ಚೆಕ್ಕಬಳ್ಳಾಪುರ: ಸಾರ್ವಜನಿಕ ಗಣೇಶೋತ್ಸವ ಸಂಬಂಧ ಆದೇಶ ಮಾಡದೆ ಇರೋದು ಒಳ್ಳೆಯದು. ಕೋವಿಡ್-19 ನಿಯಂತ್ರಣ ಮಾಡೋದು ಸರ್ಕಾರದ ಜವಾಬ್ದಾರಿಯಾಗಿರುವುದರಿಂದಾಗಿ ಗಣೇಶೋತ್ಸವ ಸರಳವಾಗಿ ಆಚರಿಸಿ ಎಂದು ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅಭಿಪ್ರಾಯಪಟ್ಟಿದ್ದಾರೆ.
Advertisement
ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಕಚೇರಿಯಿಂದ ಸಿಎಂ ನೇತೃತ್ವದ ಸಭೆಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಭಾಗಿಯಾಗಿ ಮಾತನಾಡಿದ ಅವರು, ಗಣೇಶ ಚತುರ್ಥಿ ಹಾಗೂ ನಾಳೆಯಿಂದ 6ನೇ ತರಗತಿ ಶಾಲೆಯನ್ನು ಆರಂಭ ಹಿನ್ನೆಲೆ ಸಭೆ ಕರೆಯಲಾಗಿತ್ತು. ಸಾರ್ವಜನಿಕ ಗಣೇಶೋತ್ಸವ ಆಚರಣೆಯ ಜವಾಬ್ದಾರಿಯನ್ನು ಆಯಾ ಜಿಲ್ಲೆಯ ಹಾಗೂ ಬೆಂಗಳೂರಿನಲ್ಲಿ ಬಿಬಿಎಂಪಿ ಹಾಗೂ ಪೊಲೀಸರ ಹೊಣೆಗೆ ಹೊರಿಸಲಾಗಿದೆ. ಕೋವಿಡ್ ನಿಯಂತ್ರಣ ಮಾಡೋದು ಸರ್ಕಾರದ ಜವಾಬ್ದಾರಿಯಾಗಿದೆ. ಗಣೇಶೋತ್ಸವ ಸರಳವಾಗಿ ಆಚರಿಸಲು ತೀರ್ಮಾನಿಸಲಾಗಿದೆ ಎಂದರು. ಇದನ್ನೂ ಓದಿ: ಗಣೇಶೋತ್ಸವಕ್ಕೆ 5 ದಿನ ಅವಕಾಶ ಕೊಟ್ಟ ಸರ್ಕಾರ
Advertisement
Advertisement
ಗರಿಷ್ಠ 5 ದಿನಗಳು ಮಾತ್ರ ಗಣೇಶ ಉತ್ಸವ ಮಾಡಲು ಅನುಮತಿ ನೀಡಲಾಗಿದೆ. 4 ಅಡಿಗಿಂತಲೂ ಹೆಚ್ಚು ಎತ್ತರದ ಗಣೇಶ ಮೂರ್ತಿ ಸ್ಥಾಪಿಸಲು ಅನುಮತಿ ಇಲ್ಲ. ನಗರ ಪ್ರದೇಶದಲ್ಲಿ ವಾರ್ಡ್‍ಗೆ ಒಂದು ಗಣೇಶ ಮೂರ್ತಿ ಸ್ಥಾಪನೆಗೆ ಅವಕಾಶ ಕಲ್ಪಿಸಲಾಗಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ಗಣೇಶ ಮೂರ್ತಿ ಸ್ಥಾಪನೆಗೆ ಇನ್ನೂ ಯಾವ ತೀರ್ಮಾನ ತೆಗೆದುಕೊಂಡಿಲ್ಲ. ಉತ್ಸವದಲ್ಲಿ ಸಾರ್ವಜನಿಕ ಮನರಂಜನೆಗೆ ಹಾಗೂ ಮೆರವಣಿಗೆಗೆ ಅವಕಾಶ ಇಲ್ಲ. ವಿಸರ್ಜನೆ ವೇಳೆ ಕನಿಷ್ಠ ಜನ ಸೇರಲು ಅವಕಾಶ ನೀಡಲಾಗಿದ್ದು, ಹೆಚ್ಚು ಜನ ಸೇರುವ ಹಾಗಿಲ್ಲ ಎಂದರು.
Advertisement
ಸರಳ ದಸರಾ ರೀತಿಯೇ ಸರಳ ಗಣೇಶೋತ್ಸವ ಆಚರಣೆಗೆ ತೀರ್ಮಾನ. ಮನರಂಜನೆ ಸಾಂಸ್ಕೃತಿಕ ಕಾರ್ಯಕ್ರಮಗಗಳಿಗೆ ಅನುಮತಿ ಇಲ್ಲ. ಅದಲ್ಲದೆ ಸಂಘಟಕರು ಹಾಗೂ ಸಮಿತಿಯವರಿಗೆ ಕೊರೊನಾ ವ್ಯಾಕ್ಸಿನ್ ಹಾಗೂ ಟೆಸ್ಟಿಂಗ್ ಕಡ್ಡಾಯ ಮಾಡಲಾಗಿದೆ. ಸಭೆಯಲ್ಲಿ ನರ್ಸಿಂಗ್ ಕಾಲೇಜುಗಳಲ್ಲಿ ಕೊರೊನಾ ಉಲ್ಬಣ ಬಗ್ಗೆ ಚರ್ಚೆ ಮಾಡಲಾಗಿದೆ ಎಂದರು. ಇದನ್ನೂ ಓದಿ: ಷರತ್ತುಬದ್ಧ ನಿಯಮಗಳೊಂದಿಗೆ ಗಣೇಶೋತ್ಸವಕ್ಕೆ ಅನುಮತಿ