– ಮೋದಿ 4078 ದಿನ ದಾಖಲೆಗೆ ಅಭಿನಂದನೆ ಸಲ್ಲಿಸಿದ ಬಿವೈವಿ
ಬೆಂಗಳೂರು: ಮಹದಾಯಿ ವಿಚಾರದಲ್ಲಿ (Mahadayi) ಕರ್ನಾಟಕದ (Karnataka) ಹಿತಾಸಕ್ತಿ ಬಲಿ ಕೊಡಲು ಬಿಜೆಪಿ (BJP) ಅವಕಾಶ ನೀಡಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (BY Vijayendra) ತಿಳಿಸಿದರು.
ಬಿಜೆಪಿ ಕಚೇರಿಯಲ್ಲಿ ಮಹದಾಯಿ ಯೋಜನೆಗೆ ಗೋವಾ ಸಿಎಂ ಕ್ಯಾತೆ ವಿಚಾರವಾಗಿ ಮಾತನಾಡಿದ ಅವರು, ಸಿದ್ದರಾಮಯ್ಯ, ಡಿಸಿಎಂ ರಾಜಾರೋಷವಾಗಿ ಹೇಳಿಕೆ ನೀಡಿದ್ದಾರೆ. ಸಂತೋಷ, ರಾಜ್ಯ ಬಿಜೆಪಿ ಸದಾ ರಾಜ್ಯದ ಜನರ ಜೊತೆ ಇರುತ್ತದೆ. ರಾಜ್ಯದ ಹಿತಾಸಕ್ತಿ ಕಾಪಾಡಲು ರಾಜ್ಯ ಬಿಜೆಪಿ ಸಿದ್ಧವಾಗಿರುತ್ತದೆ. ಗೋವಾ ಮುಖ್ಯಮಂತ್ರಿ ಹಾಗೂ ಪ್ರಹ್ಲಾದ್ ಜೋಶಿ ಅವರು ನೀಡಿರುವ ಹೇಳಿಕೆಯನ್ನು ಗಮನಿಸಿದ್ದೇನೆ. ಕರ್ನಾಟಕದ ಹಿತಾಸಕ್ತಿ ಬಲಿ ಕೊಡಲು ಬಿಜೆಪಿ ಅವಕಾಶ ನೀಡಲ್ಲ ಎಂದು ಸ್ಪಷ್ಟಪಡಿಸಿದರು.ಇದನ್ನೂ ಓದಿ: ಸೌಮ್ಯ ರೇಪ್ & ಮರ್ಡರ್ ಕೇಸ್ | ಕಣ್ಣೂರು ಸೆಂಟ್ರಲ್ ಜೈಲ್‌ನಿಂದ ಪರಾರಿಯಾಗಿದ್ದ ಆರೋಪಿ ಅರೆಸ್ಟ್
ಇದೇ ವೇಳೆ ಪ್ರಧಾನಿ ಮೋದಿ (PM Modi) ಅವರ 4078 ದಿನ ದಾಖಲೆಗೆ ಅಭಿನಂದನೆ ಸಲ್ಲಿಸಿದರು. ಮೋದಿ ಹೊಸ ದಾಖಲೆ ಬರೆದಿದ್ದಾರೆ. ನೆಹರು ಬಳಿಕ ಹೆಚ್ಚು ದಿನ ಪ್ರಧಾನಿಯಾಗಿ ನರೇಂದ್ರ ಮೋದಿ ಆಡಳಿತ ನಡೆಸುತ್ತಿದ್ದಾರೆ ಎಂದು ತಿಳಿಸಿ ಸಂಭ್ರಮಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಸೇವಕನಾಗಿ ಆಡಳಿತ ನಡೆಸುತ್ತಿದ್ದಾರೆ. ಯಾವುದೇ ತುರ್ತು ಪರಿಸ್ಥಿತಿ ಹೇರಿಕೆ ಮಾಡದೇ, ಯಾವುದೇ ಅನುಕಂಪದ ಲಾಭ ಪಡೆಯದೇ ಕೆಲಸ ಮಾಡುತ್ತಿದ್ದಾರೆ. ಪರಿಶ್ರಮದಿಂದ ಅಭಿವೃದ್ಧಿ ಆಡಳಿತ ನಡೆಸುತ್ತಿದ್ದಾರೆ. ಮೋದಿಯವರಿಗೆ ದೇಶದ ಪರವಾಗಿ, ರಾಜ್ಯದ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸುತ್ತೇವೆ ಎಂದು ತಿಳಿಸಿದರು.ಇದನ್ನೂ ಓದಿ: ಬೆಂಗಳೂರು ವಿಶ್ವವಿದ್ಯಾಲಯದ ಸಮಸ್ಯೆಗಳನ್ನ ಪರಿಹಾರ ಮಾಡಿ: ಛಲವಾದಿ ನಾರಾಯಣಸ್ವಾಮಿ