ರಾಜೀನಾಮೆ ನೀಡಿದ ಬೆಂಗಳೂರು ಶಿಕ್ಷಕಿಗೆ ಬೇರೆ ಕಡೆ ಉದ್ಯೋಗ: ಸುರೇಶ್‌ ಕುಮಾರ್‌ ಭರವಸೆ

Public TV
2 Min Read
SURESH KUMAR

ಬೆಂಗಳೂರು: ಚಂದ್ರಾ ಲೇಔಟ್‌ ವಿದ್ಯಾಸಾಗರ್‌ ಶಾಲೆಯ ಶಿಕ್ಷಕಿ ಶಶಿಕಲಾ ಅವರಿಗೆ ಬೇರೆ ಕಡೆ ಉದ್ಯೋಗ ನೀಡುವ ಬಗ್ಗೆ ಮಾತನಾಡಿದ್ದೇನೆ ಎಂದು ಮಾಜಿ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಹೇಳಿದ್ದಾರೆ.

ಈ ವಿಚಾರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ದೀರ್ಘವಾದ ಪೋಸ್ಟ್‌ ಪ್ರಕಟಿಸಿ ವಿಷಯವನ್ನು ಹಂಚಿಕೊಂಡಿದ್ದಾರೆ.

vidyasagar school

ಪೋಸ್ಟ್‌ನಲ್ಲಿ ಏನಿದೆ?
ಕೆಲವು ದಿನಗಳ ಹಿಂದೆ ಬೆಂಗಳೂರಿನ ಒಂದು ಖಾಸಗಿ ಶಾಲೆಯಲ್ಲಿ ಓರ್ವ ಯುವಶಿಕ್ಷಕಿ ತಾನು ಮಾಡದಿರುವ ಕೃತ್ಯಕ್ಕೆ ಶಿಕ್ಷೆ ಅನುಭವಿಸುವ ಘಟನೆ ನಡೆಯಿತು. ಆ ಶಾಲೆಯ ಮಕ್ಕಳ ಪೋಷಕರಲ್ಲದ ನೂರಾರು ಮಂದಿ ಶಾಲೆಯ ಮುಂದೆ ಜಮಾಯಿಸಿ ಆಧಾರರಹಿತ ಗಲಾಟೆ ಮಾಡಿದ್ದರು. ಸುಳ್ಳು ವದಂತಿ ಹಬ್ಬಿಸಿ ಈ ಗಲಾಟೆ ಮಾಡಲಾಗಿತ್ತು. ಇದನ್ನೂ ಓದಿ: ಹಿಜಬ್ ತೆಗೆಯಿರಿ ಅನ್ನೋದಕ್ಕೆ ಹೆತ್ತವರಿಗೆ ರೈಟ್ಸ್ ಇಲ್ಲ, ಅವನ್ಯಾವನು ಹೇಳೋಕೆ: ಶಿಕ್ಷಕರ ವಿರುದ್ಧ ವಿದ್ಯಾರ್ಥಿನಿಯರು ರೆಬೆಲ್

ಈ ಒಟ್ಟು ಘಟನೆ ಸಂಪೂರ್ಣ ತಪ್ಪು ಗ್ರಹಿಕೆಯಿಂದ ಆಗಿತ್ತು ಎಂಬುದು ನನ್ನ ಗಮನಕ್ಕೆ ಬಂತು. ಈ ಘಟನೆಯ ನಂತರ ಆ ಶಿಕ್ಷಕಿ ಮನನೊಂದು ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಂಗತಿಯು ನನಗೆ ತಿಳಿದು ಬಂದಿತು. ಇಂದು ಶಿಕ್ಷಕಿಯ ಮನೆಗೆ ಹೋಗಿ ಅವರಿಂದ ಶಾಲೆಯಲ್ಲಿ ಅಂದು ನಡೆದ ವಿದ್ಯಮಾನವನ್ನು ಸಂಗ್ರಹಿಸಿದೆ. ಏಳನೆಯ ತರಗತಿಯ ಸಣ್ಣ ಮಕ್ಕಳಿಗೆ ಪಾಠ ಹೇಳಿಕೊಟ್ಟ ನಂತರ ಉದ್ಭವಿಸಿದ ತಪ್ಪು ಗ್ರಹಿಕೆ ಇದು. ಕೆಲವರಿಗೆ ಇದು ಆಹಾರವೂ ಆಯಿತು.

ಶಾಲೆಯ ಮುಖ್ಯಸ್ಥರೊಂದಿಗೂ ಮಾತನಾಡಿದೆ. ಈ ಶಿಕ್ಷಕಿ ಕೆಳ ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದವರು. ತಂದೆ ತಾಯಿ ಜೊತೆ ಒಂದು ಚಿಕ್ಕ ಮನೆಯಲ್ಲಿ ವಾಸಿಸುತ್ತಿದ್ದಾರೆ. ಆಕೆಯ ರಾಜೀನಾಮೆಯಿಂದ ಬರುತ್ತಿದ್ದ ಸಂಬಳ ಇಲ್ಲದೆ ಕುಟುಂಬಕ್ಕೆ ಇನ್ನಷ್ಟು ಆರ್ಥಿಕ ಹೊರೆ ಹೆಚ್ಚಾಗಿದೆ. ಅವರ ಮನೆಯ ಪರಿಸ್ಥಿತಿ ನೋಡಿದ ಯಾರಿಗಾದರೂ ಕಣ್ಣಲ್ಲಿ ನೀರು ಬರುತ್ತದೆ. ಆದರೆ ಇದೇನೇ ಆದರೂ ಆ ಶಿಕ್ಷಕಿ ತನ್ನ ರಾಜೀನಾಮೆ ವಾಪಸ್‌ ಪಡೆಯುವ ಮನದಲ್ಲಿಲ್ಲ.

ಆಕೆಯ ಅಪ್ಪ, ಅಮ್ಮನ ಅಳಲು ಆಲಿಸಿದ ನನಗೆ ಬೇಸರವಾಯಿತು. ವಿನಾಕಾರಣ ಗಲಾಟೆ ಮಾಡಿ ಈ ಶಿಕ್ಷಕಿಯ ಕುಟುಂಬದ ಅನ್ನ ಕಸಿದುಕೊಂಡ ಆ ಗುಂಪಿನ ಬಗ್ಗೆ ತೀವ್ರ ತಿರಸ್ಕಾರ ಮೂಡಿತು. ಈಗ ಶಿಕ್ಷಕಿ ರಾಜೀನಾಮೆ ಕೊಟ್ಟಿದ್ದಾರೆ. ಬದಲಿ ಶಿಕ್ಷಕಿ ಸದ್ಯಕ್ಕಂತೂ ಇಲ್ಲ. ಇದರಿಂದ ತೊಂದರೆ ಯಾಗುವುದು ಆ ಮಕ್ಕಳಿಗೆ. ಇದು ಆ ಗಲಾಟೆ ಮಾಡಿದ ಆ ಗುಂಪಿನ ಅರಿವಿಗೆ ಬರುವುದಿಲ್ಲ.

ಆ ಕುಟುಂಬದ ಜೊತೆ ಸುಮಾರು ಹೊತ್ತು ಮಾತನಾಡಿ ಒಂದಷ್ಟು ಧೈರ್ಯ ತುಂಬಿ ಬಂದಿದ್ದೇನೆ. ಶಾಲೆಯ ಮುಖ್ಯಸ್ಥರೊಂದಿಗೆ ಮಾತನಾಡಿ ಶಿಕ್ಷಕಿಗೆ ಅಗತ್ಯ ಆರ್ಥಿಕ ಸಹಾಯ ನೀಡುವಂತೆ ಕೇಳಿದ್ದೇನೆ. ಅವರೂ ಪೂರಕವಾಗಿ ಸ್ಪಂದಿಸಿದ್ದಾರೆ. ಶಿಕ್ಷಕಿಗೆ ಬೇರೆಡೆ ಉದ್ಯೋಗ ಕೊಡಿಸುವ ಬಗ್ಗೆಯೂ ಮಾತನಾಡಿದ್ದೇನೆ. ತಪ್ಪು ಗ್ರಹಿಕೆ ಹಾಗೂ ಸಮೂಹಸನ್ನಿ ಯಿಂದ ಅಮಾಯಕರ ಜೀವನ ಹೇಗೆ ಸಂಪೂರ್ಣ ನಲುಗಿ ಹೋಗುತ್ತದೆ ಎಂಬುದಕ್ಕೆ ಈ ಶಿಕ್ಷಕಿಯ ಕುಟುಂಬವೇ ಸಾಕ್ಷಿ.

Share This Article
Leave a Comment

Leave a Reply

Your email address will not be published. Required fields are marked *