ಬೆಂಗಳೂರು: 2016- 17 ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದೆ. ಎಂದಿನಂತೆ ಬಾಲಕಿಯರು ಮೇಲುಗೈ ಸಾಧಿಸಿದ್ದು, ಉಡುಪಿ ಪ್ರಥಮ, ದಕ್ಷಿಣ ಕನ್ನಡ ದ್ವಿತೀಯ, ಉತ್ತರ ಕನ್ನಡ ತೃತೀಯ ಸ್ಥಾನವನ್ನು ಪಡೆದರೆ, ಬೀದರ್ ಕೊನೆಯ ಸ್ಥಾನವನ್ನು ಪಡೆದಿದೆ.
ಮಲ್ಲೇಶ್ವರಂನಲ್ಲಿರುವ ಪದವಿ ಪೂರ್ವ ಶಿಕ್ಷಣ ಇಲಾಖೆ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಫಲಿತಾಂಶವನ್ನು ಪ್ರಕಟಿಸಿದರು.
Advertisement
ಕಳೆದ ವರ್ಷಕ್ಕಿಂತ ಈ ಬಾರಿ ಶೇ.4.82 ಫಲಿತಾಂಶ ಇಳಿಕೆಯಾಗಿದ್ದು, ಈ ಬಾರಿ ಈ ವರ್ಷ 52.38 ಫಲಿತಾಂಶ ದಾಖಲಾಗಿದೆ. 6,84,490 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಇದರಲ್ಲಿ 3,55,697 ಮಂದಿ ಉತ್ತೀರ್ಣರಾಗಿದ್ದಾರೆ.
Advertisement
2,01,273 ವಿದ್ಯಾರ್ಥಿನಿಯರು ಪಾಸಾಗುವ ಮೂಲಕ ಶೇ.60.28 ಫಲಿತಾಂಶ ದಾಖಲಾಗಿದ್ದರೆ, 1,54,424 ವಿದ್ಯಾರ್ಥಿಗಳು ಪಾಸಾಗುವ ಮೂಲಕ ಶೇ.44.74 ಫಲಿತಾಂಶ ದಾಖಲಾಗಿದೆ. 45,983 ಡಿಸ್ಟಿಂಕ್ಷನ್, 1,92,012 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
Advertisement
ವಿಜ್ಞಾನ ವಿಭಾಗದಲ್ಲಿ ಒಟ್ಟು 1,32,262 ಮಂದಿ ಪಾಸಾಗಿದ್ದರೆ, ವಾಣಿಜ್ಯ ವಿಭಾಗದಲ್ಲಿ 1,48,269 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಕಲಾ ವಿಭಾಗ 75,166 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಒಟ್ಟು 132 ಕಾಲೇಜುಗಳು ಶೂನ್ಯ ಫಲಿತಾಂಶ ಪಡೆದಿದ್ದು, ಇದರಲ್ಲಿ 127 ಖಾಸಗಿ ಕಾಲೇಜುಗಳು ಸೇರಿವೆ.
Advertisement
ಉತ್ತರ ಪತ್ರಿಕೆ ಸ್ವೀಕರಿಸಲು(ಸ್ಕ್ಯಾನಿಂಗ್ ಪ್ರತಿಗೆ) ಅರ್ಜಿ ಸಲ್ಲಿಸಲು ಮೇ 19 ಕೊನೆ ದಿನಾಂಕವಾಗಿದ್ದು, ಸ್ಕ್ಯಾನಿಂಗ್ ಪ್ರತಿ ಪಡೆಯಲು 400 ರೂಪಾಯಿ ಶುಲ್ಕ ನಿಗದಿ ಪಡಿಸಲಾಗಿದೆ. ಮರು ಮೌಲ್ಯಮಾಪನ ಅರ್ಜಿ ಸಲ್ಲಿಸಲು ಮೇ 24 ಕೊನೆ ದಿನಾಂಕವಾಗಿದ್ದು, ಮರು ಮೌಲ್ಯ ಮಾಪನಕ್ಕೆ 1 ಪತ್ರಿಕೆಗೆ ಶುಲ್ಕ-1260 ರೂಪಾಯಿ ನಿಗದಿಪಡಿಸಲಾಗಿದೆ.
ಮರು ಏಣಿಕೆಗೆ ಅರ್ಜಿ ಸಲ್ಲಿಸಲು ಕೊನೆ ದಿನಾಂಕ ಮೇ 24 ಆಗಿದ್ದು, ಪೂರಕ ಪರೀಕ್ಷೆ ಜೂನ್ 28ರಿಂದ ಜುಲೈ 8ರವರೆಗೆ ನಡೆಯಲಿದೆ. ಸಪ್ಲಿಮೆಂಟರಿ ಪರೀಕ್ಷೆಗೆ ಶುಲ್ಕ ಕಟ್ಟಲು ಜೂನ್ 23 ಕೊನೆ ದಿನಾಂಕವಾಗಿದೆ.