ಬೆಂಗಳೂರು: ಮದ್ಯ ಪ್ರಿಯರಿಗೆ ಸರ್ಕಾರದಿಂದ ಶಾಕ್ ಸಿಗಲಿದೆ. ಬಜೆಟ್‌ನಲ್ಲಿ (Karnataka Budget) ಪ್ರಕಟಿಸಿದಂತೆ ಜುಲೈ ಒಂದರಿಂದ ರಾಜ್ಯದಲ್ಲಿ ಮದ್ಯದ ಬೆಲೆಗಳಲ್ಲಿ (Liquor Price) ಏರಿಳಿತ ಆಗಲಿದೆ.
ಅಗ್ಗದ ಬೆಲೆಯ ಮದ್ಯಗಳು ದುಬಾರಿಯಾದರೆ ದುಬಾರಿ ಮದ್ಯಗಳ ದರದಲ್ಲಿ ಸ್ವಲ್ಪ ಪ್ರಮಾಣದ ಇಳಿಕೆ ಆಗಲಿದೆ. ಅಗ್ಗದ ಮದ್ಯದ ಬೆಲೆ ಹೆಚ್ಚಿಸುವ ಈ ಮೂಲಕ ಬಡ ಎಣ್ಣೆ ಪ್ರಿಯರ ಮೇಲೆ ಮತ್ತಷ್ಟು ಭಾರ ಹಾಕಲು ಸರ್ಕಾರ ಮುಂದಾಗಿದೆ. ಈ ಸಂಬಂಧ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಇದನ್ನೂ ಓದಿ: 31 ತಿಂಗಳ ನಂತರ ಈಡೇರಿತು ಪ್ರತಿಜ್ಞೆ- ಮುಖ್ಯಮಂತ್ರಿಯಾಗಿ ವಿಧಾನಸಭೆಗೆ ಕಾಲಿಟ್ಟ ಚಂದ್ರಬಾಬು ನಾಯ್ಡು
Advertisement
Advertisement
ಹೆಚ್‌ಡಿಕೆ ವ್ಯಂಗ್ಯ:
ಮದ್ಯದ ದರ ಇಳಿಕೆಗೆ ಕೇಂದ್ರ ಮಂತ್ರಿ ಕುಮಾರಸ್ವಾಮಿ (HD Kumaraswamy) ವ್ಯಂಗ್ಯವಾಡಿದ್ದಾರೆ. ಈಗ ಎಣ್ಣೆ ದರ ಇಳಿಸ್ತಾರ? ಜ್ಞಾನೋದಯ ಆಗಿದ್ಯಾ ಅಂತಾ ಕಾಲೆಳೆದಿದ್ದಾರೆ. ಮದ್ಯದ ದರ ಹೆಚ್ಚಳವನ್ನು ಗ್ಯಾರಂಟಿಗಳಿಗೆ ಲಿಂಕ್ ಮಾಡಿದ್ದಾರೆ.
Advertisement
ಈ ಬಗ್ಗೆ ಮಾತನಾಡಲು ವಿಪಕ್ಷಗಳಿಗೆ ನೈತಿಕತೆ ಇಲ್ಲ ಎಂದು ಅಬಕಾರಿ ಸಚಿವ (Excise Minister) ಆರ್‌ಬಿ ತಿಮ್ಮಾಪುರ (RB Thimmapur) ಕಿಡಿಕಾರಿದ್ದಾರೆ. ಯಾವ್ಯಾವ ದರ ಎಷ್ಟು ಆಗುತ್ತದೆ ಎಂಬುದನ್ನು ತಿಳಿಯಲು ಜುಲೈ 1ರವರೆಗೆ ಕಾದು ನೋಡಿ ಎಂದಿದ್ದಾರೆ. ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆಗೆ ಸಂಚು ರೂಪಿಸಿದ್ದೇ ಪವಿತ್ರಾಗೌಡ – ಹೊಸ ರಿಮ್ಯಾಂಡ್ ಕಾಪಿಯಲ್ಲಿ ಏನಿದೆ?