ಗ್ಯಾರಂಟಿ ಪರಿಷ್ಕರಣೆಗೆ ರಾಜ್ಯ ಸರ್ಕಾರ ಚಿಂತನೆ; ಬಿಪಿಎಲ್ ಮಾನದಂಡ ಫಿಕ್ಸ್?

Public TV
2 Min Read
Gurantee 4

– ವಾರ್ಷಿಕ 20,000 ಕೋಟಿ ರೂ. ಉಳಿತಾಯ ಲೆಕ್ಕಾಚಾರ?
– 4 ಲಕ್ಷ ಮಹಿಳೆಯರಿಗೆ ʻಗೃಹಲಕ್ಷ್ಮಿʼ ತಲುಪಿಲ್ಲ ಏಕೆ?

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರದ ಗದ್ದುಗೆ ಹಿಡಿಯಲು ಕಾರಣವಾಗಿದ್ದ ಗ್ಯಾರಂಟಿ ಯೋಜನೆಗಳಲ್ಲಿ (Guarantee Schemes) ಮಾರ್ಪಾಡು ತರಲು ರಾಜ್ಯ ಸರ್ಕಾರ (Karnataka Government) ಚಿಂತನೆ ನಡೆಸಿದೆ. ಪಕ್ಷದ ಕೆಲ ಸಚಿವರೇ ಅಸಮಾಧಾನಗೊಂಡಿದ್ದಾರೆ. ಹೀಗಾಗಿ ಅರ್ಹ ಬಡವರಿಗೆ ಮಾತ್ರ ಗ್ಯಾರಂಟಿ ಯೋಜನೆ ಮೀಸಲಿಡಲು ಸರ್ಕಾರ ಗಂಭೀರ ಕ್ರಮಕ್ಕೆ ಮುಂದಾಗಿದೆ. ಜೊತೆಗೆ ವಾರ್ಷಿಕ 20 ಸಾವಿರ ಕೋಟಿ ರೂ. ಉಳಿತಾಯದ ಲೆಕ್ಕಾಚಾರವನ್ನೂ ಸರ್ಕಾರ ಇಟ್ಟುಕೊಂಡಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

Gurantee

ಸಂಪುಟದ ಕೆಲ ಸಚಿವರು ಹಾಗೂ ಕಾಂಗ್ರೆಸ್‌ ಹೈಕಮಾಂಡ್‌ (Congress High command) ನಾಯಕರು ಸಹ ಗ್ಯಾರಂಟಿ ಪರಿಷ್ಕರಣೆಗೆ ಒಲವು ತೋರಿದ್ದಾರೆ. ವಾರ್ಷಿಕ 20,000 ಕೋಟಿ ರೂ. ಉಳಿತಾಯ ಲೆಕ್ಕಾಚಾರ ಹಾಕಿಕೊಂಡಿರುವುದರಿಂದ ಬಿಪಿಎಲ್‌ ಮಾನದಂಡ ನಿಗದಿಪಡಿಸುವ ಚಿಂತನೆಯೂ ಸಹ ಸರ್ಕಾರದ ಮುಂದಿಟ್ಟುಕೊಂಡಿದೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಮಂಡ್ಯದಲ್ಲಿ ಮೆಡಿಕಲ್ ಮಾಫಿಯಾ; ಲೋಕಾಯುಕ್ತ ದಾಳಿಯಲ್ಲಿ ಲಕ್ಷಾಂತರ ರೂ. ಮೌಲ್ಯದ ಅವಧಿ ಮುಗಿದ ಮೆಡಿಸಿನ್ ಪತ್ತೆ

Gurantee 2

ಗ್ಯಾರಂಟಿ ಯೋಜನೆಗಳಿಗೆ ಪರಿಷ್ಕರಣೆ ಮಾಡುವ ವಿಚಾರ ಕುರಿತು ದೆಹಲಿಯಲ್ಲಿ ಸಚಿವ ಕೆ.ಹೆಚ್‌ ಮುನಿಯಪ್ಪ ಖುದ್ದು ಪ್ರತಿಕ್ರಿಯೆ ನೀಡಿದ್ದಾರೆ. ಶಕ್ತಿ ಯೋಜನೆ ಮತ್ತು ಯುವ ನಿಧಿ ಯೋಜನೆಯಲ್ಲಿ ಪರಿಷ್ಕರಣೆ ಸಾಧ್ಯವಿಲ್ಲ. ಗೃಹ ಲಕ್ಷ್ಮಿ ಮತ್ತು ಅನ್ನ ಭಾಗ್ಯದಲ್ಲಿ ಪರಿಷ್ಕರಣೆ ಸಾಧ್ಯವಿದೆ. ಗೃಹ ಜ್ಯೋತಿಯಲ್ಲಿ 90% ಜನರು 200 ಯುನಿಟ್ ಗಿಂತ ಕಡಿಮೆ ವಿದ್ಯುತ್‌ ಬಳಸುತ್ತಿದ್ದಾರೆ. ಇದರ ಪರಿಷ್ಕರಣೆಯಿಂದ ಏನು ಲಾಭ ಇಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಚಿತ್ರರಂಗದ ಏಳಿಗೆಗಾಗಿ ಪೂಜೆ- ಊಟಕ್ಕೆ ಕುತ್ತು ಬಂದಾಗ ದೇವರ ಮೊರೆ ಹೋಗುತ್ತೀವಿ ಎಂದ ನೆನಪಿರಲಿ ಪ್ರೇಮ್

ಆ.22ರಂದು ಕ್ಯಾಬಿನೆಟ್‌ ಸಭೆ:
ಇದೇ ಆಗಸ್ಟ್‌ 22ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramahai) ಅವರು ಸಚಿವ ಸಂಪುಟ ಸಭೆ ಕರೆದಿದ್ದಾರೆ. ಇದೇ ಸಭೆಯಲ್ಲಿ ಗ್ಯಾರಂಟಿಗಳ ಪರಿಷ್ಕರಣೆ ಸಂಬಂಧವೂ ಚರ್ಚೆ ನಡೆಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

WhatsApp Image 2024 08 14 at 12.23.16

ಗೃಹಜ್ಯೋತಿ ಯೋಜನೆ ಪರಿಷ್ಕರಣೆ ಡೌಟ್:
ಗೃಹ ಜ್ಯೋತಿ ಯೋಜನೆಯಲ್ಲಿ ಎಲ್ಲಾ ವರ್ಗದವರು ಫಲಾನುಭವಿಗಳು ಇದ್ದಾರೆ, ಆದ್ದರಿಂದ ಪರಿಷ್ಕರಣೆ ಸಾಧ್ಯವಿಲ್ಲ ಎನ್ನಲಾಗಿದೆ. ಎಪಿಎಲ್, ಬಿಪಿಎಲ್ ಕಾರ್ಡ್‌ದಾರರು ಫಲಾನುಭವಿಗಳಿದ್ದಾರೆ. ಒಟ್ಟು 1,70,90,681 ಫಲಾನುಭವಿಗಳಿದ್ದು, ಈ ಪೈಕಿ 1,54,08,594 ಫಲಾನುಭವಿಗಳು ಮಾತ್ರ ನೋಂದಣಿಯಾಗಿದ್ದಾರೆ. ಇದನ್ನೂ ಓದಿ: ಸ್ವಾತಂತ್ರ್ಯೋತ್ಸವ: ರಾಷ್ಟ್ರಪತಿಗಳ ಪದಕ ಘೋಷಿಸಿದ ಕೇಂದ್ರ – ರಾಜ್ಯದ 19 ಪೊಲೀಸ್ ಸಿಬ್ಬಂದಿಗೆ ಪದಕ

4 ಲಕ್ಷ ಮಹಿಳೆಯರಿಗೆ ತಲುಪಿಲ್ಲ ಹಣ:
ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಒಟ್ಟು 1.25 ಕೋಟಿ ಫಲಾನುಭವಿಗಳಿದ್ದಾರೆ. ಈ ಪೈಕಿ ಹಣ ಪಡೆದಿರುವವರ ಸಂಖ್ಯೆ 1.21 ಕೋಟಿ ಇದೆ. 4 ಲಕ್ಷ ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ತಲುಪಿಲ್ಲ. ಏಕೆಂದರೆ 1.78 ಲಕ್ಷ ಮಹಿಳೆಯರು ಐಟಿ, ಜಿಎಸ್‌ಟಿ ಪಾವತಿದಾರರಾಗಿದ್ದಾರೆ. 47 ಸಾವಿರ ಮಹಿಳೆಯರ ಎನ್‌ಪಿಸಿಎಸ್, ಆಧಾರ್ ಅಪ್‌ಡೇಟ್‌ ಆಗಿಲ್ಲ. 57 ಸಾವಿರ ಮಹಿಳೆಯರ ಎನ್‌ಪಿಸಿಐ ಇನ್‌ಆಕ್ಟೀವ್‌ ಆಗಿದೆ. ಈ ಎಲ್ಲ ಕಾರಣಗಳಿಂದ ಗೃಹಲಕ್ಷ್ಮಿ ಯೋಜನೆಯಡಿ 4 ಲಕ್ಷ ಫಲಾನುಭವಿಗಳಿಗೆ ಹಣ ತಲುಪಿಲ್ಲ ಎಂದು ಸಂಬಂಧಪಟ್ಟ ಅಧಿಕಾತಿಗಳು ಮಾಹಿತಿ ನೀಡಿದ್ದಾರೆ.

Share This Article