ಬೆಂಗಳೂರು: ಚುನಾವಣಾ ಫಲಿತಾಂಶ (Karnataka Election Results) ಮುನ್ನಾ ದಿನ ಬಿಜೆಪಿ ನಾಯಕರು (BJP Leaders) ರಿಲ್ಯಾಕ್ಸ್ ಮೂಡ್‌ನಲ್ಲಿದ್ದು ಇಂದು ಸಂಜೆ ಹೋಟೆಲಿನಲ್ಲಿ ದೋಸೆ ಸವಿದಿದ್ದಾರೆ.
ಪ್ರೆಸಿಡೆಂಟ್ ಹೋಟೆಲ್‌ನಲ್ಲಿ ಮಾಜಿ ಸಿಎಂ ಯಡಿಯೂರಪ್ಪ, ಆರ್ ಅಶೋಕ್, ಲೆಹರ್ ಸಿಂಗ್, ರವಿಕುಮಾರ್ ಸೇರಿದಂತೆ ಬಿಜೆಪಿ ನಾಯಕರು ದೋಸೆ ತಿಂದಿದ್ದಾರೆ. ಇದನ್ನೂ ಓದಿ: ಬಿಜೆಪಿ ಅಭ್ಯರ್ಥಿ ಪರ 1 ಕೋಟಿ ರೂ. ಬೆಟ್ – ಪುರಸಭಾ ಸದಸ್ಯನ ಮನೆ ಮೇಲೆ ದಾಳಿ
ಇಂದು ಸಂಜೆ ಅಧ್ಯಕ್ಷ ಜೆಪಿ ನಡ್ಡಾ ಜತೆ ಯಡಿಯೂರಪ್ಪ (Yediyurappa) ದೂರವಾಣಿ ಮಾತುಕತೆ ನಡೆಸಿದ್ದು ಬಿಜೆಪಿಗೆ ಬಹುಮತ ಬರುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಾವೇರಿ ನಿವಾಸದಲ್ಲಿ ಸಂಜೆ ನಾಯಕರ ಜೊತೆ ಸಭೆ ನಡೆದ ಬಳಿಕ ನಡ್ಡಾ ಜತೆ ಮಾತುಕತೆ ನಡೆಸಿದ ಬಿಎಸ್‌ವೈ ಈ ಬಾರಿ 115-120 ಸ್ಥಾನ ಗೆಲ್ಲುತ್ತೇವೆ. ಗೆಲ್ಲಬಹುದಾದ ನಾಲ್ವರು ಪಕ್ಷೇತರರ ಸಂಪರ್ಕದಲ್ಲೂ ನಾವಿದ್ದೇವೆ ಎಂದು ತಿಳಿಸಿದ್ದಾರೆ.