ಕೊಪ್ಪಳ : ಈ ಬಾರಿ ಚುನಾವಣೆಯ (Election) ಫಲಿತಾಂಶ (Result) ಪ್ರಕಟವಾಗಿದ್ದು, ಬಿಜೆಪಿಗೆ (BJP) ತೀವ್ರ ಮುಖಭಂಗವಾಗಿದೆ. ಅದೇ ರೀತಿ ಬಿಜೆಪಿಯಿಂದ ಬಂಡಾಯವೆದ್ದು ಗಂಗಾವತಿಯಲ್ಲಿ ಸ್ಪರ್ಧಿಸಿದ್ದ ಜನಾರ್ದನ ರೆಡ್ಡಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಕೊಪ್ಪಳ ಜಿಲ್ಲೆಯಲ್ಲಿ 5 ಕ್ಷೇತ್ರವಿದ್ದು, 3 ಕಾಂಗ್ರೆಸ್ (Congress), 1 ಬಿಜೆಪಿ, 1 ಕೆಆರ್‌ಪಿಪಿ ಗೆಲುವು ಸಾಧಿಸಿದೆ.
ಗಂಗಾವತಿ : ಕೆ.ಆರ್.ಪಿ.ಪಿಯ ಜನಾರ್ದನ ರೆಡ್ಡಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿಯಾಗಿ ಪರಣ್ಣ ಮುನವಳ್ಳಿ, ಕಾಂಗ್ರೆಸ್ ಅಭ್ಯರ್ಥಿಯಾಗಿ ಇಕ್ಬಾಲ್ ಅನ್ಸಾರಿ, ಜೆಡಿಎಸ್ ಅಭ್ಯರ್ಥಿಯಾಗಿ ಎಚ್. ಆರ್. ಚೆನ್ನಕೇಶವ ಸ್ಪರ್ಧಿಸಿದ್ದರು.
Advertisement
Advertisement
ಕುಷ್ಟಗಿ: ಕುಷ್ಟಗಿ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ದೊಡ್ಡನಗೌಡ ಪಾಟೀಲ್ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್‍ನ ಅಭ್ಯರ್ಥಿಯಾಗಿ ಅಮರೇಗೌಡ ಬಯ್ಯಾಪುರ ಜೆಡಿಎಸ್‍ನ ಶರಣಪ್ಪ ಕುಂಬಾರ, ಕೆಆರ್‍ಪಿಪಿಯ ಎಸ್ ಆರ್ ಹಿರೇಮಠ ಸ್ಪರ್ಧಿಸಿದ್ದರು.
Advertisement
ಯಲಬುರ್ಗಾ: ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ರಾಯರೆಡ್ಡಿ ಗೆಲುವು ಸಾಧಿಸಿದ್ದು, ಬಿಜೆಪಿಯ ಅಭ್ಯರ್ಥಿಯಾಗಿ ಹಾಲಪ್ಪ ಆಚಾರ್, ಜೆಡಿಎಸ್‍ನ ಅಭ್ಯರ್ಥಿಯಾಗಿ ಮಲ್ಲನಗೌಡ ಸೋಲನುಭವಿಸಿದರು.
Advertisement
ಕನಕಗಿರಿ: ಕನಕಗಿರಿ ಕಾಂಗ್ರೆಸ್ ಅಭ್ಯರ್ಥಿ ಶಿವರಾಜ ತಂಗಡಗಿ ಗೆದಿದ್ದಾರೆ. ಬಿಜೆಪಿ ಅಭ್ಯರ್ಥಿಯಾಗಿ ಬಸವರಾಜ ದಡೇಸೂಗೂರು, ಜೆಡಿಎಸ್ ಅಭ್ಯರ್ಥಿಯಾಗಿ ಪಿ.ವಿ.ರಾಜಗೋಪಾಲ ಕೆಆರ್‌ಪಿಪಿ ಅಭ್ಯರ್ಥಿಯಾಗಿ ಡಾ.ಚಾರುಲ್ ಸ್ಪರ್ಧಿಸಿದ್ದರು. ಇದನ್ನೂ ಓದಿ: ಖರ್ಗೆ ತವರಲ್ಲಿ ಮೋದಿ ಕಮಾಲ್ ವ್ಯರ್ಥ – 7 ಕ್ಷೇತ್ರದಲ್ಲಿ ಕಾಂಗ್ರೆಸ್‍ಗೆ ಜಯ
ಕೊಪ್ಪಳ: ಕಾಂಗ್ರೆಸ್‍ನ ಕೆ ರಾಘವೆಂದ್ರ ಹಿಟ್ನಾಳ 36260 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿಯಾಗಿ ಮಂಜುಳಾ ಅಮರೇಶ ಕರಡಿ, ಜೆಡಿಎಸ್ ಅಭ್ಯರ್ಥಿಯಾಗಿ ಸಿ ವಿ ಚಂದ್ರಶೇಖರ್ ಸ್ಪರ್ಧಿಸಿದ್ದರು. ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲಿ ಬಿಜೆಪಿಗಿಲ್ಲ ಸ್ಥಾನ – 5 ಕ್ಷೇತ್ರದಲ್ಲಿ 3 ಕಡೆ ಕಾಂಗ್ರೆಸ್ ಗೆಲುವು