ಬೆಂಗಳೂರು: ರಾಜ್ಯದಲ್ಲಿ ಪ್ರತಿಷ್ಠಿತ ಟ್ರಾವೆಲ್ಸ್ ಕಂಪನಿಯಾದ ‘ಜಬ್ಬಾರ್ ಟ್ರಾವೆಲ್ಸ್’ ತನ್ನ ಬಸ್ಸಿನಲ್ಲಿ ಸ್ಲೀಪರ್ ಕೋಚ್‍ಗಳ ಬೆಡ್‍ಶೀಟ್‍ಗೆ ಕನ್ನಡ ಧ್ವಜಕ್ಕೆ ಹೋಲಿಕೆ ಆಗುವ ಹೊದಿಕೆಯನ್ನು ಹಾಕಿದ್ದು, ಈ ಮೂಲಕ ಕನ್ನಡ ಧ್ವಜಕ್ಕೆ ಅವಮಾನ ಮಾಡಿದೆ.
ಜಬ್ಬಾರ್ ಟ್ರಾವೆಲ್ಸ್ ನ ಎಲ್ಲಾ ಸ್ಲೀಪರ್ ಕೋಚ್ ಬಸ್‍ಗಳ ಬೆಡ್‍ಶೀಟ್ ಗಳಿಗೆ ಇದೇ ಮಾದರಿಯ ಹೊದಿಕೆ ಬಳಕೆ ಮಾಡಲಾಗಿದ್ದು, ಇದರಲ್ಲಿ ಪ್ರಯಾಣಿಸಲು ಟಿಕೆಟ್ ಬುಕ್ ಮಾಡಿದ ಕೆಲ ಸಾರ್ವಜನಿಕರು ಈ ಕುರಿತು ಆಕ್ಷೇಪ ವ್ಯಕ್ತಪಡಿಸಿ ಟ್ರಾವೆಲ್ಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟ್ರಾವೆಲ್ಸ್ ವರ್ತನೆಗೆ ಕನ್ನಡ ಪರ ಹೋರಾಟಗಾರರು ಅಸಮಾಧಾನ ವ್ಯಕ್ತಪಡಿಸಿದ್ದು, ಈ ಕುರಿತು ಕ್ರಮಕೈಗೊಳ್ಳಲು ಸಂಬಂಧ ಪಟ್ಟವರಿಗೆ ಸೂಚನೆ ನೀಡಲು ತಿಳಿಸುವುದಾಗಿ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.
Advertisement
Advertisement
ಈ ಕುರಿತು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಕನ್ನಡ ಪರ ಹೋರಾಟಗಾರರು, ಟ್ರಾವೆಲ್ಸ್ ಸಂಸ್ಥೆ ಉದ್ದೇಶ ಪೂರ್ವಕವಾಗಿಯೇ ಈ ರೀತಿ ಮಾಡಿದೆಯಾ ಎಂಬುದು ತಿಳಿಯಬೇಕಿದೆ. ಈ ಕುರಿತು ಕಾನೂನು ಹೋರಾಟಕ್ಕೆ ಮುಂದಾಗುತ್ತೇವೆ. ಕನ್ನಡಿಗರ ಭಾವನೆಗೆ ನೋವಾಗುವಂತೆ ಮಾಡುವುದನ್ನು ಸಹಿಸಲು ಸಾಧ್ಯವಿಲ್ಲ. ಬಸ್ಸಿನಲ್ಲಿ ಈ ರೀತಿ ಮಾಡಿರುವ ಕುರಿತು ಪ್ರಯಾಣಿಕರೆ ಮಾಹಿತಿ ನೀಡಿದ್ದು, ಬಸ್ಸಿನಲ್ಲಿ ಪ್ರಯಾಣಿಸುವ ವೇಳೆ ಬೆಡ್ ಮೇಲೆಯೇ ಮಲಗಿ, ತುಳಿದು ಪ್ರಯಾಣಿಸಬೇಕಿದೆ. ಅದ್ದರಿಂದ ಟ್ರಾವೆಲ್ಸ್ ಎಚ್ಚೆತ್ತು ಈ ತಪ್ಪನ್ನು ಬಹುಬೇಗ ತಿದ್ದಿಕೊಳ್ಳಬೇಕಿದೆ. ಇಲ್ಲವಾದಲ್ಲಿ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
Advertisement
‘ಜಬ್ಬಾರ್ ಟ್ರಾವೆಲ್ಸ್’ ಸಂಸ್ಥೆ ಬಹುದಿನಗಳಿಂದ ಕರ್ನಾಟಕದಲ್ಲಿ ತನ್ನ ಸೇವೆಯನ್ನು ನೀಡುತ್ತಿದೆ. ಆದರೆ ಈ ಹಿಂದೆ ಇಂತಹ ಯಾವುದೇ ಘಟನೆ ನಡೆದಿರಲಿಲ್ಲ. ವಾಹನದ ಮೇಲೂ ಕನ್ನಡ ಬಾವುಟ ಮಾದರಿಯ ವಿನ್ಯಾಸ ಮಾಡಿದ್ದು ಉತ್ತಮವಾಗಿ ಕಾಣುತ್ತಿದೆ. ಆದರೆ ಬಸ್ಸಿನ ಒಳಭಾಗದಲ್ಲಿ ಈ ರೀತಿ ವಿನ್ಯಾಸ ಮಾಡಿದೆ. ಈ ಕುರಿತು ಸಂಸ್ಥೆಯ ಮಾಲೀಕರು ಇದುವರೆಗೂ ಯಾವುದೇ ಪ್ರತಿಕ್ರಿಯೆನ್ನು ನೀಡಿಲ್ಲ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv