ಬೆಂಗಳೂರು: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಬಗ್ಗೆ ಆಕ್ಷೇಪಾರ್ಹ ಪದ ಬಳಕೆ ಮಾಡಿದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಬಿಜೆಪಿ ಎಂಎಲ್‌ಸಿ ಸಿ.ಟಿ.ರವಿಗೆ ಬಿಗ್ ರಿಲೀಫ್ ಸಿಕ್ಕಿದೆ. ತಕ್ಷಣವೇ ಸಿ.ಟಿ.ರವಿ (C.T.Ravi) ಬಿಡುಗಡೆ ಮಾಡುವಂತೆ ಹೈಕೋರ್ಟ್ ಆದೇಶ ಹೊರಡಿಸಿದೆ.
ಪ್ರಕರಣದ ವಿಚಾರಣೆ ನಡೆಸಿದ ನ್ಯಾ. ಎಂ.ಜಿ.ಉಮಾ ನೇತೃತ್ವದ ಪೀಠವು ಆರೋಪಿಯನ್ನು ತಕ್ಷಣವೇ ಬಿಡುಗಡೆ ಮಾಡಿ. ಸಿ.ಟಿ.ರವಿ ಈಗ ಎಲ್ಲಿದ್ದಾರೋ ಅಲ್ಲಿಯೇ ಬಿಡುಗಡೆ ಮಾಡಿ ಎಂದು ಮಧ್ಯಂತರ ಆದೇಶ ನೀಡಿದ್ದಾರೆ. ಅಲ್ಲದೇ, ತನಿಖೆಗೆ ಸಹಕರಿಸಬೇಕು ಎಂದು ಸಿ.ಟಿ.ರವಿಗೆ ಷರತ್ತನ್ನು ಕೋರ್ಟ್ ವಿಧಿಸಿದೆ. ಇದನ್ನೂ ಓದಿ: ಸಿ.ಟಿ ರವಿ ಕೊಲೆಗಡುಕ ಅಂತ ಹೇಳಿರೋ ಲಕ್ಷ್ಮಿ ಹೆಬ್ಬಾಳ್ಕರ್, ಬೆಂಬಲಿಗರನ್ನು ಬಂಧಿಸಬೇಕು – ಜನಾರ್ದನ ರೆಡ್ಡಿ
Advertisement
Advertisement
ಸಿ.ಟಿ.ರವಿ ಪರ ವಕೀಲ ಅಶೋಕ್ ಹಾರನಹಳ್ಳಿ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ಪರ ವಕೀಲ ಶ್ಯಾಮ್‌ಸುಂದರ್ ವಾದ ಮಂಡಿಸಿದರು.
Advertisement
ಆರೋಪಿ ಇನ್ನೂ ಪೊಲೀಸ್ ಕಸ್ಟಡಿಯಲ್ಲಿ ಇದ್ದಾರೆ. ಜಾಮೀನು ಅರ್ಜಿ ವಿಚಾರಣೆ ಮಾಡಲು ಸಾಧ್ಯವಿಲ್ಲ. ಇವತ್ತು ಬೆಳಗಾವಿ ಕೋರ್ಟ್ಗೆ ಹಾಜರುಪಡಿಸಿದರು. ಬಳಿಕ ಜನಪ್ರತಿನಿಧಿಗಳ ನ್ಯಾಯಾಲಯದ ವ್ಯಾಪ್ತಿಯಲ್ಲಿ ಪ್ರಕರಣ ಇದೆ ಅಂತ ಬೆಂಗಳೂರಿಗೆ ಕಳಿಸಿದ್ದಾರೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಪರ ವಕೀಲ ಶ್ಯಾಮ್‌ಸುಂದರ್ ವಾದಿಸಿದರು.
Advertisement
ಸಿ.ಟಿ.ರವಿ ಪರ ವಕೀಲ ಅಶೋಕ್ ವಾದ ಮಂಡಿಸಿ, 4 ಪುಟಗಳ ದೂರಿನ ಪ್ರತಿ ಇದೆ. ಆಕ್ಷೇಪಣಾ ಪದ ಬಳಕೆ ಮಾಡಿದ್ದಾರೆ ಅಂತ ಆಪ್ತ ಸಹಾಯಕ ಮೂಲಕ ದೂರು ನೀಡಿದ್ದಾರೆ. ದೂರಿನಲ್ಲಿ ದೂರುದಾರರ ಸಹಿ ಇಲ್ಲ. ಲಕ್ಷ್ಮಿ ಹೆಬ್ಬಾಳ್ಕರ್ ಸಹಿ ಇಲ್ಲ ಎಂದು ದೂರಿನ ಪ್ರತಿ ಓದಿದರು. ಇದನ್ನೂ ಓದಿ: ಸಿ.ಟಿ ರವಿ ಕೇಸ್ ಬೆಂಗಳೂರಿಗೆ ಶಿಫ್ಟ್ – ಬೆಳಗಾವಿ ಕೋರ್ಟ್ ಆದೇಶ
ದಸ್ತಗಿರಿ ಮಾಡದೇ ಇದ್ದಲ್ಲಿ ಎಂಬುದನ್ನು ದೂರಿನಲ್ಲಿ ದೂರುದಾರರೇ ಬರೆದಿದ್ದಾರೆ. ಸಾಕ್ಷಿಗಳ ಮೇಲೆ ಪ್ರಭಾವ ಬೀರುತ್ತಾರೆ ಅಂತ ಹೇಳಿದ್ದಾರೆ. ಸಾಕ್ಷಿಗಳು ಎಲ್ಲಾ ಆಡಳಿತ ಪಕ್ಷದವರೇ ಆಗಿದ್ದಾರೆ. ಅವರ ಮೇಲೆ ಪ್ರಭಾವ ಬೀರುತ್ತಾರೆ ಎನ್ನಲಾಗಿದೆ. ನೋಟಿಸ್ ನೀಡುವ ವಿಚಾರದಲ್ಲಿ ಸಹಿ ಮಾಡಿಲ್ಲ ಅರೆಸ್ಟ್ ಮಾಡಿದ್ದಾರೆ. 19ನೇ ತಾರೀಖು ನೋಟಿಸ್ ನೀಡಿದ್ದಾರೆ. 19ನೇ ತಾರೀಖು ವಿಚಾರಣೆ ನೋಟಿಸ್ ನೀಡಿದ್ದಾರೆ. ತಕ್ಷಣವೇ ಅರೆಸ್ಟ್ ಮಾಡಿದ್ದಾರೆ. ಖಾನಾಪುರದ ಬಳಿ ಅರೆಸ್ಟ್ ಮಾಡಲಾಗಿದೆ ಅಂತ ಉಲ್ಲೇಖ ಮಾಡಿದ್ದಾರೆ. ಸುವರ್ಣಸೌಧದಲ್ಲಿ ಅರೆಸ್ಟ್ ಮಾಡಿದ್ದಾರೆ. ಖಾನಾಪುರ ಅಂತ ಅರೆಸ್ಟ್ ಮೊಮೋದಲ್ಲಿ ಇದೆ. ಅರೆಸ್ಟ್ ಮೆಮೋದಲ್ಲಿ ಆರೋಪಿತ ನ್ಯಾಯಾಲಯಕ್ಕೆ ಹಾಜರಾಗೋದಿಲ್ಲ ಪರಾರಿ ಆಗುತ್ತಾರೆ ಅಂತ ಪೊಲೀಸರು ಬರೆದಿದ್ದಾರೆ. ಒಂದೇ ದಿನಕ್ಕೆ ಎಲ್ಲಾ ವಿಚಾರದ ಅಂತಿಮ ತೀರ್ಮಾನಕ್ಕೆ ಪೊಲೀಸರು ಬಂದಿದ್ದಾರೆ. ದೂರುದಾರರ ಸಹಿ ಇಲ್ಲದೇ ಇದ್ದಾಗ ಕೋರ್ಟ್ ಆದೇಶಗಳು ಏನು ಹೇಳುತ್ತವೆ ಎನ್ನೋದರ ಬಗ್ಗೆ ವಕೀಲ ಅಶೋಕ್ ವಾದ ಮಂಡಿಸಿದರು. ಈ ಪ್ರಕರಣದಲ್ಲಿ ಮಧ್ಯಂತರ ಜಾಮೀನು ನೀಡಬಹುದು ಎಂದು ಧನಂಜಯ್ ಪೀಠದ ಆದೇಶ ಉಲ್ಲೇಖಿಸಿ ವಾದಿಸಿದರು.
ಸದನದಲ್ಲಿ ಏನನ್ನಾದರೂ ಮಾತಾಡಲು ಅವಕಾಶ ಇದೆ ಎಂದು ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನು ಜನಪ್ರತಿನಿಧಿಗಳಿಗೆ ಇರುವ ಅಧಿಕಾರದ ಬಗ್ಗೆ ಕೋರ್ಟ್ ಗಮನಕ್ಕೆ ತಂದರು. ಜಸ್ಟೀಸ್ ಚಂದ್ರಚೂಡ್ ನೀಡಿದ ಆದೇಶ ಓದಿದ ಸಿ.ಟಿ.ರವಿ ಪರ ವಕೀಲರು, ಹೀಗೆ ಮಾಡಿದ್ರೆ ಪ್ರತಿಯೊಬ್ಬರು ದೂರು ನೀಡ್ತಾರೆ. ಪ್ರತಿಯೊಬ್ಬರೂ ಕೂಡ ಮಾನನಷ್ಟ ಮೊಕದ್ದಮೆ ಹಾಕ್ತಾರೆ. ಎಲ್ಲರೂ ಕೂಡ ಇದನ್ನೇ ಮಾಡಿದ್ರೆ ಎಷ್ಟು ಕೇಸ್ ದಾಖಲು ಮಾಡಬಹುದು. ಲಂಚದ ವಿಚಾರ ಬಿಟ್ಟು ಎಲ್ಲ ವಿಚಾರದ ಬಗ್ಗೆ ಮಾತನಾಡಬಹುದಾಗಿದೆ ಎಂದು ಸುಪ್ರೀಂ ಕೋರ್ಟ್ ಆದೇಶ ಉಲ್ಲೇಖಿಸಿ ತಮ್ಮ ವಾದ ಮುಕ್ತಾಯ ಮಾಡಿದರು. ಇದನ್ನೂ ಓದಿ: ಸಿ.ಟಿ ರವಿ ಅಶ್ಲೀಲ ಪದ ಬಳಸಿದ್ದರೆ ಅದನ್ನ ನಾನೂ ಸಮರ್ಥಿಸಲ್ಲ – ಹೆಚ್‌ಡಿಕೆ
ಲಕ್ಷ್ಮಿ ಹೆಬ್ಬಾಳ್ಕರ್ ಪರ ವಕೀಲ ಶ್ಯಾಮ್‌ಸುಂದರ್ ವಾದಿಸಿ, ಮಹಿಳೆಗೆ ಪ್ರಾಸ್ಟಿಟ್ಯೂಟ್ ಅಂತ 10 ಬಾರಿ ಕೂಗಿದ್ದಾರೆ. ಒಬ್ಬ ಮಹಿಳೆಗೆ ಒಮ್ಮೆ ಅಲ್ಲ 10 ಬಾರಿ ಕೂಗಿದ್ದಾರೆ. ಅದು ಸದನದಲ್ಲಿ ಕೂಗಿರೋದು ಶೋಭೆ ತರುವಂತದ್ದಲ್ಲ. ಆರೋಪಿ ಹಾಜರುಪಡಿಸದೇ ಜಾಮೀನು ಪಡೆಯಲು ಸಾಧ್ಯವಿಲ್ಲ. ತನಿಖಾಧಿಕಾರಿ ಕೋರ್ಟ್ಗೆ ಎಫ್‌ಐಆರ್ ವರ್ಗಾವಣೆ ಕಳಿಸಿದ್ದಾರೆ. ಬೆಳಗಾವಿಯ ಹಾಜರುಪಡಿಸಿದಾಗ ಬೆಂಗಳೂರಿಗೆ ಹೇಳಿದ್ದಾರೆ. ಆರೋಪಿಯನ್ನು ಮ್ಯಾಜಿಸ್ಟ್ರೇಟ್ ಕೋರ್ಟ್ಗೆ ಹಾಜರುಪಡಿಸಬೇಕು. ಬೆಳಗಾವಿಯ ಕೋರ್ಟ್ ಮುಂದೆ ಹಾಜರುಪಡಿಸಿದಾಗ ಜಾಮೀನು ಅರ್ಜಿ ಸಲ್ಲಿಸಲಾಗಿದೆ. ಮ್ಯಾಜಿಸ್ಟ್ರೇಟ್ ಕೋರ್ಟ್ ಮುಂದೆ ಕೂಡ ಜಾಮೀನು ಅರ್ಜಿ ಪೆಂಡಿಂಗ್ ಇದೆ. ಹೀಗಿರುವಾಗ ಸೆಷನ್ಸ್ ಕೋರ್ಟ್ಗೆ ಹೇಗೆ ಅರ್ಜಿ ಸಲ್ಲಿಸಿದ್ದಾರೆ. ಒಂದೇ ಸಮಯದಲ್ಲಿ ಎರಡು ಕೋರ್ಟ್ನಲ್ಲಿ ಜಾಮೀನು ಅರ್ಜಿ ಸಲ್ಲಿಸಲು ಅವಕಾಶ ಎಲ್ಲಿದೆ ಎಂದು ವಾದಿಸಿದರು.
ಯಾವುದೇ ಮಹಿಳೆಗೆ ಅವಮಾನ ಮಾಡುವುದನ್ನ ಯಾವ ಕಾನೂನು ಕೂಡ ಸಹಿಸುವುದಿಲ್ಲ. ಮಹಿಳೆಯರ ಬಗ್ಗೆ ಅವಹೇಳನ ಮಾಡುವುದನ್ನ ಸಂವಿಧಾನದ ಯಾವ ಕಾನೂನು ಸಹಿಸುವುದಿಲ್ಲ ಎಂದು ಶ್ಯಾಮ್‌ಸುಂದರ್ ತಮ್ಮ ವಾದ ಮುಗಿಸಿದರು. ವಾದ-ಪ್ರತಿವಾದ ಆಲಿಸಿದ ಕೋರ್ಟ್, ಆರೋಪಿ ಬಿಡುಗಡೆ ಮಾಡುವಂತೆ ಮಧ್ಯಂತರ ಆದೇಶ ಹೊರಡಿಸಿದೆ.