ್ರೆಸ್ ಸರ್ಕಾರವನ್ನು (Congress Government) ಇಕ್ಕಟ್ಟಿಗೆ ಸಿಲುಕಿಸಲು ಬಿಜೆಪಿ-ಜೆಡಿಎಸ್ (BJP-JDS) ಜಂಟಿ ಹೋರಾಟಕ್ಕಿಳಿಯಲಿವೆ. ವಾಲ್ಮೀಕಿ (Valmiki Scam) ಅಭಿವೃದ್ಧಿ ನಿಗಮದ ಹಣ ವರ್ಗಾವಣೆ ಅಕ್ರಮ, ಮುಡಾ ಅಕ್ರಮ (Muda Scam) ಆರೋಪ, ಎಸ್‌ಸಿಎಸ್‌ಪಿ/ಟಿಎಸ್‌ಪಿ ಹಣವನ್ನು ಗ್ಯಾರಂಟಿಗೆ ಬಳಸಿಕೊಂಡಿದ್ದೇ ಬಿಜೆಪಿ-ಜೆಡಿಎಸ್ ಹೋರಾಟಕ್ಕೆ ಬಲ ತಂದಿದೆ. ಇದನ್ನೂ ಓದಿ: ಕಾವೇರಿ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ವರೆಗೂ ಹೋಗೋಣ – ರಾಜ್ಯ ಸರ್ಕಾರಕ್ಕೆ ಆರ್‌. ಅಶೋಕ್‌ ಬೆಂಬಲ!

Siddaramaiah 4

ಸಿದ್ದರಾಮಯ್ಯನವರ ರಾಜೀನಾಮೆಗೆ ಆಗ್ರಹಿಸುವುದೇ ಮೊದಲ ಅಜೆಂಡಾ ಆಗಿದೆ ಎನ್ನಲಾಗಿದೆ. ಅಲ್ಲದೆ ಪೆಟ್ರೋಲ್, ಡಿಸೇಲ್ ದರ ಏರಿಕೆ, ಡೆಂಗ್ಯೂ ಹೆಚ್ಚಳ ವಿಚಾರ, ಕಾವೇರಿ ನೀರು ಬಿಡುವ ನಿರ್ಧಾರದ ವಿಚಾರಗಳು ಸಹ ಹೆಚ್ಚು ಸದ್ದು ಮಾಡುವ ಸಾಧ್ಯತೆ ಇದೆ. ಅಲ್ಲದೇ ವಾಲ್ಮೀಕಿ ಹಗರಣ ಬಗ್ಗೆ ಚರ್ಚೆಗೆ ನಿಯಮ 60ರ ಅಡಿ ನಿಲುವಳಿ ಸೂಚನೆ ಮಂಡಿಸಲು ಬಿಜೆಪಿ ನಿರ್ಧರಿಸಿದೆ.

ಸಿಎಂ, ದದ್ದಲ್ ರಾಜೀನಾಮೆಗೆ ಆಗ್ರಹಿಸಿ ಶಾಸಕರ ಭವನದಲ್ಲಿರುವ ವಾಲ್ಮೀಕಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ವಿಧಾನಸೌಧದವರೆಗೆ ಬಿಜೆಪಿಗರು ಪ್ರತಿಭಟನಾ ಮೆರವಣಿಗೆ ನಡೆಸಲಿದ್ದಾರೆ. ಪ್ರತಿಪಕ್ಷಗಳ ಆರೋಪವನ್ನು ಎದುರಿಸಲು ಸಿಎಂ ಸಿದ್ದರಾಮಯ್ಯ ಕೂಡ ತಯಾರಿ ನಡೆಸಿದ್ದು, ಪ್ರಕರಣಗಳಿಗೆ ಹಿರಿಯ ಸಚಿವರ ಟೀಂ ಮಾಡಿ ಎದುರಿಸಲು ಸಿದ್ಧವಾಗಿದ್ದಾರೆ. ಇದನ್ನೂ ಓದಿ: ವಾಲ್ಮೀಕಿ ನಿಗಮ ಆಯ್ತು ಈಗ ವಕ್ಫ್‌ ಬೋರ್ಡ್‌ನಲ್ಲೂ ಕೋಟ್ಯಂತರ ರೂ. ಅಕ್ರಮ ವರ್ಗಾವಣೆ

ದೇವರಾಜ ಅರಸು ಟ್ರಕ್ ಟರ್ಮಿನಲ್ ಹಗರಣ, ಮಾಜಿ ಎಂಎಲ್‌ಎಸ್ ಡಿ.ಎಸ್. ವೀರಯ್ಯ ಬಂಧನ, ಶಿವಮೊಗ್ಗ ಪ್ರಾಧಿಕಾರದ ಸೈಟ್ ಹಂಚಿಕೆ ಗೋಲ್ಮಾಲ್, ಗೌಡರ ಕಾಲದಲ್ಲಿ ಮುಡಾ ಸೈಟ್ ಹಂಚಿಕೆ ಅಕ್ರಮ, ಹೆಚ್ಡಿಕೆಗೆ 60 ಸಾವಿರ ಅಡಿ ನಿವೇಶನ ಅಸ್ತ್ರ ಪ್ರಯೋಗಿಸಲಿದ್ದಾರೆ.

 

Share This Article