ಚಿಕ್ಕಮಗಳೂರು: ನನ್ನನ್ನು ಬಿಜೆಪಿಯಿಂದ (BJP) ಸಿ.ಟಿ.ರವಿ (CT Ravi) ಕಳಿಸಿದ್ರು, ಈಗ ಅವರು ಕ್ಷೇತ್ರವನ್ನೇ ಖಾಲಿ ಮಾಡಬೇಕಾಯ್ತು ಎಂದು ಎಂ.ಪಿ. ಕುಮಾರಸ್ವಾಮಿ (MP Kumaraswamy) ವ್ಯಂಗ್ಯವಾಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿಕ್ಕಮಗಳೂರಲ್ಲಿ ಒಕ್ಕಲಿಗರು ಇರೋದು ಆರೇ ಸಾವಿರ ಮತದಾರರು ಅಷ್ಟೇ. ಆದರೆ ಚಿಕ್ಕಮಗಳೂರು (Chikkamagaluru) ಇನ್ಮುಂದೆ ವೀರಶೈವ ಲಿಂಗಾಯತರ ಕ್ಷೇತ್ರ. ಸಿ.ಟಿ.ರವಿ ದತ್ತಮಾಲೆ, ಅಹಿತಕರ ಘಟನೆ ಇಟ್ಕಂಡ್ ಹೋದ್ರು ಇನ್ಮುಂದೆ ಆಗಲ್ಲ. ಯಡಿಯೂರಪ್ಪ (BS Yediyurappa) ಸ್ವಿಚ್ ಆಫ್ ಮಾಡಲಿಲ್ಲ, ಮಾಡಿದ್ರೆ ಬಿಜೆಪಿ 50 ಸೀಟ್ ಅಷ್ಟೆ ಬರುತ್ತಿತ್ತು ಎಂದು ಟೀಕಿಸಿದರು. ಇದನ್ನೂ ಓದಿ: ಪ್ರತಿಕ್ರಿಯೆ ನೀಡದೇ ಫುಲ್ ಗರಂ ಆಗಿ ತೆರಳಿದ ಸಿದ್ದರಾಮಯ್ಯ
Advertisement
Advertisement
ಮೂಡಿಗೆರೆ ಬಿಜೆಪಿಗೆ ಜೀವ ತುಂಬಿದವನೇ ನಾನಾಗಿದ್ದೆ. ಆದರೆ ನನ್ನನ್ನ ಬಿಟ್ಟಿದ್ದಕ್ಕೆ 5 ಕ್ಷೇತ್ರ ಹೋಗುತ್ತೆ ಅಂತ ಸಾಮಾನ್ಯ ಜನ ಹೇಳ್ತಾರೆ. ಜೆಡಿಎಸ್‍ನಲ್ಲಿ ಬೂತ್ ಕಮಿಟಿ, ಪಕ್ಷ ಸಂಘಟನೆ ಇರಲಿಲ್ಲ, ಹಾಗಾಗಿ ಸೋತೆ. ಎಲ್ಲಾ ಸರಿ ಮಾಡಿಕೊಂಡು ಚುನಾವಣೆ ಮಾಡೋದು ಆಗುತ್ತಿರಲಿಲ್ಲ, ಕಷ್ಟವಾಗಿತ್ತು. ಮುಂದೆ ಎಲ್ಲಾ ಸರಿ ಮಾಡಿಕೊಂಡು ಜಿಪಂ, ತಾಪಂ ಎಲೆಕ್ಷನ್ ಮಾಡುತ್ತೇವೆ. ಇದನ್ನೂ ಓದಿ: ಸಿದ್ದರಾಮಯ್ಯಗೆ ಬೆಂಬಲ ಸೂಚಿಸಿರುವ ಪಕ್ಷೇತರ ಅಭ್ಯರ್ಥಿ