ಬೆಂಗಳೂರು: ಕರ್ನಾಟಕ ಸುರಕ್ಷಿತವಲ್ಲ, ರಾಜ್ಯವನ್ನು ಲೂಟಿ ಹೊಡೆಯುತ್ತಿದ್ದಾರೆ ಎಂದು ನಾಗಮಂಗಲ ಗಲಭೆ ವಿಚಾರವಾಗಿ ವಿಧಾನ ಪರಿಷತ್ ಸದಸ್ಯ ರವಿಕುಮಾರ್ (N Ravikumar) ಸಿಎಂ ವಿರುದ್ಧ ಕಿಡಿಕಾರಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ (CM Siddaramaiah) ಅವರೇ ನಿಮ್ಮ ಆಡಳಿತದಲ್ಲಿ ಪಾಕಿಸ್ತಾನ್ ಪರ ಘೋಷಣೆ ಕೂಗುತ್ತಾರೆ. ಪ್ಯಾಲೆಸ್ತೀನ್ ಧ್ವಜ ಹಾರಿಸುತ್ತಾರೆ. ರಾಮೇಶ್ವರಂ ಕೆಫೆ ಮೇಲೆ ಬಾಂಬ್ ಹಾಕಿದ್ದಾರೆ. ಕುಕ್ಕರ್ ಬ್ಲಾಸ್ಟ್ ಮಾಡಿದ್ದಾರೆ. ಕರ್ನಾಟಕ ಸುರಕ್ಷಿತವಲ್ಲ, ರಾಜ್ಯವನ್ನು ಲೂಟಿ ಹೊಡೆಯುತ್ತಿದ್ದಾರೆ. ಎಲ್ಲಾ ಇಲಾಖೆಗಳಲ್ಲೂ ಭ್ರಷ್ಟಾಚಾರ ಮನೆಮಾತಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.ಇದನ್ನೂ ಓದಿ:ಸಿನಿ ಪ್ರೇಕ್ಷಕರಿಗೆ ಗುಡ್ ನ್ಯೂಸ್: ಸೆ.20ರಂದು ಟಿಕೆಟ್ ಬೆಲೆ 99ಕ್ಕೆ ಇಳಿಕೆ
ಅಶ್ವಥ್ ನಾರಾಯಣ್ ನೇತೃತ್ವದ ಸತ್ಯಶೋಧನಾ ಸಮಿತಿ ನಾಗಮಂಗಲಕ್ಕೆ ಭೇಟಿ ನೀಡಿತ್ತು. ಅದೇ ರೀತಿ ಪಿಎಫ್‌ಐ ಬೆಂಬಲಿತ, ದೇಶದ್ರೋಹಿ ಸಂಘಟನೆ, ಎಸ್‌ಡಿಪಿಐ (SDPI) ಕೂಡ ಅಲ್ಲಿಯೇ ಹೋಗಿತ್ತು. ಎಸ್‌ಡಿಪಿಐ (PFI) ಅಧ್ಯಕ್ಷ ಅಬ್ದುಲ್ ಮಜೀದ್ ನೇತೃತ್ವದಲ್ಲಿ ಸತ್ಯಶೋಧನಾ ಸಮಿತಿ ವರದಿ ಮಾಡಲು ಹೋಗಿತ್ತು. ಅವರ ವರದಿ ಏನಿರುತ್ತದೆ ಎಂದು ನಮಗೆ ಈಗಾಗಲೇ ಗೊತ್ತಾಗಿದೆ. ಹಿಂದೂಗಳಿಗೆ ಅನ್ಯಾಯ ಮಾಡಿದ್ದಾರೆ. ಅವರೇ ಮೆರವಣಿಗೆ ವೇಳೆ ಕಲ್ಲು ಹೊಡೆದಿದ್ದಾರೆ ಎಂದು ವರದಿ ನೀಡುತ್ತಾರೆ. ಹಿಂದೂ ವಿರೋಧಿ ಇದ್ದರೆ ಅದು ಸಿದ್ದರಾಮಯ್ಯನವರೇ, ಗಣೇಶ ಕೂರಿಸಿದವರಿಗೆ ದ್ರೋಹ ಬಗೆದವರೂ ಅವರೇ ಎಂದು ಹೇಳಿದರು.
ಇದೇ ವೇಳೆ ಸಂಗೊಳ್ಳಿ ರಾಯಣ್ಣನಂತೆ ತಮ್ಮ ಹಿಂದೆಯೂ ಪಿತೂರಿ ನಡೀತಿದೆ ಎಂದು ಸಿಎಂ ನೀಡಿದ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಸಂಗೊಳ್ಳಿ ರಾಯಣ್ಣನಿಗೆ ಅವರ ಬಾಂಧವರೇ ಹಿಡಿದುಕೊಟ್ಟು ದ್ರೋಹ ಮಾಡಿದಂತೆ ನನಗೂ ದ್ರೋಹ ಮಾಡುತ್ತಾರೆ ಎಂದಿದ್ದೀರಿ. ರಾಯಣನನ್ನು ಹಿಡಿದುಕೊಟ್ಟಿದ್ದು ಅತ್ಯಂತ ದೇಶದ್ರೋಹತನ, ಕೆಟ್ಟದ್ದು ಅದನ್ನು ನಾವು ಒಪ್ಪುತ್ತೇವೆ. ಆದರೆ ನಿಮ್ಮನ್ನು ಯಾರು ಹಿಡಿದು ಕೊಡುತ್ತಿದ್ದಾರೆ. ಅದನ್ನು ಸಿಎಂ ಬಹಿರಂಗಪಡಿಸಬೇಕು. ಯಾರು ಸಿಎಂ ಆಗಬೇಕು ಅನ್ಕೊಂಡಿದ್ದಾರೋ ಅವರು ನಿಮ್ಮನ್ನು ಬಲಿ ಕೊಡ್ತಿದ್ದಾರಾ? ಎಂದು ಪ್ರಶ್ನಿಸಿದ್ದಾರೆ.
ಯಾರು ನಿಮ್ಮನ್ನ ರಾಯಣ್ಣನ ರೀತಿಯಲ್ಲಿ ದ್ರೋಹ ಮಾಡ್ತಿದ್ದಾರೆ? ರಾಯಣ್ಣನಿಗೂ ಸಿದ್ದರಾಮಯ್ಯಗೂ ಎತ್ತಲಿಂದ ಸಂಬಂಧ. ರಾಯಣ್ಣ ಒಬ್ಬ ವೀರ ಸೇನಾನಿ, ಬ್ರಿಟಿಷರ ವಿರುದ್ಧ ಹೋರಾಡಿದವನು. ಸಂಗೊಳ್ಳಿ ರಾಯಣ್ಣನೇನು 14 ಸೈಟುಗಳನ್ನು ಅಕ್ರಮವಾಗಿ ತಗೊಂಡಿರಲಿಲ್ಲ. ಸಂಗೊಳ್ಳಿ ರಾಯಣ್ಣ 3.16 ಗುಂಟೆ ಜಮೀನು ಖರೀದಿಸಲಿಲ್ಲ. ರಾಯಣ್ಣ ನಾಡಿಗಾಗಿ ನಿಸ್ವಾರ್ಥ ಸೇವೆ, ತ್ಯಾಗ, ಬಲಿದಾನ ಮಾಡಿದ್ದಾನೆ. ನೀವು ಯಾವ ನಾಡಿಗೆ ಕೀರ್ತಿ ತಗೊಂಡ್ ಬಂದಿದ್ದೀರಿ? ನೀವು ಯಾವ ರಾಜ್ಯಕ್ಕೆ ದಂಡನಾಯಕನ ಕೆಲಸ ಮಾಡಿದ್ದೀರಿ? ಎಂದು ವ್ಯಂಗ್ಯವಾಡಿದ್ದಾರೆ.ಇದನ್ನೂ ಓದಿ: ಮುನಿರತ್ನ ಧ್ವನಿ ಮಾದರಿಯನ್ನ FSLಗೆ ಕಳಿಸಿದ್ದೀವಿ, ಮ್ಯಾಚ್ ಆದ್ರೆ ಗ್ಯಾರಂಟಿ ಕ್ರಮ – ಸಚಿವ ಪರಮೇಶ್ವರ್ ಎಚ್ಚರಿಕೆ
ಸಂಗೊಳ್ಳಿ ರಾಯಣ್ಣ ಹೆಸರು ಹೇಳುವ ನೈತಿಕತೆ ಸಿಎಂಗಿಲ್ಲ. ಸಿದ್ದರಾಮಯ್ಯ ನಾಡಿಗೆ ಕ್ಷಮೆಯನ್ನು ಕೇಳಬೇಕು. ಸಂಗೊಳ್ಳಿ ರಾಯಣ್ಣನ ನಿಸ್ವಾರ್ಥತೆಯನ್ನು ಸಿದ್ದರಾಮಯ್ಯ ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿರುವುದು ಖಂಡನೀಯ ಎಂದು ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.