ಬೆಂಗಳೂರು: ಈವರೆಗೆ ನನ್ನನ್ನ ಯಾವ ನಾಯಕರು ಸಂಪರ್ಕ ಮಾಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ತಿಳಿಸಿದರು.
ಚುನಾವಣಾ ಸಮೀಕ್ಷೆ (Election Polls) ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನದೊಂದು ಸಣ್ಣ ಪಕ್ಷ ನೀವೇ 12-13 ಕೊಟ್ಟಿದ್ದೀರಾ. ಹೇಗೆ ಅತಂತ್ರ, ಎಲ್ಲಿಂದ ಬರುತ್ತೆ- ನೀವು ಹೇಳಿದ್ದು ನಾನು ನೋಡ್ತಾ ಇದ್ದೇನೆ. ಕಾಂಗ್ರೆಸ್ (Congress), ಬಿಜೆಪಿಯವರು (BJP) ಸೂಟ್ ಹೋಲಿಸಿಕೊಂಡು ಓಡಾಡ್ತಾ ಇದ್ದಾರೆ. ನನ್ನದು ಸಣ್ಣ ಪಕ್ಷ, 12-20 ರಲ್ಲಿ ಇಟ್ಟಿದ್ದೀರಾ, ನನ್ನ ಕೇಳಿದ್ರೆ ಏನ್ ಹೇಳೋದು ಎಂದು ಗರಂ ಆದರು. ಇದನ್ನೂ ಓದಿ: Karnataka Election 2023 Result – ಕರುನಾಡ ತೀರ್ಪು LIVE Updates
ಈವರೆಗೆ ನನ್ನನ್ನ ಯಾವ ನಾಯಕರು ಸಂಪರ್ಕ ಮಾಡಿಲ್ಲ. 20 ಸೀಟ್ ಇಟ್ಕೊಂಡು ಕಂಡೀಷನ್ ಹಾಕಲು ಸಾಧ್ಯನಾ? ಜನಗಳಿಗೆ ಒಂದು ಅವಕಾಶ ಕೇಳಿದ್ದೆ, ಕೊಡೋದು ಬಿಡೋದು ಅವರಿಗೆ ಬಿಟ್ಟದ್ದು. ಜನ ಏನ್ ತೀರ್ಮಾನ ತಗೊಂಡಿದ್ದಾರೆ ನೋಡೊಣ ಬನ್ನಿ. ಸಿದ್ದರಾಮಯ್ಯ, ಯಡಿಯೂರಪ್ಪ ಕ್ಲಿಯರ್ ಮೆಜಾರೀಟಿ ಅಂದಿದ್ದಾರೆ, ಅವರಿಗ್ಯಾಕೆ ನನ್ನ ಅವಶ್ಯಕತೆ? ಈಗ ಇವಿಎಂ (EVM) ಚೇಂಜ್ ಆಯಿತಾ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಕರ್ನಾಟಕ ಕುರುಕ್ಷೇತ್ರದಲ್ಲಿ ಗೆಲ್ಲೋದ್ಯಾರು? ಸೋಲೋದ್ಯಾರು – ಇಂದು ಪ್ರಕಟವಾಗಲಿದೆ ಮಹಾತೀರ್ಪು