ಹುಬ್ಬಳ್ಳಿ: 31 ವರ್ಷದ ಬಳಿಕ ರಾಮಜನ್ಮಭೂಮಿ (Ram Janambhoomi) ಹೋರಾಟದ ಪ್ರಕರಣಕ್ಕೆ ಸರ್ಕಾರ ಉದ್ದೇಶಪೂರ್ವಕವೇ ಮರುಜೀವ ನೀಡಿದೆ ಎಂಬ ಗಂಭೀರ ಆರೋಪ ಈಗ ಕೇಳಿ ಬಂದಿದೆ.
ಡಿಸೆಂಬರ್ ಮೊದಲ ವಾರದಿಂದಲೇ 1992 ಪ್ರಕರಣದ ಆರೋಪಿಗಳ ಮಾಹಿತಿ ಪೋಲಿಸರು (Police) ಮುಂದಾಗಿದ್ದರು ಎಂಬ ವಿಚಾರ ಈಗ ಪತ್ತೆಯಾಗಿದೆ.
Advertisement
Advertisement
ಇದೊಂದು ಸಾಮಾನ್ಯ ಕೇಸ್ ಎಂದು ಸರ್ಕಾರ ಮತ್ತು ಪೊಲೀಸರು ಹೇಳುತ್ತಿದ್ದಾರೆ. ಹಳೇ ಪ್ರಕರಣಗಳನ್ನು ಇತ್ಯರ್ಥಗೊಳಿಸುವಾಗ ಆರೋಪಿಗಳನ್ನು ಬಂಧನ ಮಾಡಲಾಗಿದೆ. ಈ ಸಂದರ್ಭದ ವೇಳೆ ಬಂಧನವಾಗಿದ್ದು ಕಾಕಾತಾಳೀಯ ಎಂದು ಗೃಹ ಸಚಿವ ಪರಮೇಶ್ವರ್ (Parameshwar) ಹೇಳಿಕೆ ನೀಡಿದ್ದರು. ಇದನ್ನೂ ಓದಿ: Ram Mandir: ರಾಮಮಂದಿರ ಉದ್ಘಾಟನೆಯಂದು ಇಡೀ ದಿನ ಪ್ರಧಾನಿ ಮೋದಿ ಉಪವಾಸ!
Advertisement
ಸರ್ಕಾರ ಏನೇ ಹೇಳಿದ್ದರೂ ಪ್ರಕರಣದ 11ನೇ ಆರೋಪಿ ದಿವಂಗತ ಅಶೋಕ್ ವಿಠ್ಠಲ ಬದ್ದಿ ಕುಟುಂಬಸ್ಥರಿಗೆ ಡಿ.9 ರಂದೇ ಕರೆ ಮಾಡಿ ವಿಚಾರ ಸಂಗ್ರಹಿಸಿದ್ದರು.
Advertisement
ಡಿಸೆಂಬರ್ 8ಕ್ಕೆ ದಿ.ಅಶೋಕ್ ಬದ್ದಿ ಮಗ ವೆಂಕಟೇಶ್‌ಗೆ ಕಾಲ್ ಮಾಡಿದ್ದರು. ಈ ವೇಳೆ ತಂದೆಯವರು ಮೃತಪಟ್ಟ ವಿಚಾರವನ್ನು ವೆಂಕಟೇಶ್ ತಿಳಿಸಿದ್ದರು. ತಂದೆಯವರು ಮೃತಪಟ್ಟ ವಿಚಾರವನ್ನು ತಿಳಿಸಿದ್ದರೂ ಪೊಲೀಸರು ಮರಣ ಪ್ರಮಾಣ ಪತ್ರ ನೀಡುವಂತೆ ಸೂಚಿಸಿದ್ದಾರೆ.
ಅಚ್ಚರಿಯ ವಿಷಯ ಏನೆಂದರೆ ಅಶೋಕ ಬದ್ದಿ ಬದುಕಿದ್ದಾಗ ಪೊಲೀಸರ ಜೊತೆಗೆ ನಿಕಟ ಸಂಪರ್ಕ ಹೊಂದಿದ್ದರು. ಆಗ ಯಾರು ಸಹ ಪ್ರಕರಣದ ಬಗ್ಗೆ ಮಾತನಾಡಿರಲಿಲ್ಲ. ಈಗ ಏಕಾಏಕಿ ಬಂದು ಕೇಸ್ ಅಂತ ಹೇಳಿದರ ಉದ್ದೇಶ ಏನು? ಮರಣ ಪ್ರಮಾಣ ಪತ್ರ ನೀಡಬೇಕು ಎಂದು ಕೇಳಿದ್ದು ಯಾಕೆ? ಇದು ಉದ್ದೇಶ ಪೂರ್ವಕವಾಗಿ ಮಾಡಿರುವ ರೀ ಓಪನ್ ಪ್ರಕರಣ ಎಂದು ದಿ.ಅಶೋಕ್ ಬದ್ದಿ ಕುಟುಂಬಸ್ಥರು ಪಬ್ಲಿಕ್ ಟಿವಿ ಮುಂದೆ ಆರೋಪ ಮಾಡಿದ್ದಾರೆ.