ಕೋಲಾರ: ಸಿದ್ದರಾಮಯ್ಯ ಅಲ್ಲ ಯಾರೇ ಬಂದ್ರೂ ನಾನು ಗೆದ್ದಾಗಿದೆ ಎಂದು ಮಾಜಿ ಸಚಿವ ವರ್ತೂರು ಪ್ರಕಾಶ್ (Varthur Prakash) ಹೇಳಿದರು.
ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ (Siddaramaiah) ಧೈರ್ಯ ಮಾಡಿ ಕೋಲಾರವನ್ನ ಆಯ್ಕೆ ಮಾಡಿಕೊಂಡಿದ್ದಾರೆ. ಸಿದ್ದರಾಮಯ್ಯ ಗಟ್ಟಿ ಮನುಷ್ಯ, ಕೋಲಾರದಲ್ಲಿ ತೊಡೆ ತಟ್ಟಿದ ಮೇಲೆ ಹಿಂದೆ ಹೋಗಲ್ಲ. ಅಷ್ಟು ಕೀಳಮಟ್ಟದ ರಾಜಕಾರಣಿ ಅವರಲ್ಲ ಎಂದು ಸಿದ್ದರಾಮಯ್ಯಗೆ ಟಾಂಗ್ ನೀಡಿದ್ರು.
Advertisement
Advertisement
ಇತ್ತೀಚೆಗೆ ನನ್ನ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ. ನಾನು ನಮ್ಮ ಸಮುದಾಯದ ಸ್ವಾಮೀಜಿ ಜೊತೆ ಸಂಧಾನ ಮಾತುಕತೆ ಮಾಡಿಲ್ಲ ಎಂದು ಕೋಲಾರದಲ್ಲಿ ಹರಿದಾಡುತ್ತಿರುವ ಅಪಪ್ರಚಾರಕ್ಕೆ ಟಾಂಗ್ ಕೊಟ್ರು. ನಾನು ನೇರವಾಗಿ ಸಿದ್ದರಾಮಯ್ಯ ಮೇಲೆ ಸ್ಪರ್ಧೆ ಮಾಡುವೆ. ಯಾವುದೇ ಮಾತುಕತೆ ಮತ್ತು ಈ ರೀತಿಯ ಚಟುವಟಿಕೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ರು. ಇದನ್ನೂ ಓದಿ: 2 ಪಕ್ಷಗಳಿಂದ ರಾಜ್ಯದಲ್ಲಿ ಭ್ರಷ್ಟಾಚಾರ ನಡೀತಿದೆ: ಸಂಡೂರಿನಲ್ಲಿ ಚಾಣಕ್ಯ ಕಿಡಿ
Advertisement
Advertisement
ಕಾಂಗ್ರೆಸ್ (Congress) ನಲ್ಲಿ ಸಿದ್ದರಾಮಯ್ಯ, ಜೆಡಿಎಸ್‍ನಲ್ಲಿ ಸಿಎಂಆರ್ ಶ್ರೀನಾಥ್ ಮತ್ತು ಬಿಜೆಪಿಯಲ್ಲಿ ನಾನು ಕಣದಲ್ಲಿರುತ್ತವೆ. ಆದರೆ ಇತ್ತೀಚೆಗೆ ಕೋಲಾರದಲ್ಲಿ ಸ್ಪರ್ಧೆ ಮಾಡಲು ಸಚಿವ ಮುನಿರತ್ನ, ವೈ.ಎ. ನಾರಾಯಣಸ್ವಾಮಿ ಅವರ ಹೆಸರುಗಳು ಕೇಳಿ ಬರುತ್ತಿದ್ದು, ಸ್ವಾಗತ ಮಾಡುವೆ. ಅಲ್ಲದೇ ಬಿಜೆಪಿ ರಾಷ್ಟ್ರೀಯ ಪಕ್ಷ ಯಾರೇ ನಿಂತರೂ ಅವರಿಗೆ ಕೆಲಸ ಮಾಡುವೆ. ಕೋಲಾರದಲ್ಲಿ ಜೆಡಿಎಸ್ (JDS) ಮತ್ತು ಬಿಜೆಪಿ ನಡುವೆ ನೇರ ಸ್ಪರ್ಧೆ ಇದ್ದು ಇಲ್ಲಿ ಈಗಾಗಲೇ ಫಲಿತಾಂಶ ಬಂದಿದೆ. ನಾನು ಸಿದ್ದರಾಮಯ್ಯ ವಿರುದ್ಧ 50 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದೇನೆ ಎಂದರು.
ಕೆಲ ಗ್ರಾಮಗಳಲ್ಲಿ ಕಾಂಗ್ರೆಸ್ ಮುಖಂಡರ ಸೇರ್ಪಡೆಯಾಗಿದೆ. ಕೃಷ್ಣಬೈರೇಗೌಡ ಊಟ ಹಾಕಿದ ಪ್ರಯತ್ನದಿಂದ ಕಾಂಗ್ರೆಸ್ ಪಕ್ಷ ತಲೆ ಎತ್ತಿದೆ. ಇಲ್ಲದಿದ್ದರೆ ಕಾಂಗ್ರೆಸ್ ಪಕ್ಷಕ್ಕೆ ಡಿಪಾಸಿಟ್ ಸಹ ಬರುತ್ತಿರಲಿಲ್ಲ. ಕಾಂಗ್ರೆಸ್ ನವರು ಶ್ರೀನಿವಾಸಗೌಡ ಅವರನ್ನು ಕರೆದುಕೊಂಡು ಹಳ್ಳಿಗಳಿಗೆ ಹೋದರೆ ಒಳ್ಳೆಯದು, ಆದರೆ ಅವರನ್ನು ಬಿಟ್ಟು ಪ್ರಚಾರಕ್ಕೆ ಹೋಗುತ್ತಿದ್ದಾರೆ. ಪ್ರತಿ ಗ್ರಾಮದಲ್ಲೂ ನನ್ನ ಪಡೆ ಇದೆ. ಹೊಸದಾಗಿ ಕಟ್ಟುವ ಅವಶ್ಯಕತೆ ಇಲ್ಲ ಎಂದ್ರು.
ಸಿದ್ದರಾಮಯ್ಯ ಬಂದು ಪಡೆ ಕಟ್ಟಬೇಕಾಗಿದೆ, ಜೆಡಿಎಸ್ ಬಿಟ್ಟು ಕಾಂಗ್ರೆಸ್ ಪಕ್ಷಕ್ಕೆ ಹೋಗುತ್ತಿದ್ದಾರೆ, ಜೆಡಿಎಸ್ ಪಕ್ಷ ಅವರನ್ನು ಹಿಡಿದಿಟ್ಟು ಕೊಳ್ಳಬೇಕಾಗಿದೆ, ನಾನು ಹಿಂದುತ್ವ ಮೇಲೆ ಚುನಾವಣೆ ಮಾಡುವೆ ಎಂದ್ರು. ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿ ದಿಢೀರ್ ಬೆಳಗಾವಿ ಪ್ರವಾಸ ಫಿಕ್ಸ್ ಆಗಿದ್ದೇಕೆ?
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k