ಬೆಂಗಳೂರು: ಬಿಜೆಪಿಯೊಳಗೆ (BJP) ಈಗ ಸ್ವಪಕ್ಷೀಯರ ಮಧ್ಯೆಯೇ ಕಚ್ಚಾಟ ಪಾಲಿಟಿಕ್ಸ್ ಜೋರಾಗಿದೆ. ಶಾಸಕ ಯತ್ನಾಳ್ ವರ್ಸಸ್ ಮುರುಗೇಶ್ ನಿರಾಣಿ (Murugesh Nirani) ಸಂಘರ್ಷ ತಾರಕಕ್ಕೆ ಏರಿದೆ.
ಮೊದಲು ಬಿಎಸ್‌ವೈ ( BS Yediyurappa), ವಿಜಯೇಂದ್ರ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿದ್ದ ಯತ್ನಾಳ್ (Basanagouda Patil Yatnal) ಬಳಿಕ ನಿರಾಣಿ ಕಡೆಗೂ ತಮ್ಮ ವಾಕ್ಸಮರ ಮುಂದುವರಿಸಿದ್ದರು. ಆಗಿನಿಂದಲೇ ನಿರಾಣಿ ವಿರುದ್ಧವೂ ಯತ್ನಾಳ್ ತೀಕ್ಷ್ಣ ವಾಗ್ದಾಳಿ ಮಾಡಿಕೊಂಡು ಬರುತ್ತಿದ್ದಾರೆ. ಬಿಎಸ್‌ವೈ ರಾಜೀನಾಮೆ ಬಳಿಕ ಕೆಲ ಕಾಲ ಸೈಲೆಂಟ್ ಆಗುತ್ತಾ, ಮಧ್ಯೆ ಮಧ್ಯೆ ವಾಗ್ದಾಳಿ ಮಾಡುತ್ತಾ ಇದ್ದರು. ಆದರೆ ಪಂಚಮಸಾಲಿ ಮೀಸಲು ಹೋರಾಟ ತೀವ್ರವಾದ ಬಳಿಕ ಈಗ ಯತ್ನಾಳ್‌ಗೆ ನಿರಾಣಿಯೇ ಟಾರ್ಗೆಟ್ ಆಗಿದ್ದಾರೆ.
Advertisement
Advertisement
ಈಗಂತೂ ನಿರಾಣಿ ವಿರುದ್ಧ ವಾಚಾಮಗೋಚರ ಹೇಳಿಕೆ, ಕೀಳು ಪದ ಪ್ರಯೋಗಕ್ಕೆಲ್ಲ ಇಳಿದಿದ್ದಾರೆ ಶಾಸಕ ಯತ್ನಾಳ್. ನಿರಾಣಿ ವಿರುದ್ಧ ಬಳಸಿದ ಪಿಂಪ್ ಪದ ಪಕ್ಷದೊಳಗೆ ಬಿರುಗಾಳಿ ಎಬ್ಬಿಸಿದೆ. ಹೈಕಮಾಂಡ್ ಈ ಹಿಂದೆ ವಾರ್ನಿಂಗ್ ಕೊಟ್ಟಾಗಲೂ ಯತ್ನಾಳ್ ಅವರು ವಾಗ್ದಾಳಿ ನಿಲ್ಲಿಸಿರಲಿಲ್ಲ. ಈಗ ಮತ್ತೆ ವರಿಷ್ಠರು ಎಚ್ಚರಿಕೆ ಕೊಟ್ರೂ ತೀಕ್ಷ್ಣ ವಾಗ್ದಾಳಿ ಇನ್ನಷ್ಟು ಹೆಚ್ಚಿಸಿದ್ದಾರೆ ಯತ್ನಾಳ್. ಹೈಕಮಾಂಡ್ ಹೇಳಿದೆ ನಾನು ಮಾತಾಡಲ್ಲ ಅನ್ನುತ್ತಲೇ ವಾಗ್ದಾಳಿ ಕಂಟಿನ್ಯೂ ಮಾಡಿರೋದು ಅವರ ದ್ವಂದ್ವ, ದ್ವೇಷದ ಮನಸ್ಥಿತಿ ತೋರಿಸುತ್ತೆ ಅಂತ ಪಕ್ಷದವರೇ ಚರ್ಚೆ ಮಾಡ್ಕೊಳ್ತಿದ್ದಾರೆ.
Advertisement
Advertisement
ಇನ್ನು ಶಾಸಕ ಯತ್ನಾಳ್ ಇಷ್ಟೆಲ್ಲ ಸ್ಟ್ರಾಂಗ್ ಆಗಲು ಏನು ಕಾರಣ, ಇದರ ಹಿಂದೆ ಯಾರಿದ್ದಾರೆ ಅನ್ನೋ ಚರ್ಚೆಯೂ ಶುರುವಾಗಿದೆ. ಯತ್ನಾಳ್ ನಾಲಿಗೆ ಉದ್ದ ಮಾಡ್ತಿರೋ ಹಿಂದಿನ ಅಸಲಿಯತ್ತೇನು ಎನ್ನುವ ಬಗ್ಗೆ ಪ್ರಶ್ನೆಗಳೆದ್ದಿವೆ. ತಮಗಿರುವ ಹಿಂದುತ್ವದ ಇಮೇಜ್ ಮತ್ತು ಪಂಚಮಸಾಲಿ ಸಮುದಾಯದ ಬೆಂಬಲವನ್ನೇ ಗುರಾಣಿ ಮಾಡಿ ಭಂಡತನ ಮುಂದುವರಿಸಿದ್ದಾರಾ ಯತ್ನಾಳ್ ಎಂಬ ಚರ್ಚೆ ಪಕ್ಷದಲ್ಲಿ ನಡೀತಿದೆ. ಪಂಚಮಸಾಲಿ ಸಮುದಾಯವೇ ಯತ್ನಾಳ್ ಹಿಂದಿನ ಬಲನಾ ಅಥವಾ ಯತ್ನಾಳ್‌ಗೆ ಕಾಣದ ದೊಡ್ಡ ಪ್ರಭಾವಿಯೊಬ್ಬರ ಸಪೋರ್ಟ್ ಇದ್ಯಾ ಎಂಬ ಚರ್ಚೆಗಳೂ ಪಕ್ಷದ ವಲಯದಲ್ಲಿ ನಡೀತಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k