ಬೆಂಗಳೂರು: ತುರ್ತು ಚಿಕಿತ್ಸೆ ಅಗತ್ಯವಿರುವವರು ಹೊರತುಪಡಿಸಿ ಇತರೆ ರೋಗಿಗಳು ಆಸ್ಪತ್ರೆಗಳಿಗೆ ಭೇಟಿ ನೀಡದಂತೆ ಸರ್ಕಾರ ಸೂಚನೆ ನೀಡಿದೆ.
ಹೊರರೋಗಿಗಳು, ತಪಾಸಣೆಗಾಗಿ ಆಸ್ಪತ್ರೆಗೆ ಹೋಗುವವರು, ದಂತ ಚಿಕಿತ್ಸೆ ಪಡೆಯುವವರು ಸೇರಿದಂತೆ ಇನ್ನಿತರ ರೋಗಿಗಳು ಎರಡು ವಾರಗಳ ಕಾಲ ಆಸ್ಪತ್ರೆಗಳಿಗೆ ಭೇಟಿ ನೀಡದಂತೆ ಸರ್ಕಾರ ತಿಳಿಸಿದೆ. ಇದನ್ನೂ ಓದಿ: ಇಂದು 32,793 ಕೇಸ್ – ಬೆಂಗಳೂರಿನಲ್ಲಿ 129 ಸಾವಿರ ಸಕ್ರಿಯ ಪ್ರಕರಣ
Advertisement
Advertisement
ಆಸ್ಪತ್ರೆಗಳಲ್ಲಿ ಜನಸಂದಣಿ ನಿಯಂತ್ರಿಸುವ ಸಲುವಾಗಿ ಈ ಆದೇಶ ಹೊರಡಿಸಲಾಗಿದೆ. ಕೋವಿಡ್ ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರದಿಂದ ಎಚ್ಚರಿಕೆಯ ಸೂಚನೆ ರವಾನೆಯಾಗಿದೆ.
Advertisement
Advertisement
ಕೋವಿಡ್ ಮೂರನೇ ಅಲೆ ಎಲ್ಲೆಡೆ ವ್ಯಾಪಕವಾಗಿ ಹರಡುತ್ತಿದೆ. ಆಸ್ಪತ್ರೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹೊರರೋಗಿಗಳು ಜಮಾಯಿಸುತ್ತಿದ್ದಾರೆ. ಇದರಿಂದ ಸೋಂಕು ಮತ್ತಷ್ಟು ಹರಡಬಹುದು. ಅಲ್ಲದೇ ಕೋವಿಡ್‌ನಿಂದ ಗಂಭೀರ ಸ್ವರೂಪದಲ್ಲಿರುವವರಿಗೆ ಚಿಕಿತ್ಸೆ ನೀಡಲು ತೊಂದರೆಯಾಗಬಹುದು ಎಂಬ ಕಾರಣಕ್ಕೆ ಸರ್ಕಾರ ಈ ಆದೇಶ ಹೊರಡಿಸಿದೆ. ಇದನ್ನೂ ಓದಿ: ಒಂದೇ ರೆಸಾರ್ಟ್‌ನಲ್ಲಿ 30ಕ್ಕೂ ಹೆಚ್ಚು ಕೋವಿಡ್ ಪ್ರಕರಣ ದೃಢ – ರೆಸಾರ್ಟ್ ಮುಚ್ಚದೆ ಎಂದಿನಂತೆ ಕಾರ್ಯ