ಮಂಗಳೂರು: ಪ್ರವಾಸೋದ್ಯಮ, ಉದ್ಯಮ, ಶಿಕ್ಷಣ ಸಂಸ್ಥೆಗಳನ್ನು ಒಳಗೊಂಡ ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರ (Mangaluru City North Assembly Constituency) ದಲ್ಲಿ ಎರಡು ದಶಕಗಳಿಂದೀಚೆಗೆ ಬಿಜೆಪಿ (BJP) 2 ಬಾರಿ ಮತ್ತು ಕಾಂಗ್ರೆಸ್ 2 ಬಾರಿ ಗೆಲ್ಲುವ ಮೂಲಕ ಸಮಬಲ ಸಾಧಿಸಿದೆ. ಇದರಿಂದ ಈ ಕ್ಷೇತ್ರ ಭಾರೀ ಕುತೂಹಲ ಮೂಡಿಸಿದ್ದು, ಟಿಕೆಟ್‍ಗಾಗಿ ನಾಯಕರ ಮಧ್ಯೆ ಪೈಪೋಟಿ ಆರಂಭವಾಗಿದೆ.
Advertisement
2018ರ ಚುನಾವಣೆಯಲ್ಲಿ ಕಾಂಗ್ರೆಸ್ (Congress) ನ ಬಿ.ಎ.ಮೊಹಿಯುದ್ದೀನ್ ಬಾವ ವಿರುದ್ಧ ಬಿಜೆಪಿಯ ಡಾ.ಭರತ್ ಶೆಟ್ಟಿ ವೈ (Dr Bharat Shetty Y). ಮೊದಲ ಬಾರಿಗೆ ಸ್ಪರ್ಧಿಸಿ 26,648 ಮತಗಳ ಅಂತರದಿಂದ ಗೆದ್ದಿದ್ದರು. ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರಾಗಿರುವ ಡಾ.ಭರತ್ ಶೆಟ್ಟಿ ಅಭಿವೃದ್ಧಿ ವಿಚಾರದಲ್ಲಿ ತನ್ನದೇ ಆದ ವರ್ಚಸ್ಸನ್ನು ಸೃಷ್ಟಿಸಿದ್ದಾರೆ. ಹಿಂದುತ್ವದ ಫಯರ್ ಬ್ರ್ಯಾಂಡ್ ಆಗಿಯೂ ಸದ್ದು ಮಾಡುತ್ತಿದ್ದಾರೆ. ಈ ಎಲ್ಲ ದೃಷ್ಟಿಕೋನವಿಟ್ಟು ಬಿಜೆಪಿ ಮತ್ತೆ ಡಾ.ಭರತ್ ಶೆಟ್ಟಿಯವರನ್ನೇ ಕಣಕ್ಕಿಳಿಸುವ ಬಗ್ಗೆ ಚಿಂತನೆ ನಡೆಸುತ್ತಿದ್ದರೂ ಕೆಲವು ಮುಖಂಡರು ಸದ್ದಿಲ್ಲದೆ ಕ್ಷೇತ್ರದತ್ತ ದೃಷ್ಟಿ ನೆಟ್ಟಿದ್ದಾರೆ. ಇದನ್ನೂ ಓದಿ: ಬಿಜೆಪಿಗೆ ಎರಡನೇ ಗೆಲುವಿನ ಕೊಡುಗೆ ನೀಡಲಿದೆಯೇ ಮೂಡುಬಿದಿರೆ ಕ್ಷೇತ್ರ?
Advertisement
Advertisement
ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ (Congress) ಟಿಕೆಟ್‍ಗಾಗಿ ಈ ಬಾರಿ ಹೈ-ಫೈಟ್ ಆರಂಭವಾಗಿದ್ದು ಕಾಂಗ್ರೆಸ್ ಟಿಕೆಟ್‍ಗಾಗಿ ಡಿ.ಕೆ.ಶಿವಕುಮಾರ್ (D.K Shivakumar) ಆಪ್ತರಾಗಿರುವ ಇನಾಯತ್ ಅಲಿ () ಮತ್ತು ಸಿದ್ದರಾಮಯ್ಯ (Siddaramaiah) ಆಪ್ತರಾಗಿರುವ ಮೊಹಿಯುದ್ದಿನ್ ಬಾವ (Mohiuddin Bava) ಮಧ್ಯೆ ನೇರ ಫೈಟ್ ಆರಂಭವಾಗಿದೆ. ಇನಾಯತ್ ಆಲಿ ಮತ್ತು ಮೊಹಿಯುದ್ದಿನ್ ಬಾವ ಕಾಂಗ್ರೆಸ್ ಟಿಕೆಟ್‍ಗೆ ಮುಗಿಬಿದ್ದಿದ್ದು, ಬಿಡುವಿಲ್ಲದೆ ಓಡಾಟ ಮಾಡುತ್ತಿದ್ದಾರೆ. ಒಬ್ಬರು ಹೋದ ಕಡೆ ಮತ್ತೊಬ್ಬರು ತೆರಳಿ ತಮ್ಮ ಬಲಾಬಲ ಪ್ರದರ್ಶನ ಮಾಡುತ್ತಿದ್ದಾರೆ. ಪ್ರಜಾಧ್ವನಿ ಯಾತ್ರೆಯಲ್ಲೂ ಕಾಂಗ್ರೆಸ್‍ನ ಇಬ್ಬರು ನಾಯಕರು ತಮ್ಮದೇ ಶೈಲಿಯಲ್ಲಿ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದರು. ಈಗಾಗಲೇ ಬಿಡುಗಡೆಯಾಗಿರುವ ಕಾಂಗ್ರೆಸ್ ಪಟ್ಟಿಯಲ್ಲಿ ಮಂಗಳೂರು ಉತ್ತರ ಕ್ಷೇತ್ರದ ಅಭ್ಯರ್ಥಿ ಇಲ್ಲದೇ ಇರೋದು ಟಿಕೆಟ್ ಫೈಟ್‍ಗೆ ಸಾಕ್ಷಿ.
Advertisement
ಮೊಹಿಯುದಿನ್ ಬಾವ ಮಾಜಿ ಶಾಸಕರಾಗಿ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ನಡೆಸಿದವರು. ಇನಾಯತ್ ಅಲಿ ಅವರು ಒಂದು ವರ್ಷದಿಂದೀಚೆಗೆ ಕ್ಷೇತ್ರದಲ್ಲಿ ನಿರಂತರ ಓಡಾಟ ಮಾಡಿಕೊಂಡು ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ಪಕ್ಷದ ಕಾರ್ಯಕರ್ತರು, ಸಂಕಷ್ಟದಲ್ಲಿದ್ದವರಿಗೆ ಸ್ಪಂದಿಸಿ ನೆರವಿನ ಹಸ್ತ ಚಾಚುವ ಮೂಲಕ ಕ್ಷೇತ್ರದಲ್ಲಿ ತನ್ನ ಛಾಪನ್ನು ಮೂಡಿಸುತ್ತಿದ್ದಾರೆ. ಇದರಿಂದ ಈ ಕ್ಷೇತ್ರದಲ್ಲಿ ಟಿಕೆಟ್ ನೀಡುವುದು ಸ್ವತಃ ಕಾಂಗ್ರೆಸ್‍ಗೆ ಬಿಸಿ ತುಪ್ಪವಾಗಿದೆ. ಇದನ್ನೂ ಓದಿ: ದಕ್ಷಿಣ ಕನ್ನಡದಲ್ಲಿ ದಾಖಲೆ ಬರೆದ ಸುಳ್ಯದ ಎಸ್ ಅಂಗಾರ
ಒಂದು ಮೂಲದ ಪ್ರಕಾರ ಮುಸ್ಲಿಂ ಅಭ್ಯರ್ಥಿಗಳನ್ನು ಒಮ್ಮತಕ್ಕೆ ತಂದು, ಸುರತ್ಕಲ್ (Suratkal) ನಲ್ಲಿ ಹಿಂದೂ ಅಭ್ಯರ್ಥಿಯನ್ನು ನಿಲ್ಲಿಸಿ ಬಿಜೆಪಿಯ ಹಿಂದೂ ಅಜೆಂಡಾಕ್ಕೆ ಸೆಡ್ಡು ಹೊಡೆಯುವ ಪ್ರಯತ್ನವೂ ಕಾಂಗ್ರೆಸ್ ಮುಂದಿದೆ. ಬಿಜೆಪಿ-ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ಹಗ್ಗ- ಜಗ್ಗಾಟ, ಕ್ರಿಕೆಟ್, ವಾಲಿಬಾಲ್ ಪಂದ್ಯಾಟ ಆಯೋಜಿಸುತ್ತಿದ್ದಾರೆ. ವೈದ್ಯಕೀಯ, ದಂತ ಶಿಬಿರ ಸೇರಿದಂತೆ ನಾನಾ ರೀತಿ ಕ್ಯಾಂಪ್‍ಗಳು ಜೋರಾಗಿವೆ. ಕಾಂಗ್ರೆಸ್ ಪಕ್ಷದಲ್ಲಿ ಬಿ ಫಾರಂ ಸಿಕ್ಕಿ ಅಂತಿಮವಾಗಿ ಅರ್ಜಿ ಸಲ್ಲಿಸುವ ತನಕ ಯಾವುದೇ ಮ್ಯಾಜಿಕ್ ನಡೆದರೂ ಅಚ್ಚರಿಯಿಲ್ಲ.
ಹೀಗಾಗಿ ಕಾಂಗ್ರೆಸ್‍ನ ಟಿಕೆಟ್ ಫೈಟ್ ನೋಡಿಕೊಂಡು ಬಿಜೆಪಿ ಸದ್ಯ ತಣ್ಣಗಿದೆ. ಕಾಂಗ್ರೆಸ್ ಅಸ್ತ್ರ ನೋಡಿ ತನ್ನ ಬಾಣ ಪ್ರಯೋಗಿಸೋಕೆ ಬಿಜೆಪಿ ಮುಂದಾಗಿದೆ. ಯಾರಾಗ್ತಾರೆ ಅಭ್ಯರ್ಥಿಗಳು ಅನ್ನೋದು ಕುತೂಹಲದ ಕೇಂದ್ರಬಿಂದುವಾಗಿದೆ.