ಮಕ್ಕಳನ್ನು 1ನೇ ಕ್ಲಾಸಿಗೆ ಸೇರಿಸಲು 6 ವರ್ಷ ಕಡ್ಡಾಯ – ಸರ್ಕಾರದಿಂದ ಅಧಿಕೃತ ಆದೇಶ

Advertisements

ಬೆಂಗಳೂರು: ಒಂದನೇ ತರಗತಿ (class 1st) ಸೇರ್ಪಡೆಗೆ ವಿದ್ಯಾರ್ಥಿಗೆ 6 ವರ್ಷ ಕಡ್ಡಾಯ ಎಂಬ ನಿಯಮವನ್ನು ಜಾರಿಗೊಳಿಸಿ ರಾಜ್ಯ ಸರ್ಕಾರ (Karnataka Government) ಆದೇಶ ಹೊರಡಿಸಿದೆ.

Advertisements

ವಿದ್ಯಾರ್ಥಿ ಒಂದನೇ ತರಗತಿ ಸೇರಬೇಕಾದರೆ ಕಡ್ಡಾಯವಾಗಿ 6 ವರ್ಷ ತುಂಬಿರಬೇಕು. 2025-26 ನೇ ಸಾಲಿನಿಂದ ನಿಯಮ ಅನ್ವಯವಾಗಲಿದೆ ಎಂದು ಸರ್ಕಾರ ಅಧಿಕೃತ ಆದೇಶದಲ್ಲಿ ತಿಳಿಸಿದೆ. ಇದನ್ನೂ ಓದಿ: ಕಾಂಗ್ರೆಸ್‌ನಿಂದ `ಸಿಎಂ ಅಂಕಲ್’ ಅಭಿಯಾನ – ಭುಗಿಲೆದ್ದ ಕೇಸರಿ ವಿವಾದ, ಸರ್ಕಾರಕ್ಕೆ ಹಲವು ಪ್ರಶ್ನೆ

Advertisements

2025-26ನೇ ಸಾಲಿನಿಂದ ಅನ್ವಯವಾಗುವಂತೆ ಜೂನ್ 1 ಕ್ಕೆ 6 ವರ್ಷ ತುಂಬಿರುವ ಮಗುವನ್ನು ಒಂದನೇ ತರಗತಿಗೆ ದಾಖಲಿಸಲು ವಯೋಮಿತಿಯನ್ನು ನಿಗದಿಪಡಿಸಿ ಆದೇಶಿಸಿದೆ. ಹಳೆಯ ಆದೇಶಕ್ಕೆ ತಿದ್ದುಪಡಿ ಮಾಡಿ ಸರ್ಕಾರ ಪ್ರಕಟಣೆ ಹೊರಡಿಸಿದೆ.

Live Tv

Advertisements
Exit mobile version