ಬೆಂಗಳೂರು: ರಾಜ್ಯಾದ್ಯಂತ ಕಿಡಿ ಹೊತ್ತಿಸಿದ್ದ ಹಿಜಬ್-ಕೇಸರಿ ಶಾಲು ವಿವಾದ ಸಂಬಂಧ ಸುದೀರ್ಘ 11 ದಿನ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ಇಂದು ತ್ರಿಸದಸ್ಯ ಪೀಠದಿಂದ ತೀರ್ಪು ಪ್ರಕ. ಈ ಹಿನ್ನೆಲೆಯಲ್ಲಿ ಶಂತಿ ಕಾಪಾಡುವಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಮನವಿ ಮಾಡಿಕೊಂಡಿದ್ದಾರೆ.
Advertisement
ಈ ಸಂಬಂಧ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಗೃಹ ಸಚಿವರು, ನಮ್ಮ ಪೊಲೀಸ್ ಇಲಾಖೆ ಎಲ್ಲಾ ರೀತಿಯ ಸಿದ್ಧತೆಯಲ್ಲೇ ಇರಲಿದೆ. ಇಂದು ಹಿಬಾಜ್ ತೀರ್ಪು ಯಾವ ರೀತಿಯಲ್ಲಿ ಬರಲಿ, ಜನ ಅದನ್ನ ಸ್ವೀಕಾರ ಮಾಡಬೇಕು, ತೀರ್ಪಿನ ಬಗ್ಗೆ ಅಸಮಾಧಾನ ಇದ್ದರೆ ಅದನ್ನ ಕಾನೂನಿನ ರೀತಿ ಪ್ರಶ್ನಿಸಬಹುದು ಎಂದರು. ಇದನ್ನೂ ಓದಿ: ಹಿಜಬ್ ತೀರ್ಪು: ಮಂಗಳವಾರ ಉಡುಪಿ, ಶಿವಮೊಗ್ಗ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ
Advertisement
Advertisement
ಯಾವುದೇ ರೀತಿಯ ಅಹಿತರ ಘಟನೆ ಆಗುವುದಿಲ್ಲ ಎಂಬ ವಿಶ್ವಾಸ ನಮಗೆ ಇದೆ. ನಮ್ಮ ಇಲಾಖೆ ಎಲ್ಲ ರೀತಿಯಲ್ಲೂನ ಸಿದ್ಧತೆ ಮಾಡಿಕೊಂಡಿದೆ. ಕಾನೂನಿಗೆ ಧಕ್ಕೆ ತರುವ ಕೆಲಸ ಯಾರೇ ಮಾಡಿದರೂ ಶಿಸ್ತಿನ ಕ್ರಮ ಕೈಗೊಳ್ಳುತ್ತೇವೆ ಅಂತಾ ಆರಗ ಜ್ಞಾನೇಂದ್ರ ಹೇಳಿದ್ದಾರೆ. ಇದನ್ನೂ ಓದಿ: ಹಿಜಬ್ ವಿವಾದ ತೀರ್ಪು- ನಾಳೆ ದಕ್ಷಿಣ ಜಿಲ್ಲೆ ಶಾಲಾ-ಕಾಲೇಜುಗಳಿಗೆ ರಜೆ