ಬೆಂಗಳೂರು: ಸಿನಿಮಾ ಟಿಕೆಟ್ & ಒಟಿಟಿ ವೇದಿಕೆಗಳ ಸಬ್‌ಸ್ಕ್ರಿಪ್ಷನ್ ಶುಲ್ಕಗಳ ಮೇಲೆ ಸೆಸ್ (Cess) ವಿಧಿಸಲು ರಾಜ್ಯ ಸರ್ಕಾರ (Karnataka Government) ಯೋಜಿಸಿದೆ. ಈ ಸಂಬಂಧ ವಿಧಾನಸಭೆಯಲ್ಲಿ (Assembly) ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ಕ್ಷೇಮಾಭಿವೃದ್ಧಿ) ವಿಧೇಯಕ-2024 ಮಂಡಿಸಲಾಗಿದೆ. ಶೇ.1 ಮೀರದಂತೆ ಶೇ.2 ಕ್ಕಿಂತ ಕಡಿಮೆಯಾಗದಂತೆ ಸೆಸ್ ವಿಧಿಸಲು ಸರ್ಕಾರ ಮುಂದಾಗಿದ್ದು, ಇದರಿಂದ ಸಿನಿಮಾ, ಸಾಂಸ್ಕೃತಿಕ ಕಲಾವಿದರಿಗೆ ಅನುಕೂಲವಾಗುವ ರೀತಿ ತೆರಿಗೆ ಸಂಗ್ರಹ ನಡೆಯಲಿದೆ ಎಂದು ಹೇಳಲಾಗಿದೆ.
ಸಿನಿ, ಸಾಂಸ್ಕೃತಿಕ ಕಾರ್ಯಕರ್ತರ ಕ್ಷೇಮಾಭಿವೃದ್ಧಿಗೆ ಮಂಡಳಿ ಸ್ಥಾಪನೆ ಮಾಡಿ. ರಾಜ್ಯದಲ್ಲಿ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರಿಗೆ ಸಾಮಾಜಿಕ ಭದ್ರತೆ ಒದಗಿಸಲು ಅವಕಾಶ ಮಾಡಿಕೊಡುವ ವಿಧೇಯಕ ಇದಾಗಿದೆ. ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ ನೋಂದಣಿ, ಕ್ಷೇಮಾಭಿವೃದ್ಧಿ ನಿಧಿಗಾಗಿ ಸಿನಿಮಾ ಟಿಕೆಟ್ ಮೇಲೆ ಉಪ ಕರ ವಿಧಿಸುವುದು ವಿಧೇಯಕದಲ್ಲಿ ಪ್ರಸ್ತಾಪಿಸಲಾಗಿದೆ ಎಂದು ಉನ್ನದ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಬಾಂಗ್ಲಾದಲ್ಲಿ ಭುಗಿಲೆದ್ದ ಹಿಂಸಾಚಾರಕ್ಕೆ 115 ಮಂದಿ ಬಲಿ – 1,000ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ತವರಿಗೆ ವಾಪಸ್
ವಿಧೇಯಕದ ಉದ್ದೇಶವೇನು?
ಕಲಾವಿದರಿಗೆ ಒಳಿತು ಮಾಡುವುದೇ ಈ ಮಸೂದೆಯ ಉದ್ದೇಶ ಎಂದು ಹೇಳಲಾಗುತ್ತಿದೆ. ಕಲಾವಿದ, ತಂತ್ರಜ್ಞ, ನಿರ್ಮಾಪಕರು ಹೀಗೆ ನಾನಾ ವಿಭಾಗಗಳಲ್ಲಿ ಕೆಲಸ ಮಾಡುವವರು ಈ ನಿಧಿಯ ಭಾಗವಾಗಿರಲಿದ್ದಾರೆ. ಇದರ ಜೊತೆಗೆ ಮುಂದಿನ ದಿನಗಳಲ್ಲಿ ರಂಗಭೂಮಿಯಲ್ಲಿದ್ದವರಿಗೂ ಕೂಡ ಈ ಪ್ರಯೋಜನ ಸಿಗುವಂತೆ ಮಾಡುವ ಆಶಯ ಹೊಂದಿದೆ. ಸರ್ಕಾರವು ರಾಜ್ಯದಲ್ಲಿನ ಸಿನಿಮಾ, ಸಾಂಸ್ಕೃತಿಕ ಕಾರ್ಯಕರ್ತರಿಗೆ ಅನುಕೂಲವಾಗುವ ರೀತಿಯಲ್ಲಿ ‘ಕರ್ನಾಟಕ ಸಿನಿ, ಸಾಂಸ್ಕೃತಿಕ ಕಾರ್ಯಕರ್ತರ ಸಾಮಾಜಿಕ ಭದ್ರತೆ & ಕಲ್ಯಾಣ ನಿಧಿ ಹೆಸರಿನಲ್ಲಿ ನಿಧಿ ಸ್ಥಾಪಿಸಲು ವಿಧೇಯಕವನ್ನು ಪ್ರಸ್ತಾಪಿಸಲಾಗಿದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: NEET-UG ಪ್ರಶ್ನೆಪತ್ರಿಕೆ ಸೋರಿಕೆ ಕೇಸ್ – ಮಾಸ್ಟರ್ ಮೈಂಡ್, ಇಬ್ಬರು ಎಂಬಿಬಿಎಸ್ ವಿದ್ಯಾರ್ಥಿಗಳು ಅರೆಸ್ಟ್
ಎಷ್ಟು ಸೆಸ್ ವಿಧಿಸಲಾಗುತ್ತದೆ?
ಸದ್ಯ ಲಭ್ಯವಿರುವ ಮಾಹಿತಿಗಳ ಪ್ರಕಾರ, ಸರ್ಕಾರವು ಸೂಚಿಸುವ ದರಗಳಲ್ಲಿ ಸೆಸ್ ವಿಧಿಸಲಾಗುವುದು. ಸಿನಿಮಾ ಟಿಕೆಟ್ ಹಾಗೂ ಚಂದಾದಾರಿಕೆ ಶುಲ್ಕಗಳು ಜೊತೆಗೆ ಸಂಬಂಧಿತ ಸಂಸ್ಥೆಗಳಿಂದ ಬರುವ ಎಲ್ಲ ಆದಾಯದ ಮೇಲೆ ಶೇ.2ಕ್ಕಿಂತ ಮೀರದಂತೆ ಜೊತೆಗೆ ಶೇ.1ಕ್ಕಿಂತ ಕಡಿಮೆಯಾಗದಂತೆ ಸೆಸ್ ವಿಧಿಸಲಾಗುವುದು ಎನ್ನಲಾಗಿದೆ. ಇದನ್ನೂ ಓದಿ: Karnataka Rain Alert: ಕೆಆರ್‌ಎಸ್ ಡ್ಯಾಂ ಭರ್ತಿಗೆ 4 ಅಡಿಯಷ್ಟೇ ಬಾಕಿ; ಮಳೆ ಆರ್ಭಟಕ್ಕೆ ಹಲವೆಡೆ ಅವಾಂತರ – ಎಲ್ಲೆಲ್ಲಿ ಏನಾಗಿದೆ?