ಬೆಂಗಳೂರು: ಹೈಕೋರ್ಟ್ ಆದೇಶದ ಬೆನ್ನಲ್ಲೇ ನಾಳೆಯಿಂದ ರಾಜ್ಯಾದ್ಯಂತ ಪ್ರೌಢ ಶಾಲೆಗಳು ಆರಂಭವಾಗ್ತಿದೆ. ಶಾಲೆಗಳಿಗೆ ಭದ್ರತೆ ಒದಗಿಸಲಾಗಿದೆ. ಮುನ್ನೆಚ್ಚರಿಕೆಯಾಗಿ ಶಾಲೆ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಹೇರಲಾಗಿದೆ.
Advertisement
ಸಿಎಂ ಬೊಮ್ಮಾಯಿ ಪ್ರತಿಕ್ರಿಯಿಸಿ, ನಾಳೆಯಿಂದ ಶಾಂತಿಯುತವಾಗಿ ಎಲ್ಲಾ ತರಗತಿ ನಡೆಯುತ್ತೆ. ಕಾಲೇಜುಗಳ ಆರಂಭದ ಬಗ್ಗೆ ನಿರ್ಧರಿಸುತ್ತೇವೆ ಅಂದಿದ್ದಾರೆ. ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಮಾತಾಡಿ, ನಾಳೆ 9-10ನೇ ಕ್ಲಾಸ್ ಆರಂಭವಾಗುತ್ತೆ. ನಾಳೆ ಸಿಎಂ ಸಭೆ ಬಳಿಕ ಪಿಯುಸಿ, ಡಿಗ್ರಿ ಕಾಲೇಜ್ ಓಪನ್ ಬಗ್ಗೆ ಚರ್ಚೆ ಮಾಡ್ತೇವೆ ಅಂದ್ರು. ಇದನ್ನೂ ಓದಿ: ಬುರ್ಖಾ ಪದ್ಧತಿ ಇಲ್ಲದೆ ಇರೋದಕ್ಕೇ ದೇಶದಲ್ಲಿ ರೇಪ್ ಹೆಚ್ಚಾಗ್ತಿದೆ: ಜಮೀರ್ ವ್ಯಾಖ್ಯಾನ
Advertisement
Advertisement
ಗದಗ್‍ನಲ್ಲಿ ಡಿಕೆಶಿ ಮಾತಾಡಿ, ಕೆಂಪುಕೋಟೆ ಮೇಲೆ ಕೇಸರಿ ಧ್ವಜ ಹಾರಿಸ್ತೇವೆ ಅಂತ ತಲೆಕೆಟ್ಟ ಈಶ್ವರಪ್ಪ ಏನೇನೋ ಮಾತಾಡ್ತಾನೆ. ಕಾಂಗ್ರೆಸ್‍ನಲ್ಲಿ ಇಂಥ ಹೇಳಿಕೆ ಕೊಟ್ರೆ 10 ನಿಮಿಷದಲ್ಲಿ ರಾಜೀನಾಮೆ ಪಡೀತಿದ್ದೆವು. ಸಿಎಂ ಬೊಮ್ಮಾಯಿ ಬಾಯಿಗೆ ಹೊಲಿಗೆ ಹಾಕಿಕೊಂಡಿದ್ದಾರೆ. ಈಶ್ವರಪ್ಪ ವಿರುದ್ಧ ದೇಶದ್ರೋಹ ಕೇಸ್ ದಾಖಲಾಗಬೇಕು ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆ ಮಾಡ್ತೇವೆ ಅಂತ ಡಿಕೆಶಿ ಕಿಡಿಕಾರಿದ್ದಾರೆ. ಇದನ್ನೂ ಓದಿ: ಹಿಜಬ್ ವಿಚಾರದಲ್ಲಿ ಕೋರ್ಟ್ ಏನೇ ತೀರ್ಪು ಕೊಟ್ಟರೂ ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸಬೇಕು: ಹೆಚ್.ಡಿ ದೇವೇಗೌಡ
Advertisement
ಮಾಜಿ ಸಚಿವ ಜಮೀರ್ ಪ್ರತಿಕ್ರಿಯಿಸಿ, ಮಕ್ಕಳಲ್ಲಿ ಜಾತಿಬೀಜ ಹಾಕಿ ರಾಜಕೀಯ ಮಾಡ್ತಿದ್ದಾರೆ ಅಂದ್ರೆ, ಖಾದರ್ ಮಾತ್ರ ಎಲ್ಲವನ್ನೂ ನ್ಯಾಯಾಲಯವೇ ಬಗೆಹರಿಸೋಕೆ ಆಗಲ್ಲ. ಕೋರ್ಟ್ ಹೊರಗೇ ಬಗೆಹರಿಸಲು ಪ್ರಯತ್ನಿಸಬೇಕು ಅಂದಿದ್ದಾರೆ. ಈ ಮಧ್ಯೆ, ಸಂಸದ ಪ್ರತಾಪ್ ಸಿಂಹ, ಹಿಜಾಬ್ ಗಲಾಟೆಯ ಹಿಂದೆ ಕೆಎಫ್‍ಡಿ, ಪಿಎಫ್‍ಐ ಇದೆ ಅಂದಿದ್ದಾರೆ.