ಬೆಂಗಳೂರು: ಎಸಿಬಿ ಎಡಿಜಿಪಿ ವಿರುದ್ಧ ಹೈಕೋರ್ಟ್ ನ್ಯಾಯಮೂರ್ತಿ ಸಂದೇಶ್ ಮತ್ತೆ ಗರಂ ಆಗಿದ್ದಾರೆ. ಎಸಿಬಿಗೆ ಕಳಂಕಿತ ಅಧಿಕಾರಿಗಳನ್ನು ನಿಯೋಜನೆ ಮಾಡದಂತೆ ಸರ್ಕಾರಕ್ಕೆ ನಿರ್ದೇಶನ ನೀಡಿದ್ದಾರೆ. ಎಸಿಬಿಗೆ ಅಧಿಕಾರಿಗಳ ನಿಯೋಜನೆ ವೇಳೆ ಯಾವುದೇ ಪ್ರಭಾವಕ್ಕೆ ಒಳಗಾಗದಂತೆಯೂ ಸೂಚನೆ ನೀಡಿದ್ದಾರೆ.
ತಮಗೆ ಬಂದ ಬೆದರಿಕೆ ವಿಚಾರವನ್ನು ಕೋರ್ಟ್ ಆದೇಶದಲ್ಲಿ ಬರೆಸಿದ್ದಾರೆ. ಜುಲೈ 1ರಂದು ತಮಗೆ ಸಹ ನ್ಯಾಯಮೂರ್ತಿಗಳು ಹೇಳಿದ್ದೇನು ಎಂಬುದನ್ನು ಆದೇಶದಲ್ಲಿ ಇಂಚಿಂಚಾಗಿ ಬರೆಸಿದ್ದಾರೆ. ಆದರೆ ತಮ್ಮ ಬಳಿ ಮಾತನಾಡಿದ ಸಹ ನ್ಯಾಯಮೂರ್ತಿಗಳ ಹೆಸರನ್ನು ನ್ಯಾಯಮೂರ್ತಿಗಳು ಬಹಿರಂಗಪಡಿಸಲಿಲ್ಲ.
Advertisement
Advertisement
ಈ ವೇಳೆ, ನ್ಯಾಯಮೂರ್ತಿಗಳ ಹೆಸರನ್ನು ಹೇಳಿ ಎಂದು ಎಡಿಜಿಪಿ ಪರ ಕೇಳಿದ್ದಕ್ಕೆ ನ್ಯಾಯಮೂರ್ತಿ ಸಂದೇಶ್ ಗರಂ ಆದರು. ನೋಡ್ರೀ ನನ್ನನ್ನ ತಪ್ಪಿಗೆ ಸಿಕ್ಕಿಸೋ ಪ್ರಯತ್ನ ಮಾಡ್ಬೇಡಿ. ನಾನು ಯಾರಿಗೆ ಅವರ ಹೆಸರನ್ನು ಹೇಳ್ಬೇಕೋ ಹೇಳಿದ್ದೇನೆ. ಓಪನ್ ಕೋರ್ಟ್ ಅಲ್ಲಿ ಹೇಳೋ ಅವಶ್ಯಕತೆ ಇಲ್ಲ. ನ್ಯಾಯಾಲಯದ ಸ್ವಾತಂತ್ರ್ಯದ ಮೇಲೆ ಬೆದರಿಕೆ ಹಾಕಿದ್ದಾರೆ. ಅದಕ್ಕೆ ನಾನು ತನಿಖೆಗೆ ಮನವಿ ಮಾಡುತ್ತೇನೆ. ಅದಕ್ಕೆ ಪ್ರಭಾವ ಬೀರಲು ನೊಡಿದವರ ಸರ್ವೀಸ್ ರೆಕಾರ್ಡ್ ಕೇಳಿದ್ದೇನೆ ಎಂದರು. ಈ ಸಂದರ್ಭದಲ್ಲಿ ಎಡಿಜಿಪಿ ಪರ ವಕೀಲ ಅಶೋಕ್ ಹಾರ್ನಳ್ಳಿಗೆ ವಾದ ಮಂಡಿಸಲು ನ್ಯಾಯಮೂರ್ತಿಗಳು ಬಿಡಲಿಲ್ಲ.
Advertisement
ಸೀಮಂತ್ ಕುಮಾರ್ ವಿರುದ್ಧದ ದಾಳಿಗೆ ಸಂಬಂಧಿಸಿ ಸಿಬಿಐ ವಕೀಲರು ಕೋರ್ಟ್‍ಗೆ ವರದಿ ನೀಡಿದರು. ಈ ವೇಳೆ, ಅಕ್ರಮ ಗಣಿಗಾರಿಕೆ, ಅದಿರು ಸಾಗಾಟ ವಿಚಾರಕ್ಕೆ ಏನಾದ್ರೂ ಕ್ರಮಕೈಗೊಂಡಿದ್ಯಾ? ಎಸ್‍ಪಿ ಅವರ ಮನೆಯ ಮೇಲೆ ದಾಳಿ ಆಗಿತ್ತಲ್ವಾ? ಆಗ ಕ್ರಮ ಏನಾಗಿತ್ತು? ಈಗ ಯಾವ ಹಂತದಲ್ಲಿ ಪ್ರಕರಣ ಇದೆ ಎಂದು ಪ್ರಶ್ನಿಸಿದ್ರು.
Advertisement
ಐಎಎಸ್ ಅಧಿಕಾರಿ ಮಂಜುನಾಥ್ ರಕ್ಷಣೆಗೆ ಯತ್ನಿಸಿದ್ದೀರಾ ಎಂದು ಎಜಿ ಮೇಲೆಯೂ ಗರಂ ಆದರು. ಕೊನೆಗೆ ಜುಲೈ 13ಕ್ಕೆ ವಿಚಾರಣೆ ಮುಂದೂಡಿದರು. ನ್ಯಾಯಮೂರ್ತಿಗಳು ಪದೇ ಪದೇ ಎಸಿಬಿ ನಿಷ್ಕ್ರಿಯತೆ ಬಗ್ಗೆ ಪ್ರಸ್ತಾಪಿಸಿದರು. ನನಗೇನು ವೈಯಕ್ತಿಕ ಜಿದ್ದು ಇಲ್ಲ ಎಂಬುದನ್ನೂ ಸ್ಪಷ್ಟಪಡಿಸಿದರು. ಇದನ್ನೂ ಓದಿ: ಪೋರ್ಚುಗಲ್‌ಗೆ ನೀಡಿದ ವಾಗ್ದಾನದಂತೆ ಅಬು ಸಲೇಂನನ್ನು ಬಿಡುಗಡೆ ಮಾಡಿ – ಕೇಂದ್ರಕ್ಕೆ ಸುಪ್ರೀಂ
ಈ ಮಧ್ಯೆ ಲೋಕಾಯುಕ್ತ ವಿಶೇಷ ನ್ಯಾಯಾಲಯ ಐಎಎಸ್ ಅಧಿಕಾರಿ ಮಂಜುನಾಥ್ ಜಾಮೀನು ಅರ್ಜಿ ವಜಾ ಮಾಡಿದೆ. ಎಸಿಬಿ ಎಡಿಜಿಪಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ. ಅರ್ಜಿ ವಿಚಾರಣೆ ನಡೆಸಿದ ಸಿಜೆಐ, ಆ ಅಧಿಕಾರಿ ಅಷ್ಟೊಂದು ಪ್ರಭಾವಿಯಾ ಎಂದು ಪ್ರಶ್ನೆ ಮಾಡಿದ್ದಾರೆ. ಮಂಗಳವಾರ ಈ ಅರ್ಜಿ ವಿಚಾರಣೆಯನ್ನು ಸಿಜೆಐ ಪೀಠ ನಡೆಸಲಿದೆ.
ನ್ಯಾ. ಹೆಚ್‍ಪಿ ಸಂದೇಶ್ ಆದೇಶದಲ್ಲಿ ಬರೆಸಿದ್ದೇನು?
ಜುಲೈ 1ರಂದು ಸಿಜೆ ನಿವೃತ್ತಿ ಹಿನ್ನೆಲೆ, ಬೀಳ್ಕೊಡುಗೆ ಸಮಾರಂಭ ಇತ್ತು. ಡಿನ್ನರ್ ವೇಳೆ ಸಹ ನ್ಯಾಯಮೂರ್ತಿಯೊಬ್ಬರು ನನ್ನ ಪಕ್ಕ ಕುಳಿತರು. ದೆಹಲಿಯಿಂದ ನನಗೆ ಒಂದು ಕರೆ ಬಂದಿದೆ ಎಂದು ಹೇಳಿದರು . ಕರೆ ಮಾಡಿದವರು ನಿಮ್ಮ ಬಗ್ಗೆ ವಿಚಾರಿಸಿದರೆಂದು ಹೇಳಿದರು. ನಾನು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿಲ್ಲವೆಂದು ಹೇಳಿದೆ. ಆದರೆ ಆ ನ್ಯಾಯಮೂರ್ತಿ ವಿಷಯ ಅಲ್ಲಿಗೇ ನಿಲ್ಲಿಸಲಿಲ್ಲ. ಎಡಿಜಿಪಿ ಉತ್ತರ ಭಾರತದವರು, ಪವರ್ ಫುಲ್ ಆಗಿದ್ದಾರೆ ಎಂದರು.