ಉಡುಪಿ: ಕಾಲಿಗೆ ಮೊಬೈಲ್ (Mobile) ಕಟ್ಟಿಕೊಂಡು ಲುಂಗಿ ತೊಟ್ಟು, ಕೇಸರಿ ಶಾಲು ಹಾಕಿಕೊಂಡು ತಾನು ಏಜೆಂಟ್ ಅಂತ ಮತ ಎಣಿಕೆ ಕೇಂದ್ರಕ್ಕೆ ಬಂದಿದ್ದ ಯುವಕನನ್ನು ಪೊಲೀಸರು (Police) ತಡೆದು ವಾಪಸ್ ಕಳುಹಿಸಿದ ಘಟನೆ ಉಡುಪಿ (Udupi) ಜಿಲ್ಲೆಯಲ್ಲಿ ನಡೆದಿದೆ.
ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಕರ್ನಾಟಕ ವಿಧಾನಸಭೆ ಚನಾವಣೆಯ (Karnataka Election) ಫಲಿತಾಂಶ (Result) ಆರಂಭವಾಗಿದೆ. ಫಲಿತಾಂಶದ ಹಿನ್ನೆಲೆಯಲ್ಲಿ ಏಜೆಂಟರ್‌ಗಳು ಮತಕೇಂದ್ರಗಳತ್ತ ಬಂದಿದ್ದರು. ಈ ವೇಳೆ ಬೈಂದೂರು ವಿಧಾನಸಭಾ ಕ್ಷೇತ್ರದ ಏಜೆಂಟ್ ಎಂದು ಯುವಕನೊಬ್ಬ ಮತಕೇಂದ್ರಕ್ಕೆ ಬಂದಿದ್ದ. ಯುವಕನೊಬ್ಬ ಕಾಲಿಗೆ ಮೊಬೈಲ್ ಕಟ್ಟಿಕೊಂಡು ಲುಂಗಿ ತೊಟ್ಟು ಮತ ಎಣಿಕಾ ಕೇಂದ್ರಕ್ಕೆ ಬಂದಿದ್ದಾನೆ. ಜೊತೆಗೆ ಈತ ಕೇಸರಿ ಶಾಲು ಹಾಕಿದ್ದ. ಇದನ್ನೂ ಓದಿ: Karnataka Election 2023 Result – ರಾಜ್ಯಾದ್ಯಂತ ಮತ ಎಣಿಕೆ ಆರಂಭ LIVE Updates
Advertisement
Advertisement
ಈ ವೇಳೆ ತಪಾಸಣೆ ನಡೆಸಿದ್ದ ಪೊಲೀಸರಿಗೆ ಆತನ ಬಳಿಯಲ್ಲಿ ಮೊಬೈಲ್ ಇರುವುದು ತಿಳಿದಿದೆ. ಈ ಹಿನ್ನೆಲೆಯಲ್ಲಿ ಸದಾಶಿವ ಕಂಚಿಕೋಡು ಎಣಿಕಾ ಕೇಂದ್ರದ ದ್ವಾರದಲ್ಲೇ ಏಜೆಂಟ್‌ನನ್ನು ಪೊಲೀಸರು ತಡೆಹಿಡಿದು ವಾಪಸ್ ಕಳಿಸಿದ್ದಾರೆ. ಇದನ್ನೂ ಓದಿ: Karnataka Election 2023 Result: ಮತಕೇಂದ್ರಗಳಲ್ಲಿ ಬಿಗಿಭದ್ರತೆ