ಬೆಂಗಳೂರು: ಬೇಟಿ ಬಚಾವೋ, ಬೇಟಿ ಪಡಾವೋ ಎನ್ನುವುದು ಭ್ರಮಾತ್ಮಕ ಘೋಷಣೆಯಾಗಿ ಉಳಿದಿದೆ. ಹಿಜಬ್ ನೆಪವೊಡ್ಡಿ ಮುಸ್ಲಿಂ ಹೆಣ್ಣುಮಕ್ಕಳ ಶಿಕ್ಷಣಕ್ಕೆ ತಡೆ ಒಡ್ಡಲಾಗುತ್ತಿದೆ ಎಂದು ಕರಾವಳಿಯಲ್ಲಿ ಎದ್ದಿರುವ ಹಿಜಬ್ ವಿವಾದಕ್ಕೆ ಜಮ್ಮುಕಾಶ್ಮೀರದ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಟ್ವಿಟ್ಟರ್‌ನಲ್ಲಿ ಟ್ವೀಟ್ ಮಾಡಿ ಕಿಡಿಕಾರಿದ್ದಾರೆ.
Advertisement
ಟ್ವೀಟ್‍ನಲ್ಲಿ ಏನಿದೆ?:
ಭಾರತದಲ್ಲಿ ಭೇಟಿ ಬಚಾವೋ, ಭೇಟಿ ಪಡಾವೋ ಎನ್ನುವುದು ಭ್ರಮಾತ್ಮಕ ಘೋಷಣೆಯಾಗಿ ಉಳಿದಿದೆ. ಹಿಜಬ್ ನೆಪವೊಡ್ಡಿ ಮುಸ್ಲಿಮ್ ಹೆಣ್ಮಕ್ಕಳ ಶಿಕ್ಷಣಕ್ಕೆ ತಡೆ ಒಡ್ಡಲಾಗುತ್ತಿದೆ. ಗಾಂಧಿ ಭಾರತವನ್ನು ಗೋಡ್ಸೆ ಭಾರತವನ್ನಾಗಿ ಪರಿವರ್ತಿಸುವ ಕೆಲಸ ಆಗುತ್ತಿದೆ ಎಂದು ಬರೆದುಕೊಂಡು ಹಿಜಬ್ ವಿವಾದದ ವೀಡಿಯೋ ಒಂದನ್ನು ಮೆಹಬೂಬಾ ಮುಫ್ತಿ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಹಿಜಬ್ ವಿವಾದ- ಹೈಕೋರ್ಟ್ ತೀರ್ಪಿನ ನಂತರ ಕ್ರಮ: ಬಿಸಿ ನಾಗೇಶ್
Advertisement
Beti bachao beti parhao is yet another hollow slogan. Muslims girls are being denied the right to education simply because of their attire. Legitimising the marginalisation of muslims is one more step towards converting Gandhi’s India into Godhse’s India. https://t.co/yxrm4NqKGc
— Mehbooba Mufti (@MehboobaMufti) February 3, 2022
Advertisement
Advertisement
ಇತ್ತ ಕರಾವಳಿಯಲ್ಲಿ ಹಿಜಬ್ ವಿವಾದ ತೀವ್ರ ಸ್ವರೂಪ ಪಡೆದಿದೆ. ಕಳೆದೊಂದು ತಿಂಗಳಿಂದ ಈ ವಿವಾದ ಹೆಚ್ಚಾಗುತ್ತಿದ್ದರೂ, ರಾಜ್ಯ ಸರ್ಕಾರ ಮಾತ್ರ ಈವರೆಗೂ ಖಡಕ್ ನಿಲುವು ತಳೆದಂತೆ ಕಂಡುಬರ್ತಿಲ್ಲ. ಉಡುಪಿ ಕಾಲೇಜಿನ ಆಡಳಿತ ಮಂಡಳಿ, ಸಮವಸ್ತ್ರ ಎಂದರೇನು ಎಂದು ಪ್ರಶ್ನೆ ಕೇಳಿ ಪತ್ರ ಬರೆದು ಪಿಯು ಬೋರ್ಡ್ ನಿಂದ ಉತ್ತರ ಬಯಸಿದೆ. ಈ ಬಗ್ಗೆ ಉತ್ತರಿಸಿದ ಪಿಯು ಬೋರ್ಡ್ ಈ ಬಗ್ಗೆ ಸರ್ಕಾರ ಸಮಿತಿಯೊಂದನ್ನು ರಚಿಸಿ ತೀರ್ಮಾನ ಕೈಗೊಳ್ಳಲಿದೆ. ಅಲ್ಲಿಯವರೆಗೆ ಹಿಜಬ್ ತೊಟ್ಟು ಕಾಲೇಜಿಗೆ ಬರಲು ಅವಕಾಶ ಇಲ್ಲ. ಯಥಾಸ್ಥಿತಿ ಕಾಪಾಡಿ ಎಂದು ಹೇಳಿದೆ. ಪಿಯು ಬೋರ್ಡ್ ಈ ಉತ್ತರ ನೀಡಿ ಎರಡು ವಾರ ಕಳೆದಿದೆ. ಆದ್ರೆ ಈವರೆಗೂ ಸಮಿತಿ ರಚನೆ ಆಗಿಲ್ಲ. ಈ ನಡುವೆ ಹಿಜಬ್ ವಿವಾದದ ಪ್ರಕರಣವು ಹೈಕೋಟ್‍ನಲ್ಲಿದೆ. ತೀರ್ಪು ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದಾರೆ. ಇದನ್ನೂ ಓದಿ: ನಿಮಗೆ ಪ್ರವೇಶವಿಲ್ಲ – ಹಿಜಬ್ ಧರಿಸಿದ್ದ ವಿದ್ಯಾರ್ಥಿನಿಯರನ್ನು ಗೇಟ್‍ನಲ್ಲೇ ತಡೆದ ಪ್ರಿನ್ಸಿಪಾಲ್