ಸೆರಗೊಡ್ಡಿ ಮತಯಾಚನೆ ಮಾಡಿದ ಕಾಂಗ್ರೆಸ್ ಅಭ್ಯರ್ಥಿ ಚಿಂಚನಸೂರ್‌ ಪತ್ನಿ ಅಮರೇಶ್ವರಿ

Public TV
2 Min Read
babu rao chinchansur wife

ಯಾದಗಿರಿ: ರಸ್ತೆ ಅಪಘಾತದಲ್ಲಿ ಗಾಯಗೊಂಡು, ಆಸ್ಪತ್ರೆಗೆ ದಾಖಲಾಗಿರುವ ಯಾದಗಿರಿಯ ಗುರುಮಠಕಲ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಾಬುರಾವ್‌ ಚಿಂಚನಸೂರ್‌ (Babu Rao Chinchansur) ಪರ ಪತ್ನಿ ಮತಯಾಚನೆ ವೇಳೆ ಕಣ್ಣೀರು ಹಾಕಿರುವ ಘಟನೆ ನಡೆದಿದೆ.

ಗುರುವಾರ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ ಆಗಿದ್ರೂ ನಾಮಪತ್ರ ಸಲ್ಲಿಕೆಗೆ ಚಿಂಚನಸೂರ್‌ ಬರಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಚಿಂಚನಸೂರ್‌ ಪತ್ನಿ ಅಮರೇಶ್ವರಿ ಚಿಂಚನಸೂರ್‌ ಸೂಚಕರಾಗಿ ನಾಮಪತ್ರ ಸಲ್ಲಿಸಿದರು. ನಾಮಪತ್ರ (Nomination) ಸಲ್ಲಿಕೆ ನಂತರ ನಡೆದ ಬಹಿರಂಗ ಸಮಾವೇಶದಲ್ಲಿ ಅಮರೇಶ್ವರಿ ಚಿಂಚನಸೂರ್‌ ಪತಿಯ ಪರ ಮತಯಾಚನೆ ವೇಳೆ ಕಣ್ಣೀರು ಹಾಕಿ, ಸೆರಗೊಡ್ಡಿ, ಮತಯಾಚನೆ ಮಾಡಿದ್ದಾರೆ. ಚಿಂಚನಸೂರ್‌ ಅವರ ಮೇಲೆ ಇಷ್ಟೊಂದು ಜನರು ಪ್ರೀತಿ ಅಭಿಮಾನ ತೋರಿಸುತ್ತಿರುವುದು, ನನಗೆ ಮಾತುಗಳು ಬರುತ್ತಿಲ್ಲ ಎಂದು ಭಾವುಕರಾಗಿ, ಮತದಾರರು ಅವರಿಗೆ ಮತ ನೀಡಿ, ಗುರುಮಠಕಲ್ ಕ್ಷೇತ್ರ ಅಭಿವೃದ್ಧಿಗೆ ಸಹಕರಿಸಬೇಕೆಂದು ಸೆರಗೊಡ್ಡಿ ಮತಯಾಚಿಸಿದರು.

babu rao chinchansur wife 1

ಗುರುಮಠಕಲ್ ಪಟ್ಟಣದ ಅಂಬೇಡ್ಕರ್ ನಗರದಲ್ಲಿ ನಡೆದ ಕಾಂಗ್ರೆಸ್​ ಕಾರ್ಯಕರ್ತರ ಸಮಾವೇಶದಲ್ಲಿ ಆಸ್ಪತ್ರೆಯಿಂದ ವೀಡಿಯೋ ಕಾಲ್ ಮೂಲಕ ಕಾಂಗ್ರೆಸ್ (Congress) ಅಭ್ಯರ್ಥಿ ಬಾಬುರಾವ್ ಚಿಂಚನಸೂರ್‌ ಮಾತನಾಡಿ, ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬರಲಿದ್ದು, ನಾನು ಮಂತ್ರಿಯಾಗುವುದು ಖಚಿತ ಎಂದರು. ಕಾಲಿಗೆ ಆದ ತೀವ್ರ ಗಾಯವು ಗುಣಮುಖವಾಗದ ಕಾರಣ ವೈದ್ಯರ ಸಲಹೆ ಮೇರೆಗೆ ಬರಲಾಗಲಿಲ್ಲ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸರ್ಕಾರದಲ್ಲಿ ಮಂತ್ರಿಯಾಗಲು ತಮಗೆ ಮತ ನೀಡುವಂತೆ ಮನವಿ ಮಾಡಿದರು. ಇದನ್ನೂ ಓದಿ: ಅರಕಲಗೂಡಿನಲ್ಲಿ ದಿಢೀರ್‌ ಬೆಳವಣಿಗೆ – ಕೈ ಟಿಕೆಟ್‌ ಆಕಾಂಕ್ಷಿ ಬಿಜೆಪಿ ಅಭ್ಯರ್ಥಿ?

babu rao chinchansuru

ಬಿಜೆಪಿಯಲ್ಲಿ (BJP) ಹಿಂದುಳಿದವರಿಗೆ ಸೂಕ್ತ ಸ್ಥಾನಮಾನ ಸಿಗದ ಕಾರಣ ನನಗೆ ನೀಡಿದ್ದ ಎಂಎಲ್‌ಸಿ ಸ್ಥಾನ ಮತ್ತು ಅಂಬಿಗರ ಚೌಡಯ್ಯ ನಿಗಮದ ಅಧ್ಯಕ್ಷ ಸ್ಥಾನ ಮತ್ತು ಅಮರೇಶ್ವರಿ ಚಿಂಚನಸೂರ್‌ ಅವರಿಗೆ ನೀಡಿದ್ದ ಕೇಂದ್ರ ಆಹಾರ ನಿಗಮದ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮಾರ್ಗದರ್ಶನದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದೇನೆ. ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದ್ದು, ನಾನೇ ಮಂತ್ರಿಯಾಗುತ್ತೇನೆ ಎಂದು ವೀಡಿಯೋ ಕಾಲ್ ಮೂಲಕ ಪಕ್ಷದ ಕಾರ್ಯಕರ್ತರಿಗೆ ತಿಳಿಸಿದರು. ಇದನ್ನೂ ಓದಿ: ಪಕ್ಷೇತರ ಅಭ್ಯರ್ಥಿಯ ಮೇಲೆ ದರ್ಪ ಮೆರೆದ ಬಿಜೆಪಿ ಶಾಸಕ

Share This Article