ಬೆಂಗಳೂರು: ರಾಜ್ಯದ ಅಖಾಡದಲ್ಲಿ ಚುನಾವಣೆ (Election) ಗೆಲ್ಲಲು 3 ಅಂಶಗಳ ಯೋಜನೆ ಜಾರಿಗೆ ಕೈ ಪಾಳಯ ಮುಂದಾಗಿದೆ ಎನ್ನಲಾಗಿದೆ. ಆ 3 ಅಂಶಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಯೋಜನೆ ರೂಪಿಸಿ ಎಂದು ಹೈಕಮಾಂಡ್ ನಾಯಕರು ಸಹ ಸೂಚಿಸಿದ್ದಾರೆ ಎನ್ನಲಾಗಿದೆ.
ರಾಜ್ಯದ ಜನರ ಮನಗೆಲ್ಲಲು ಮೂರು ಪ್ರಮುಖ ಅಜೆಂಡಾದ ಸಲಹೆ ನೀಡಿದ್ದಾರೆ ಎನ್ನಲಾಗಿದೆ. ರಾಜ್ಯ ಕಾಂಗ್ರೆಸ್‌ನ ಮುಂದಿನ ಚುನಾವಣಾ ತಂತ್ರ ಆ 3 ಅಂಶಗಳ ಮೇಲೆ ರೂಪಿತವಾಗುವ ಸಾಧ್ಯತೆ ಇದೆ. ಮಹಿಳೆ, ಜಾತಿ, ಜನಪರ ಯೋಜನೆ, ಇದು ಕಾಂಗ್ರೆಸ್‌ನ ಚುನಾವಣಾ ಮಂತ್ರ ಎನ್ನಲಾಗಿದೆ. ಕಾಂಗ್ರೆಸ್ ಅಧಿಕಾರ ಹಿಡಿಯಲು ತ್ರಿಸೂತ್ರ ಪಾಲನೆಗೆ ಪ್ರಿಯಾಂಕಾ ಗಾಂಧಿ ಸಹ ಸಲಹೆ ನೀಡಿದ್ದಾರೆ. ರಾಜ್ಯ ಚುನಾವಣಾ ಸಿದ್ಧತೆ ಬಗ್ಗೆ ಕೈ ನಾಯಕರ ಜೊತೆ ಚರ್ಚಿಸಿದ ಪ್ರಿಯಾಂಕಾ ತ್ರಿಸೂತ್ರ ಪಾಲನೆ ಮಾಡುವಂತೆ ಹೇಳಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಶಾಸಕ ಯತ್ನಾಳ್ ನಡೆ ಬಗ್ಗೆ ಪಕ್ಷದ ಆಂತರಿಕ ಸಭೆಯಲ್ಲಿ ಚರ್ಚಿಸಿದೆ: ಸಿ.ಟಿ ರವಿ
ರಾಷ್ಟ್ರ ಕಾಂಗ್ರೆಸ್ (Congress) ಪಾಲಿಗೆ ರಾಜ್ಯ ಚುನಾವಣಾ ಫಲಿತಾಂಶ ಡು ಆರ್ ಡೈ ಫಲಿತಾಂಶ. ನೇಟಿವಿಟಿ ಉಳಿಸಿಕೊಂಡು ಕಾರ್ಯತಂತ್ರ ಮಾಡಿ ಹೊಸ ಯೋಜನೆಗಳ ಭರವಸೆ ನೀಡಿ ಆ ಘೋಷಣೆಗಳು ಜನಪರ ಆಗಿರಲಿ. ಮಹಿಳಾ ಪರ ಯೋಜನೆಗಳು ಇರಲಿ ಮತ್ತು ಜಾತಿ ಸಮೀಕರಣ ಸರಿಯಾಗಿರುವಂತೆ ನೋಡಿಕೊಳ್ಳಿ. ಜಾತಿ, ಮಹಿಳೆ ಹಾಗೂ ಜನಪ್ರಿಯತೆ ಈ 3 ಅಂಶಗಳನ್ನು ಸರಿಯಾಗಿ ಗಮನಿಸಿ ಭರವಸೆ ನೀಡಿ. ಈ ಮೂರು ಕಾಂಬಿನೇಷನ್ ವರ್ಕ್ ಔಟ್ ಆದರೆ ಕಾಂಗ್ರೆಸ್ ಗೆಲುವನ್ನು ತಡೆಯಲು ಸಾಧ್ಯವಿಲ್ಲ. ರಾಜ್ಯ ಕಾಂಗ್ರೆಸ್ ನಾಯಕರಿಗೆ ಪ್ರಿಯಾಂಕಾ ಗಾಂಧಿ (Priyanka Gandhi) ಅಂಥದ್ದೊಂದು ತ್ರಿಸೂತ್ರ ಬೋಧನೆ ಮಾಡಿದ್ದು, ಕೈ ನಾಯಕರ ಕಾರ್ಯ ತಂತ್ರ ಅದರ ಮೇಲೆ ರೂಪುಗೊಳ್ಳಲಿದೆ ಎನ್ನಲಾಗಿದೆ. ಇದನ್ನೂ ಓದಿ: ಕರ್ನಾಟಕದ 4 ದಿಕ್ಕುಗಳ ರಥಯಾತ್ರೆಗೆ ಬಿಜೆಪಿ ಬ್ಲೂಪ್ರಿಂಟ್ ಏನು? ಯಾರು ಯಾವ ಕಡೆ!?
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k