ನವದೆಹಲಿ: ಕರ್ನಾಟಕದಲ್ಲಿನ ಹಿಜಬ್ ವಿಚಾರ ಈಗಾಗಲೇ ದೇಶ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಈಗ ಈ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕ, ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಪ್ರತಿಕ್ರಿಯಿಸಿದ್ದಾರೆ.
After seeing the Hijab controversy which is making Muslims boycott classes saying "First hijab and then studies", I am wondering why their grandfathers chose to stay in India rather than go to Pakistan, where they could get effortlessly "hijab first".
— Subramanian Swamy (@Swamy39) February 16, 2022
Advertisement
“ಮೊದಲು ಹಿಜಬ್ ನಂತರ ಓದು” ಎಂದು ಮುಸ್ಲಿಮರು ತರಗತಿಗಳನ್ನು ಬಹಿಷ್ಕರಿಸುವ ಹಿಜಬ್ ವಿವಾದವನ್ನು ನೋಡಿದ ಬಳಿಕ ಅವರ ಅಜ್ಜಂದಿರು ಪಾಕಿಸ್ತಾನಕ್ಕೆ ಹೋಗುವುದಕ್ಕಿಂತ ಭಾರತದಲ್ಲಿ ಉಳಿಯುವ ಆಯ್ಕೆ ಯಾಕೆ ಮಾಡಿದರು ಎನ್ನುವುದೇ ನನಗೆ ಆಶ್ಚರ್ಯವಾಗುತ್ತಿದೆ. ಒಂದು ವೇಳೆ ಆಯ್ಕೆ ಮಾಡುತ್ತಿದ್ದರೆ ಸುಲಭವಾಗಿ “ಹಿಜಬ್ ಮೊದಲು” ಪಡೆಯುತ್ತಿದ್ದರು ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಅಲ್ಲಾಹು ಅಕ್ಬರ್ ಘೋಷಣೆ ಕೂಗುತ್ತಾ ಕಾಲೇಜಿಗೆ ಬಂದ ವಿದ್ಯಾರ್ಥಿನಿಯರು
Advertisement
Godse by shooting Gandhi gave complete power to Nehru and made Patel weak, Godse was stupid !!
— Subramanian Swamy (@Swamy39) February 16, 2022
Advertisement
ಇನ್ನೊಂದು ಟ್ವೀಟ್ ಮಾಡಿ ಗಾಂಧಿಯನ್ನು ಗುಂಡಿಕ್ಕಿದ ಗೋಡ್ಸೆ ನೆಹರೂಗೆ ಸಂಪೂರ್ಣ ಅಧಿಕಾರ ನೀಡಿ ಪಟೇಲರನ್ನು ದುರ್ಬಲಗೊಳಿಸಿದ್ದಾನೆ. ಗೋಡ್ಸೆ ಮೂರ್ಖ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಕೃಷ್ಣನ ದೇವಸ್ಥಾನ ಕಟ್ಟಿಸಿದ ಮುಸ್ಲಿಂ ಉದ್ಯಮಿ
Advertisement
Sikhs saved Hindus from extermination by Mughals. Today they fight for us Indian Army. So how can we bite the hand that feeds?
— Subramanian Swamy (@Swamy39) February 16, 2022
ಕರ್ನಾಟಕದಲ್ಲಿ ಹಿಜಬ್ ವಿವಾದ ಕಾಡ್ಗಿಚ್ಚಿನಂತೆ ಮತ್ತಷ್ಟು ವ್ಯಾಪಕವಾಗುತ್ತಿದೆ. ವಿದ್ಯೆ ಕಲಿತು ಭವಿಷ್ಯ ರೂಪಿಸಿಕೊಳ್ಳಬೇಕಾದ ಮಕ್ಕಳೇ ಸರ್ಕಾರ, ಹೈಕೋರ್ಟ್ ಸೂಚನೆಗಳಿಗೆ ವಿರುದ್ಧವಾಗಿ ನಿಂತಿದ್ದಾರೆ. ಹೈಸ್ಕೂಲ್ ಬಳಿಕ ಓಪನ್ ಆಗಿರುವ ಆದ ಪಿಯು, ಡಿಗ್ರಿ ಕಾಲೇಜ್‍ಗಳಲ್ಲಿ ಹಿಜಬ್ ಹೈಡ್ರಾಮಾ ಮತ್ತಷ್ಟು ಮಗಷ್ಟು ಜೋರಾಗಿದೆ. ಹಿಜಬ್ ಇದ್ದರೆ ಮಾತ್ರ ನಾವು ಶಿಕ್ಷಣ ಕಲಿಯುತ್ತೇವೆ. ಪ್ರಾಣ ಬಿಡ್ತೇವೆಯೇ ಹೊರತು ಧರ್ಮ ಬಿಡುವುದಿಲ್ಲ ಎಂದು ವಿದ್ಯಾರ್ಥಿನಿಯರು ಕಾಲೇಜ್ ಆಡಳಿತ ಮಂಡಳಿ ಜೊತೆ ಜಿದ್ದಿಗೆ ಬಿದ್ದು, ಆವೇಶಭರಿತ ಹೇಳಿಕೆ ನೀಡುತ್ತಿದ್ದಾರೆ. ಶಿಕ್ಷಕರ ಮಾತನ್ನೂ ಕಿವಿಗೆ ಹಾಕಿಕೊಳ್ಳುತ್ತಿಲ್ಲ.