ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಕೋರ್ಟ್ ವ್ಯಾಪ್ತಿ ಬಿಟ್ಟು ಹೊರ ಹೋಗದಂತೆ ನಟ ದರ್ಶನ್‌ಗೆ (Darshan) ವಿಧಿಸಿದ್ದ ಷರತ್ತು ಸಡಿಲಗೊಂಡಿದೆ. ಈ ಮೂಲಕ ದರ್ಶನ್ ದೇಶಾದ್ಯಂತ ಸಂಚಾರಕ್ಕೆ ಅವಕಾಶ ಕೊಡಲಾಗಿದೆ.
ಹೈಕೋರ್ಟ್‌ನ ವಿಶ್ವಜಿತ್ ಶೆಟ್ಟಿ ಅವರ ಏಕಸದಸ್ಯ ಪೀಠ ಆದೇಶ ನೀಡಿದ್ದು, ದೇಶಾದ್ಯಂತ ಓಡಾಡಲು ಅವಕಾಶ ನೀಡಿದೆ. ವಿದೇಶಕ್ಕೆ ಹೋಗುವಂತಿಲ್ಲ ಅಂತಾ ಆದೇಶ ಹೊರಡಿಸಿದೆ. ಇದನ್ನೂ ಓದಿ: ಸಿನಿಮಾ ಶೂಟಿಂಗ್‌ಗೆ ಸಜ್ಜಾದ ನಟ ದರ್ಶನ್ – ಅವಕಾಶ ಕೋರಿ ಮುಂದಿನ ವಾರ ಕೋರ್ಟ್ ಮೊರೆ
Advertisement
Advertisement
ದರ್ಶನ್ ಹೈಕೋರ್ಟ್‌ಗೆ ಕೊಟ್ಟ ಕಾರಣಗಳೇನು?
* ವೃತ್ತಿಯಲ್ಲಿ ನಾನೊಬ್ಬ ನಟ ಹಾಗೂ ಮೈಸೂರಿನ ಖಾಯಂ ನಿವಾಸಿ
* ವೃತ್ತಿಪರ ಕಾರಣಗಳು ಹಾಗೂ ಅನಾರೋಗ್ಯದ ಕಾರಣದಿಂದ ಬೆಂಗಳೂರಿನ ಹೊರಗೆ ಹೋಗುವುದು ಯಾವಾಗಲೂ ಅವಶ್ಯವಿರುತ್ತದೆ
* ಆದರೆ, ಈ ಕೋರ್ಟ್ ವಿಚಾರಣಾ ನ್ಯಾಯಲಯದ ವ್ಯಾಪ್ತಿ ಬಿಡದಂತೆ ಷರತ್ತು ವಿಧಿಸಿದೆ
* ಇದರಿಂದಾಗಿ ವಿಚಾರಣಾ ನ್ಯಾಯಾಲಯದಲ್ಲಿ ಪ್ರತಿ ಬಾರಿ ಅನುಮತಿ ಪಡೆಯುವುದು ಕಠಿಣವಾಗಿದೆ
* ನನಗೆ ಕೇವಲ ರಾಜ್ಯದ ಹೊರಗೆ ಹೋಗುವುದಲ್ಲದೇ ವಿದೇಶಕ್ಕೆ ಹೋಗುವುದು ಅವಶ್ಯವಿದೆ
* ಇಷ್ಟು ಅಂಶಗಳನ್ನ ನ್ಯಾಯಾಲಯದ ಮುಂದಿಟ್ಟಿದ್ದ ನಟ ದರ್ಶನ್
* ಸದ್ಯ ದರ್ಶನ್ ಅರ್ಜಿಯನ್ನ ಪುರಸ್ಕರಿಸಿರುವ ಹೈಕೋರ್ಟ್ ಏಕಸದಸ್ಯ ಪೀಠ
* ದೇಶದಾದ್ಯಂತ ಓಡಾಡಲು ಅನುಮತಿ ನೀಡಿ ಆದೇಶ ನೀಡಿರುವ ಕೋರ್ಟ್