ಚಾಮರಾಜನಗರ: ಕಾಲ ಮಿತಿಯೊಳಗೆ ಮಾಹಿತಿ ನೀಡದ ಕೊಳ್ಳೇಗಾಲ ತಹಶೀಲ್ದಾರ್ (Tahsildar) ಎಂ.ಮಂಜುಳಾ ಅವರಿಗೆ ರಾಜ್ಯ ಮಾಹಿತಿ ಹಕ್ಕು ಆಯೋಗ (Karnataka Information Commission) 25 ಸಾವಿರ ದಂಡವನ್ನು (Fine) ವಿಧಿಸಿ ಆದೇಶಿಸಿದೆ.
Advertisement
ಕೊಳ್ಳೇಗಾಲ ತಾಲೂಕಿನ ಕುಣಗಳ್ಳಿ ಗ್ರಾಮದ ಕೆ.ಎಲ್. ಲಿಂಗರಾಜು ಅವರ ದೂರಿನ ಹಿನ್ನೆಲೆ ರಾಜ್ಯ ಮಾಹಿತಿ ಆಯುಕ್ತ ಎಚ್.ಸಿ ಸತ್ಯನ್ ತೆರೆದ ನ್ಯಾಯಾಲಯದಲ್ಲಿ ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ಬೆಳಗಾವಿ ಸೇರಿ 865 ಹಳ್ಳಿಗಳು ನಮಗೆ ಸೇರಬೇಕು – ಮಹಾರಾಷ್ಟ್ರ ಅಸೆಂಬ್ಲಿ ಸರ್ವಾನುಮತದ ನಿರ್ಣಯ
Advertisement
Advertisement
ಏನಿದು ಪ್ರಕರಣ?
ಕೊಳ್ಳೇಗಾಲ ತಾಲೂಕಿನ ಕುಣಗಳ್ಳಿ ಗ್ರಾಮದ ನಿವಾಸಿ ಕೆ.ಎಲ್. ಲಿಂಗರಾಜು ಎಂಬುವರು 2022ರ ಜ.1 ರಂದು ಮಾಹಿತಿ ಹಕ್ಕು ಕಾಯ್ದೆಯಡಿ ತಹಶೀಲ್ದಾರ್‌ಗೆ ಅರ್ಜಿ ಸಲ್ಲಿಸಿ, ಕುಣಗಳ್ಳಿ ಗ್ರಾಮದ ಸರ್ವೇ ನಂ.785ರಲ್ಲಿ ವಿಸ್ತೀರ್ಣ 4 ಎಕರೆ 76 ಸೆಂಟ್ಸ್ ಇದರ ಖಾತೆ ಆದೇಶ ಸಂಖ್ಯೆ ಕ.ಅ.16/16-17 ಕೋರ್ಟು ಆದೇಶ 2016ರ ಜೂನ್ 27ರಂದು ಸಾಲು ವಹಿವಾಟು ಸಂಖ್ಯೆ 194ಎಂ.ಆರ್. ನಂಬರ್ ಎಚ್.90 ಇದರ ತಹಸೀಲ್ದಾರ್ ಆದೇಶ ಜೆರಾಕ್ಸ್ ಪ್ರತಿಗಳು ಮತ್ತು ಕಮಲಮ್ಮ, ಚೆನ್ನಶೆಟ್ಟಿ, ಫ್ರಂಕು ಲೂಯಿಸ್, ಇವರುಗಳು ತಹಶೀಲ್ದಾರ್ ಕೋರ್ಟಿಗೆ ಸಲ್ಲಿಸಿದ್ದ ಪ್ರತಿ ಒಂದು ದಾಖಲೆಗಳ ಜೆರಾಕ್ಸ್ ಪ್ರತಿಗಳನ್ನು ದೃಢೀಕರಿಸಿಕೊಡಲು ಕೋರಿದ್ದರು. ಇದನ್ನೂ ಓದಿ: ಆರ್‌ಎಸ್‍ಎಸ್ ಭಾರತೀಯ ಸಂಸ್ಕೃತಿ, ಮೌಲ್ಯಗಳನ್ನು ಶ್ರೀಮಂತಗೊಳಿಸುತ್ತಿದೆ: ರವೀಂದ್ರ ಜಡೇಜಾ
Advertisement
ಆದರೆ, ಇದಕ್ಕೆ ತಹಶೀಲ್ದಾರ್ ಸಕಾಲಕ್ಕೆ ಮಾಹಿತಿ ನೀಡದ ಹಿನ್ನೆಲೆ ಅರ್ಜಿದಾರರು ಆಯೋಗಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಪರಿಣಾಮ ರಾಜ್ಯ ಮಾಹಿತಿ ಹಕ್ಕಿನ ಆಯೋಗವು ತಹಶೀಲ್ದಾರ್ ಮಂಜುಳಾ ಅವರಿಗೆ ದಂಡವಿಧಿಸಿದ್ದು. ದಂಡದ ಮೊತ್ತವನ್ನು ಸರ್ಕಾರದ ಲೆಕ್ಕ ಶೀರ್ಷಿಕೆ ಖಾತೆಗೆ ಜಮಾ ಮಾಡಿಸುವಲ್ಲಿ ಸೂಕ್ತ ಕ್ರಮವಹಿಸುವಂತೆ ಉಪ ವಿಭಾಗಧಿಕಾರಿ ಗೀತಾ ಹುಡೇದ ಅವರಿಗೆ ಸೂಚಿಸಿದೆ.