ಯಾದಗಿರಿ: ನಾಳೆ ಮತದಾನ (Vote), ಹೀಗಾಗಿ ಮತದಾರರಿಗೆ ಜಾಗೃತಿ ಮೂಡಿಸುವ ಕೆಲಸಗಳು ಆಗುತ್ತಿವೆ. ಈ ಹಿನ್ನೆಲೆಯಲ್ಲಿ ಯಾದಗಿರಿ (Yadgir) ಜಿಲ್ಲಾಡಳಿತ ಮತದಾನದ ಮಮತೆಯ ಕರೆಯೋಲೆ ಶೀರ್ಷಿಕೆಯ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದೆ.
ಮತದಾರರಲ್ಲಿ ಜಾಗೃತಿ ಮೂಡಿಸಲು ಯಾದಗಿರಿ ಜಿಲ್ಲಾಡಳಿತ ಮತ್ತು ಜಿಲ್ಲಾ ಸ್ವೀಪ್ ಸಮಿತಿ ವಿನೂತನ ಪ್ರಯೋಗಕ್ಕೆ ಮುಂದಾಗಿದೆ. ಈ ಆಮಂತ್ರಣದ ವಿಶೇಷವೆಂದರೆ ಯಾದಗಿರಿಯಲ್ಲೂ ಮತದಾರರಿಗೆ ಮತದಾನದ ಮಮತೆಯ ಕರೆಯೋಲೆ ನೀಡಲಾಯಿತು.
Advertisement
Advertisement
ಆಮಂತ್ರಣ ಪತ್ರಿಕೆಯಲ್ಲಿ ಏನಿದೆ?: ಚುನಾವಣಾ ಆಯೋಗ (Election Commission) ನಿಶ್ಚಯಿಸಿದಂತೆ ಕರ್ನಾಟಕ ವಿಧಾನಸಭಾ ಚುನಾವಣೆ-2023ರ (Karnataka Assembly Election 2023) ಮತದಾನ ದಿನ ಸಲ್ಲುವ ಶುಭ ಮಹೂರ್ತದಲ್ಲಿ ಭಾರತ ಮಾತೆಯ ಪ್ರಬುದ್ಧ ಪ್ರಜೆಯಾದ ಮತದಾರ ಜೊತೆ ಪ್ರಜಾಪ್ರಭುತ್ವ ಈ ಮಹತ್ವದ ಶುಭ ಕಾರ್ಯದಲ್ಲಿ ತಮ್ಮ ಅಮೂಲ್ಯವಾದ ಮತವನ್ನು ಚಲಾಯಿಸಿ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಎತ್ತಿ ಹಿಡಿದು ಜನರಿಂದ ಜನರಿಗೋಸ್ಕರ ಸಂವಿಧಾನಬದ್ಧ ಆಡಳಿತ ವ್ಯವಸ್ಥೆಯನ್ನು ಬಲಪಡಿಸಲು ವಿನಂತಿ ಎಂದು ಬರೆಯಲಾಗಿದೆ. ಇದನ್ನೂ ಓದಿ: Karnataka Election 2023; ಮತದಾರರ ಸೆಳೆಯಲು ಬೆಂಗಳೂರಲ್ಲಿ ವಿಶೇಷ ಮತಗಟ್ಟೆ
Advertisement
Advertisement
ಅದೇ ರೀತಿ ಕೊಪ್ಪಳದ (Koppala) ಕುಷ್ಠಗಿಯಲ್ಲಿ ನೂತ ವಧು, ವರರಿಂದ ಎಲ್ಲರೂ ಕಡ್ಡಾಯ ಮತದಾನ ಮಾಡಿ ಎಂದು ಪೋಸ್ಟರ್ ಹಿಡಿದು ಜಾಗೃತಿ ಮೂಡಿಸಿದರು. ಕೋಲಾರದಲ್ಲೂ (Kolar) ಅಧಿಕಾರಿಗಳು ವೋಟಿಂಗ್ ಅವೇರ್‌ನೆಸ್ ಮೂಡಿಸಿದರು. ಇದನ್ನೂ ಓದಿ: ಕೆಜಿಗೆ 50 ರೂ.ಗಿಂತ ಕಡಿಮೆಯಿರುವ ಸೇಬು ಆಮದು ನಿಷೇಧ – ಕೇಂದ್ರ ಸರ್ಕಾರ