ಬಿಜೆಪಿ ಟಿಕೆಟ್ ಆಕಾಂಕ್ಷಿ ಅನಿಲ್ ಕುಮಾರ್ ಮೀಸೆಗೆ ಹೆದರಿದ್ರಾ ಜಿ.ಪರಮೇಶ್ವರ್?

Public TV
1 Min Read
PARAMESHWAR 2

ತುಮಕೂರು: ಚುನಾವಣಾ ದಿನಾಂಕ ಇನ್ನೂ ಘೋಷಣೆ ಆಗಿಲ್ಲ. ಆದರೆ ಇತ್ತ ರಾಜಕೀಯ ಪಕ್ಷಗಳು ಪರಸ್ಪರ ಕೆಸರೆರಚಾಡಿಕೊಂಡು ಭರ್ಜರಿ ಪ್ರಚಾರದಲ್ಲಿ ತೊಡಗಿವೆ. ಇದೀಗ ಮಾಜಿ ಡಿಸಿಎಂ ಜಿ.ಪರಮೇಶ್ವರ್ (Dr. G Parameshwar) ಅವರ ಕಣ್ಣು ಕೊರಟಗೆರೆ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯ ಮೀಸೆ ಮೇಲೆ ಬಿದ್ದಂಗಿದೆ. ಈ ಮೂಲಕ ಅನಿಲ್ ಕುಮಾರ್ (Anil Kumar) ಮೀಸೆಗೆ ಪರಂ ಹೆದರಿದ್ರಾ ಅನ್ನೋ ಪ್ರಶ್ನೆಯೊಂದು ಮೂಡಿದೆ.

PARAMESHWAR 1

ಕೊರಟಗೆರೆ ಪಟ್ಟಣದ ಮಾರುತಿ ಕಲ್ಯಾಣ ಮಂಟಪದಲ್ಲಿ ನಡೆದ ಬೆಂಬಲಿತ ಒಕ್ಕಲಿಗ ಮುಖಂಡರ ಸಮಾವೇಶದಲ್ಲಿ ಮಾತನಾಡಿದ ಅವರು, ಬನ್ರೋ ನನ್ ಮಕ್ಳಾ ಯಾರು ಬರ್ತೀರೋ ಬನ್ನಿ ಎಂದು ಡಾ.ಜಿ.ಪರಮೇಶ್ವರ್ ಸವಾಲೆಸೆದರು. ಯಾವ ಮೀಸೆನೂ ಇಲ್ಲ ಗೀಸೆಗೂ ನಾನು ಹೆದರೋಲ್ಲ ಎಂದು ಪರೋಕ್ಷವಾಗಿ ಅನಿಲ್ ಕುಮಾರ್ ಗೆ ಟಾಂಗ್ ನೀಡಿದರು. ಸಾವಿರ ಜನ ಕರೆದ್ರು ಬೆಂಗಳೂರಿಗೆ ಬನ್ನಿ ಅಂತಾ. ಆದರೆ ನಾನು ಕೊರಟಗೆರೆ ಕ್ಷೇತ್ರದಿಂದಲೇ ಸ್ಪರ್ಧೆ ಮಾಡ್ತೀನಿ ಎಂದರು. ಇದನ್ನೂ ಓದಿ: ಚುನಾವಣೆಗೆ‌ ಸ್ಪರ್ಧಿಸಲು ಗೂಳಿಹಟ್ಟಿ ಶೇಖರ್‌ಗೆ ದೇಣಿಗೆ ನೀಡಿದ ಮತದಾರರು

PARAMESHWAR

ಇಷ್ಟು ವರ್ಷ ಕೊರಟಗೆರೆಯಲ್ಲಿ ಕಾಂಗ್ರೆಸ್‍ಗೆ ಕೇವಲ ಜೆಡಿಎಸ್ (JDS) ಮಾತ್ರ ಪ್ರತಿಸ್ಪರ್ಧಿ ಆಗಿತ್ತು. ಈಗ ಬಿಜೆಪಿಯ ಅನಿಲ್ ಕುಮಾರ್ ಪ್ರಬಲ ಪೈಪೋಟಿ ಕೊಡುವ ಸಾಧ್ಯತೆ ಇದೆ. ಭಾನುವಾರ ಬಿ.ವೈ ವಿಜಯೇಂದ್ರ (B Y Vijayendra), ತೇಜಸ್ವಿ ಸೂರ್ಯ (Tejaswi Surya)ಉಪಸ್ಥಿತಿಯಲ್ಲಿ ಅನಿಲ್ ಕುಮಾರ್ ಅವರು ಬೃಹತ್ ರ್ಯಾಲಿ ನಡೆಸಿದ್ದರು. ಹಾಗಾಗಿ ಪದೇ ಪದೇ ಅನಿಲ್ ಕುಮಾರ್ ಮೀಸೆ ಬಗ್ಗೆ ಪರಂ ತಮ್ಮ ಭಾಷಣದುದ್ದಕ್ಕೂ ಲೇವಡಿ ಮಾಡಿದರು.

Share This Article
Leave a Comment

Leave a Reply

Your email address will not be published. Required fields are marked *