ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಕ್ಷೇತ್ರದಲ್ಲಿ ಕಾಂಗ್ರೆಸ್ ನ ಪಂಚಮಸಾಲಿ ದಾಳ ಉರುಳಿಸಲು ಕಾಂಗ್ರೆಸ್ (Congress) ಸದ್ದಿಲ್ಲದೆ ಸಿದ್ಧತೆ ಮಾಡಿಕೊಳ್ಳತೊಡಗಿದೆ ಎನ್ನಲಾಗಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಚುನಾವಣೆಯಲ್ಲಿ ಅವರನ್ನೇ ಕಟ್ಟಿ ಹಾಕಲು ಕೈ ಪಾಳಯದ ಪ್ಲಾನ್ ಆಗಿದೆ. ಬೊಮ್ಮಾಯಿ ವಿರುದ್ಧ ಪ್ರಬಲ ಅಭ್ಯರ್ಥಿ ಕಣಕ್ಕಿಳಿಸಲು ಕೈ ಪಾಳಯ ಮುಂದಾಗಿದೆ. ಅದರಲ್ಲೂ ಪಂಚಮ ಸಾಲಿ ಸಮುದಾಯದ ಪ್ರಭಾವಿ ನಾಯಕನನ್ನ ಅಖಾಡಕ್ಕೆ ಇಳಿಸುವುದು ಕಾಂಗ್ರೆಸ್ ಲೆಕ್ಕಾಚಾರ ಎನ್ನಲಾಗಿದೆ.
Advertisement
Advertisement
ಶಿಗ್ಗಾಂವ್ ನಿಂದ ಮಾಜಿ ಸಚಿವ ವಿನಯ್ ಕುಲಕರ್ಣಿ (Vinay Kulkarni) ಯನ್ನ ಅಖಾಡಕ್ಕೆ ಇಳಿಸಲು ಕೈ ಪಾಳಯ ಮುಂದಾಗಿದೆ. ಧಾರವಾಡ ಗ್ರಾಮಾಂತರದಲ್ಲಿ ತಮ್ಮ ಪತ್ನಿಗೆ ಟಿಕೆಟ್ ನೀಡಿದರೆ ತಾವು ಸಿಎಂ ವಿರುದ್ಧ ಅಖಾಡಕ್ಕೆ ಇಳಿಯುವ ಬಗ್ಗೆ ವಿನಯ್ ಕುಲಕರ್ಣಿ ಒಲವು ತೋರಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಮೋದಿ ಆಗಮನ ಹಿನ್ನೆಲೆ ವೈಮನಸ್ಸು ಮರೆತು ಒಂದಾದ ಬಿಜೆಪಿ ನಾಯಕರು
Advertisement
Advertisement
ಶಿಗ್ಗಾಂವಿ ಟಾಸ್ಕ್ ನಾನೇ ಫೇಸ್ ಮಾಡಬೇಕಾದರೆ ಧಾರವಾಡ ಗ್ರಾಮೀಣ ಟಿಕೆಟ್ ಪತ್ನಿಗೆ ಕೊಡುವುದನ್ನು ಖಚಿತ ಪಡಿಸಿದ್ರೆ ಬೇಗ ತಮ್ಮ ನಿರ್ಧಾರ ತಿಳಿಸುವ ಭರವಸೆ ನೀಡಿದ್ದಾರೆ. ಹೈಕಮಾಂಡ್ ಜೊತೆ ಮಾತನಾಡಿ ತಿಳಿಸುವ ಭರವಸೆಯನ್ನು ಕೈ ನಾಯಕರು ನೀಡಿದ್ದಾರೆ ಎನ್ನಲಾಗಿದೆ.
ಒಟ್ಟಾರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ದ ಕಾಂಗ್ರೆಸ್ ವಿನಯ್ ಕುಲಕರ್ಣಿ ಮೂಲಕ ಪಂಚಮಸಾಲಿ ಅಸ್ತ್ರ ಬಳಸುವ ಸಿದ್ಧತೆ ಆರಂಭಿಸಿದೆ ಎನ್ನಲಾಗಿದೆ.