ಬೆಂಗಳೂರು: ಕರ್ನಾಟಕದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಸನ್ಮಾನ ಮಾಡುವ ಮೂಲಕ ಗೌರವಿಸಲಾಗಿದೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು. ಈ ಹಿಂದೆ ಕುಮಾರಸ್ವಾಮಿ ಸಿನಿಮಾ ರಂಗದಲ್ಲಿ ಗುರುತಿಸಿಕೊಂಡು ನಿರ್ಮಾಪಕರಾಗಿ, ವಿತರಕರಾಗಿ ದುಡಿದಿದ್ದಾರೆ. ಕಾರ್ಯಕ್ರಮಕ್ಕೆ ಚಿತ್ರರಂಗದ ಮಾಜಿ ಮತ್ತು ಹಾಲಿ ಅಧ್ಯಕ್ಷರು, ಚಿತ್ರರಂಗದ ಕೆಲ ನಿರ್ಮಾಪಕ, ನಿರ್ದೇಶಕರಿಗೆ ಆಹ್ಚಾನ ನೀಡಲಾಗಿತ್ತು.
ನಟ ದರ್ಶನ್, ನಟಿಯರಾದ ಪೂಜಾ ಗಾಂಧಿ, ಪ್ರೇಮಾ, ಬಿ.ಸರೋಜಾ ದೇವಿ, ವಿನಯಾ ಪ್ರಸಾದ್, ನಟರಾದ ದೇವರಾಜ್, ಶ್ರೀನಾಥ್, ಕೋಟೆ ನಾಗರಾಜ್, ಸುಂದರ್ ರಾಜ್, ಭಾಮಾ ಹರೀಶ್, ಲಹರಿ ವೇಲು, ಚಿನ್ನೇಗೌಡ, ನಿರ್ಮಾಪಕ ಬೋಗೇಂದ್ರ, ನಿರ್ದೇಶಕ ನಾಗಣ್ಣ, ನಾಗತಿಹಳ್ಳಿ ಚಂದ್ರಶೇಖರ್ ಸನ್ಮಾನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.