ಬೆಂಗಳೂರು: ಪ್ರಸಿದ್ಧ ದೇವಸ್ಥಾನಗಳಿಗೆ ಭಾರತೀಯ ರೈಲ್ವೇ ಹತ್ತು ದಿನಗಳ ವಿಶೇಷ ಪ್ಯಾಕೇಜ್ ಪ್ರವಾಸ ಪ್ರಾರಂಭಿಸಿದ್ದು, ಕಡಿಮೆ ದರದಲ್ಲಿ ಮೂರು ರಾಜ್ಯಗಳ ವಿವಿಧ ದೇವಸ್ಥಾನ ಹಾಗೂ ಪ್ರೇಕ್ಷಣಿಯ ಸ್ಥಳಗಳಿಗೆ ಭೇಟಿ ನೀಡಬಹುದು.
ಸೆಪ್ಟೆಂಬರ್ 15ರಂದು ಬೆಂಗಳೂರಿನಿಂದ ಪ್ರವಾಸ ಪ್ರಾರಂಭವಾಗಲಿದ್ದು ಒಬ್ಬರಿಗೆ 10,820 ರೂ. ಟಿಕೆಟ್ ದರವನ್ನು ನಿಗದಿಪಡಿಸಿದೆ.
Advertisement
ಯಾವ ಸ್ಥಳಕ್ಕೆ ಪ್ರವಾಸ?
ಬೆಂಗಳೂರಿನಿಂದ ಹೊರಟ ರೈಲು ಮಧ್ಯಪ್ರದೇಶದ ಮಹಾಕಾಳೇಶ್ವರ, ಓಂಕಾರೇಶ್ವರ, ರಾಜಸ್ಥಾನದ ಜೈಪುರ, ಪುಷ್ಕರ, ಮಹಾರಾಷ್ಟ್ರದ ತ್ರಿಯಂಬಕೇಶ್ವರ, ಪಂಢರಾಪುರ ಮತ್ತು ಶಿರಿಡಿಗೆ ಕರೆದೊಯ್ಯಲಾಗುವುದು ಎಂದು ಐಆರ್‌ಸಿಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.
Advertisement
ವಿಶೇಷ ಸೂಚನೆ:
ಪ್ರಯಾಣಿಕರಿಗೆ ತಿಂಡಿಯ ವ್ಯವಸ್ಥೆಯನ್ನು ಕೂಡಾ ಐಆರ್‌ಸಿಟಿಸಿ ನಿರ್ವಹಿಸಲಿದೆ. ಆದರೆ ಕೇವಲ ಸಸ್ಯಾಹಾರ ತಿನಿಸುಗಳನ್ನು ಮಾತ್ರ. ಪ್ರತಿದಿನ ಒಂದು ಲೀಟರ್ ನೀರು ಮತ್ತು ಎರಡು ಬಾರಿ ಕಾಫಿ ಅಥವಾ ಟೀ ಒದಗಿಸಲಾಗುತ್ತದೆ. ನಿಲ್ದಾಣಗಳಿಂದ ದೇವಸ್ಥಾನಗಳಿಗೆ ಹೋಗಲು ರೈಲ್ವೆ ನಿಗಮ ಪ್ರಯಾಣಿಕರಿಗೆ ಟ್ಯಾಕ್ಸಿ ವ್ಯವಸ್ಥೆ ಕೂಡಾ ಇದೆ.
Advertisement
ಮೈಸೂರಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಟಿಕೆಟ್ ಬುಕ್ ಆಗಿಲ್ಲ. ಒಂದು ವೇಳೆ ಮುಂದಿನ ಕೆಲವು ದಿನಗಳಲ್ಲಿ ಸಂಖ್ಯೆ ಏರಿಕೆಯಾದರೆ ಮೈಸೂರು ರೈಲು ನಿಲ್ದಾಣದಿಂದಲೇ ಪ್ರಯಾಣ ಪ್ರಾರಂಭಿಸಲಾಗುವುದು. ಇಲ್ಲದಿದ್ದರೆ ಹಾಸನದಿಂದ ಪ್ರಯಾಣ ಪ್ರಾರಂಭವಾಗಲಿದೆ ಎಂದು ಐಆರ್‌ಸಿಟಿಸಿ ಅಧಿಕಾರಿ ಇಮ್ರಾನ್ ಅಹ್ಮದ್ ತಿಳಿಸಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv