– ಮೈದಾನದಲ್ಲಿ ಐತಿಹಾಸಿಕ ಗಣೇಶೋತ್ಸವಕ್ಕೆ ಕ್ಷಣಗಣನೆ
ಬೆಂಗಳೂರು: ಚಾಮರಾಜಪೇಟೆ ಮೈದಾನದಲ್ಲಿ ಗಣೇಶನ ಪ್ರತಿಷ್ಠಾಪನೆಗೆ ಇದ್ದ ಸಂಕಷ್ಟದ ಕಾರ್ಮೋಡ ಕರಗಿ ಈಗ ಅಲ್ಲಿ ಗಣಪನ ಜಾತ್ರೆಗೆ ಸಿದ್ಧತೆ ನಡೆದಿದೆ. ಮೊದಲ ಬಾರಿಯ ಐತಿಹಾಸಿಕ ಗಣೇಶೋತ್ಸವಕ್ಕೆ ಎಲ್ಲಾ ಸಿದ್ಧತೆ ನಡೆಯುತ್ತಿದೆ.
Advertisement
ಹೈಕೋರ್ಟ್ ದ್ವಿಸದಸ್ಯ ಪೀಠ ಗಣೇಶೋತ್ಸವ ಆಚರಣೆ ನಿರ್ಧಾರವನ್ನು ಸರ್ಕಾರದ ವಿವೇಚನೆಗೆ ಬಿಟ್ಟ ಹಿನ್ನೆಲೆಯಲ್ಲಿ ಹಿಂದೂ ಸಂಘಟನೆಗಳು ಉತ್ಸವ ಆಚರಣೆಗೆ ತಯಾರಿ ನಡೆಸಿವೆ. ಚಾಮರಾಜಪೇಟೆ ನಾಗರೀಕ ಒಕ್ಕೂಟ, ಬೆಂಗಳೂರು ಉತ್ಸವ ಸಮಿತಿ ಹಾಗೂ ಹಿಂದೂ ಸಂಘಟನೆಗಳು ಹಬ್ಬದ ಉಸ್ತುವಾರಿ ವಹಿಸಲಿದೆ.
Advertisement
Advertisement
ಪ್ಲ್ಯಾನ್ ಏನು?
ಇಡೀ ರಾಜ್ಯದ ಗಮನ ಸೆಳೆದ ಚಾಮರಾಜಪೇಟೆಯಲ್ಲಿ ಮೂರು ದಿನ ಅದ್ಧೂರಿ ವಿಜೃಂಭಣೆಯಿಂದ ಹಬ್ಬ ಆಚರಣೆಗೆ ಸಿದ್ಧತೆ ನಡೆದಿದೆ. ಐತಿಹಾಸಿಕವಾಗಿ ಮೊದಲ ಬಾರಿ ಗಣಪನ ಪ್ರತಿಷ್ಠಾಪನೆ ಮಾಡುವುದರಿಂದ ಗಣಪನ ಪ್ರತಿಭಟನೆಗೂ ಮುನ್ನಾ ಮಹಾ ಯಜ್ಞ ನಡೆಯಲಿದೆ. 108 ಪುರೋಹಿತರ ನೇತೃತ್ವದಲ್ಲಿ ಹೋಮ ಹವನ ನಡೆಸಿ ಸ್ಥಳವನ್ನು ಶುದ್ಧೀಕರಣ ಮಾಡಲಾಗುತ್ತದೆ. ಸ್ಥಳವನ್ನು ಶುದ್ಧೀಕರಣ ಮಾಡಿದ ಬಳಿಕ ಅದ್ದೂರಿ ಪೂಜೆಗೆ ಸಿದ್ಧತೆ ನಡೆಯುತ್ತದೆ. ಮೂರು ದಿನಗಳ ಕಾಲ ಸಂಜೆ ಅದ್ಧೂರಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡಲಾಗುತ್ತದೆ. ಇದನ್ನೂ ಓದಿ: ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆ ಮಾಡೇ ಮಾಡ್ತೀವಿ – ಗುಂಡು ಹಾರಿಸ್ತೀರಾ ಹಾರಿಸಿ: ಮುತಾಲಿಕ್
Advertisement
ವಿಸರ್ಜನೆ ಹೇಗೆ?
ಮೂರನೇ ದಿನಕ್ಕೆ ಗಣಪನ ಮೆರವಣಿಗೆಗೆ ಅದ್ಧೂರಿ ಪ್ಲ್ಯಾನ್ ಮಾಡಿಕೊಳ್ಳಲಾಗಿದೆ. ಸರ್ಕಾರ ಹಾಗೂ ಖಾಕಿ ಅನುಮತಿ ನೀಡಿದರೆ ಪಾದರಾಯನಪುರ, ಗೋರಿಪಾಳ್ಯದಲ್ಲಿ ಮೆರವಣಿಗೆಗೂ ಸಜ್ಜಾಗಿದೆ.
ಇಂದು ಅಂತಿಮ ನಿರ್ಧಾರ:
ಚಾಮರಾಜಪೇಟೆ ಮೈದಾನದಲ್ಲಿ ಗಣೇಶೋತ್ಸವ ಆಚರಣೆ ವಿಚಾರಕ್ಕೆ ನಡೆದ ಗೊಂದಲಕ್ಕೆ ಹೈಕೋರ್ಟ್ ಫುಲ್ ಸ್ಟಾಪ್ ಹಾಕಿದ ಬೆನ್ನಲ್ಲೇ ಸರ್ಕಾರ ಕೂಡಾ ಫುಲ್ ಆಕ್ಟೀವ್ ಆಗಿದೆ. ಗಣೇಶೋತ್ಸವ ಅನುಮತಿ ಬಗ್ಗೆ ಸರ್ಕಾರ ನಿರ್ಧಾರ ಮಾಡಿ ಎಂದ ಹೈಕೋರ್ಟ್ ಆದೇಶ ಪಾಲನೆಗೆ ಸರ್ಕಾರ ನಿರ್ಧಾರ ಮಾಡಿದೆ. ಈ ಹಿನ್ನೆಲೆಯಲ್ಲಿ ಗಣೇಶೋತ್ಸವ ಆಚರಣೆ ವಿವಿಧ ಸಂಘಟನೆಗಳು ಮಾಡಿದ್ದ ಮನವಿಗಳ ಚರ್ಚೆ ಇಂದು ನಡೆಯಲಿದೆ. ಅಂತಿಮವಾಗಿ ಚರ್ಚೆ ಬಳಿಕ ಗಣೇಶೋತ್ಸವಕ್ಕೆ ಅನುಮತಿ ಕೊಡುವ ಬಗ್ಗೆ ಸರ್ಕಾರ ಘೋಷಣೆ ಮಾಡುವ ಸಾಧ್ಯತೆ ಇದೆ.