– ಜನವರಿ 23ರಂದು ಪಿಎಸ್‌ಐ ಪರೀಕ್ಷೆ
– ಅಭ್ಯರ್ಥಿಗಳಿಗೆ ಕಟ್ಟುನಿಟ್ಟಿನ ಸೂಚನೆ
ಬೆಂಗಳೂರು: ಇದೇ ಜನವರಿ 23ರಂದು ಪಿಎಸ್‌ಐ ಪರೀಕ್ಷೆ ಹಿನ್ನೆಲೆಯಲ್ಲಿ ಅಭ್ಯರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (Karnataka Examination Authority) ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಹಾಲ್‌ಟಿಕೆಟ್, ಗುರುತಿನ ಚೀಟಿ ಹೊರತುಪಡಿಸಿ ಎಲೆಕ್ಟ್ರಾನಿಕ್ ವಸ್ತುಗಳು, ಮೊಬೈಲ್, ಪೆನ್ ಡ್ರೈವ್, ಇಯರ್ ಫೋನ್, ಮೈಕ್ರೋ ಫೋನ್, ಬ್ಲೂಟೂತ್, ಗಡಿಯಾರಗಳನ್ನು ತರುವಂತಿಲ್ಲ ಎಂದು ಸೂಚನೆಯಲ್ಲಿ ತಿಳಿಸಿದೆ. ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಪ್ರತ್ಯೇಕ ಮಾರ್ಗಸೂಚಿಗಳನ್ನು (Guidelines) ಹೊರಡಿಸಲಾಗಿದೆ. ಇದನ್ನೂ ಓದಿ: ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣಪ್ರತಿಷ್ಠಾಪನೆ- ಹುಬ್ಬಳ್ಳಿಯ ಕರಸೇವಕರ ಸಂಭ್ರಮ
Advertisement
Advertisement
ಪುರುಷ ಅಭ್ಯರ್ಥಿಗಳಿಗೆ ಮಾರ್ಗಸೂಚಿ ಏನು?
* ಪೂರ್ಣ ತೋಳಿನ ಅಂಗಿಗಳನ್ನ ಧರಿಸುವಂತಿಲ್ಲ
* ಕಾಲರ್ ರಹಿತ ಶರ್ಟ್ ಹಾಗೂ ಜೇಬುಗಳು ಕಮ್ಮಿ ಇರುವ ಪ್ಯಾಂಟ್ ಧರಿಸಿರಬೇಕು
* ಕುರ್ತಾ ಪೈಜಾಮು, ಜೀನ್ಸ್ ಪ್ಯಾಂಟ್‌ಗಳಿಗೆ ಅನುಮತಿ ಇಲ್ಲ
* ಶರ್ಟ್ ಅಥವಾ ಪ್ಯಾಂಟ್‌ಗಳಿಗೆ ಜಿಪ್ ಪ್ಯಾಕೆಟ್‌ಗಳು, ದೊಡ್ಡ ದೊಡ್ಡ ಗುಂಡಿಗಳು, ಹೆಚ್ಚುವರಿ ಡಿಸೈನ್ ಇರಬಾರದು
* ಪರೀಕ್ಷಾ ಹಾಲ್‌ಗೆ ಶೂಗಳು ಕಟ್ಟು ನಿಟ್ಟಾಗಿ ನಿಷೇಧ
* ಸ್ಯಾಂಡಲ್ ಅಥವಾ ತೆಳುವಾದ ಚಪ್ಪಲಿ ಬಳಕೆಗೆ ಸೂಚನೆ
* ಚೈನ್, ಕಿವಿಯೋಲೆ, ಉಂಗುರ, ಕೈ ಕಡಗ ಧರಿಸುವುದು ನಿಷೇಧ
Advertisement
ಮಹಿಳಾ ಅಭ್ಯರ್ಥಿಗಳಿಗೆ ಮಾರ್ಗಸೂಚಿ ಏನು?
* ದೊಡ್ಡ ದೊಡ್ಡ ಡಿಸೈನ್, ಬಟನ್ ಇರೋ, ಹೂಗಳು ಇರೋ ಬಟ್ಟೆ ಧರಿಸುವಂತಿಲ್ಲ
* ಪೂರ್ಣ ತೋಳಿನ ಬಟ್ಟೆ ಬಳಸದಂತೆ ಸೂಚನೆ
* ಮುಜುಗರವಾಗದಂತೆ ಅರ್ಧ ತೋಳಿನ ಬಟ್ಟೆ ಬಳಸಬೇಕು
* ಇನ್ನೊಬ್ಬರಿಗೆ ಮುಜುಗರವಾಗದ ಟಾಪ್‌ಗಳು ಬಳಸಲು ಸೂಚನೆ
* ಹೈ ಹೀಲ್ಸ್ ಚಪ್ಪಲಿ-ಶೂಗಳನ್ನ ಧರಿಸದಂತೆ ಸೂಚನೆ
* ಮಹಿಳಾ ಅಭ್ಯರ್ಥಿಗಳಿಗೂ ಕೂಡ ಯಾವುದೇ ರೀತಿಯ ಲೋಹ, ಚೈನ್ ಬಳಸದಂತೆ ಸೂಚನೆ
* ಮಂಗಳ ಸೂತ್ರ, ಕಾಲುಂಗುರ ಬಳಸಲು ಅನುಮತಿ
Advertisement
ಪರೀಕ್ಷಾ ಕೊಠಡಿಗೆ ಈ ಪತ್ರಗಳು ಕಡ್ಡಾಯ:
* ಪ್ರವೇಶ ಪತ್ರ ಕಡ್ಡಾಯವಾಗಿ ತರಬೇಕು
* ಸರ್ಕಾರದಿಂದ ಮಾನ್ಯವಾದ ಗುರುತಿನ ಚೀಟಿ ಕಡ್ಡಾಯವಾಗಿರಬೇಕು.
ಎಲ್ಲರೂ ಈ ಸೂಚನೆ ಪಾಲಿಸಬೇಕು:
ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಪ್ರತ್ಯೇಕ ಮಾರ್ಗಸೂಚಿಗಳನ್ನು ಹೊರತುಪಡಿಸಿ ಉಳಿದಂತೆ ಎಲ್ಲರೂ ಪಾಲಿಸುವ ಕೆಲವು ಸೂಚನೆಗಳನ್ನು ನೀಡಲಾಗಿದೆ. ಅಲ್ಲದೇ ಎಲ್ಲಾ ಅಭ್ಯರ್ಥಿಗಳಿಗೂ ಈ ಕೆಳಗಿನ ವಸ್ತುಗಳು ಬಳಸದಂತೆ ಸೂಚನೆ ನೀಡಲಾಗಿದೆ. ಎಲೆಕ್ಟ್ರಾನಿಕ್ ವಸ್ತುಗಳು, ಮೊಬೈಲ್, ಪೆನ್‌ಡ್ರೈವ್, ಇಯರ್ ಫೋನ್, ಮೈಕ್ರೋ ಫೋನ್, ಬ್ಲೂಟೂತ್, ಗಡಿಯಾರಗಳನ್ನು ಪರೀಕ್ಷಾ ಹಾಲ್‌ಗೆ ಕೊಂಡೊಯ್ಯುವಂತಿಲ್ಲ. ಇದನ್ನೂ ಓದಿ: ನಿಮ್ಮ ತಲೆಯನ್ನೇ ತೆಗೆಯುವ ಸಂತಾನದವರು ನಾವು: ಅನಂತ್ ಕುಮಾರ್ ಹೆಗಡೆ ಮತ್ತೆ ಕಿಡಿ
ಯಾವುದೇ ರೀತಿಯ ಆಹಾರ, ನೀರಿನ ಬಾಟಲಿಗೆ ಅವಕಾಶ ಇಲ್ಲ. ಪರೀಕ್ಷಾ ಕೇಂದ್ರದಲ್ಲಿಯೇ ನೀರು ಕುಡಿಯಲು ವ್ಯವಸ್ಥೆ ಇರುತ್ತೆ. ಪೆನ್ಸಿಲ್, ಪೇಪರ್, ಎರೇಸರ್, ಜಾಮಿಟ್ರಿ ಬಾಕ್ಸ್, ಲಾಗ್ ಟೇಬಲ್‌ಗಳು ಪರೀಕ್ಷಾ ಕೇಂದ್ರಕ್ಕೆ ನಿಷೇಧವಿರಲಿದೆ. ಯಾವುದೇ ಅಭ್ಯರ್ಥಿ ಟೋಪಿ ಧರಿಸುವಂತಿಲ್ಲ. ಕೊನೆಯ ಬೆಲ್ ಹೊಡೆಯೋವರೆಗೂ ಪರೀಕ್ಷಾ ಹಾಲ್‌ನಿಂದ ಅಭ್ಯರ್ಥಿಗಳು ಹೊರ ಹೋಗುವಂತಿಲ್ಲ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮಾರ್ಗಸೂಚಿಯಲ್ಲಿ ತಿಳಿಸಿದೆ. ಇದನ್ನೂ ಓದಿ: ಟೀಂ ಇಂಡಿಯಾ vs ಅಫ್ಘಾನಿಸ್ತಾನ ಮೂರನೇ ಟಿ20 – ಧೋನಿ ದಾಖಲೆ ಮುರಿತಾರಾ ರೋಹಿತ್?