ಬೆಂಗಳೂರು: ಅತೃಪ್ತ ಶಾಸಕರ ಮನವೊಲಿಕೆ ಸಾಕಷ್ಟು ಪ್ರಯತ್ನಪಟ್ಟರೂ ಸಾಧ್ಯವಾಗದೇ ಇದ್ದಾಗ ಈಗ ಹೇಗಾದರೂ ಮಾಡಿ ಸರ್ಕಾರ ಉಳಿಸಲು ಸಿಎಂ ಕೊನೆಯ ದಾಳವನ್ನು ಪ್ರಯೋಗಿಸಿದ್ದಾರೆ.
ಹೌದು. ದೋಸ್ತಿ ಸರ್ಕಾರದ 17 ಶಾಸಕರು ಗೈರಾಗಿರುವ ಹಿನ್ನೆಲೆಯಲ್ಲಿ ಬಹುಮತ ಸಾಬೀತು ಪಡಿಸುವುದು ಕಷ್ಟ ಎನ್ನುವುವುದು ಸಿಎಂಗೆ ಗೊತ್ತಾಗಿದೆ. ಹೀಗಾಗಿ ಕೊನೆಯ ಅಸ್ತ್ರ ಎಂಬಂತೆ ಕಾಂಗ್ರೆಸ್ ನಾಯಕರಿಗೆ ಸಿಎಂ ಪಟ್ಟ ನೀಡುವುದಾಗಿ ಹೇಳಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.
Advertisement
Advertisement
2018ರ ಚುನಾವಣೆಯ ಫಲಿತಾಂಶ ಬಂದ ಬಳಿಕ ನಮ್ಮದು 20:20 ಸರ್ಕಾರ ಅಲ್ಲ. ಪೂರ್ಣಾವಧಿಯವರೆಗೆ ಒಬ್ಬರೇ ಸಿಎಂ ಇರುತ್ತಾರೆ ಎಂದು ದೋಸ್ತಿ ನಾಯಕರು ಹೇಳಿದ್ದರು. ಆದರೆ ಈಗ ಕಾಂಗ್ರೆಸ್ಸಿನಲ್ಲಿ ಅತೃಪ್ತ ಶಾಸಕರ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಅವರಿಗೆ ಸಿಎಂ ಪಟ್ಟ ನೀಡಲು ಮುಂದಾಗಿದ್ದಾರೆ.
Advertisement
ನಮ್ಮ ಪ್ರಯತ್ನಗಳು ಮುಗಿದಿವೆ. ಇನ್ನು ನಮ್ಮಿಂದ ಆಗುವುದಿಲ್ಲ. ನಿಮ್ಮ ಶಾಸಕರನ್ನ ಕರೆತಂದು ನೀವೇ ಸಿಎಂ ಆಗಿ ಸರ್ಕಾರವನ್ನು ಉಳಿಸಿಕೊಡಿ ಎಂದು ಕೇಳಿಕೊಂಡಿದ್ದಾರೆ.
Advertisement
ನಮಗೆ ಸರ್ಕಾರ ಉಳಿಯಬೇಕು, ನಾನು ಸಿಎಂ ತ್ಯಾಗ ಮಾಡಲು ಸಿದ್ಧ. ನಾವು ಬಾಹ್ಯ ಬೆಂಬಲವನ್ನು ನೀಡುತ್ತೇವೆ. ಪರಮೇಶ್ವರ್, ಸಿದ್ದರಾಮಯ್ಯ, ಖರ್ಗೆ, ಡಿಕೆ ಶಿವಕುಮಾರ್ ಯಾರಾದ್ರೂ ಸಿಎಂ ಆಗಲಿ. ಈ ನಿರ್ಧಾರಕ್ಕೆ ದೇವೇಗೌಡರು ಕೂಡ ಒಪ್ಪಿದ್ದಾರೆ ಎಂದು ತಿಳಿಸಿದ್ದಾರೆ.