ಮಡಿಕೇರಿ: ವಿಧಾನಸಭಾ ಚುನಾವಣೆಗೆ ಮಡಿಕೇರಿ ಕ್ಷೇತ್ರ (Madikeri Constituency) ದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳು ಗೆಲುವಿಗಾಗಿ ಜಿದ್ದಾಜಿದ್ದಿನ ಹೋರಾಟಕ್ಕೆ ಕಣಕ್ಕೆ ಧುಮುಕಿದ್ದಾರೆ. ಬಿಜೆಪಿಯಿಂದ ಅಭ್ಯರ್ಥಿಯಾಗಿ ಎಂ.ಪಿ. ಅಪ್ಪಚ್ಚು ರಂಜನ್ (MP Appacchu Ranjan), ಕಾಂಗ್ರೆಸ್ ಪಕ್ಷದಿಂದ ಡಾ. ಮಂಥರ್ ಗೌಡ (Dr. Manthar Gowda) ಅವರು ಚುನಾವಣಾ ರಣಾಂಗಣಕ್ಕೆ ಇಳಿದಿದ್ದಾರೆ.
Advertisement
ಒಬ್ಬರಿಗಿಂತ ಒಬ್ಬರು ತಾವೇನೂ ಕಡಿಮೆ ಎಂದು ಸಾವಿರ, ಸಾವಿರ ಸಂಖ್ಯೆಯಲ್ಲಿ ಬೆಂಬಲಿಗರ ಸಂಘಟನೆ ಮಾಡುವ ಮೂಲಕ ಮಡಿಕೇರಿ ಕ್ಷೇತ್ರದಲ್ಲಿ ಶಕ್ತಿ ಪ್ರದರ್ಶನ ಮಾಡುತ್ತಿದ್ದಾರೆ. ಮಡಿಕೇರಿ ಕ್ಷೇತ್ರದ ಹಾಲಿ ಶಾಸಕ ಅಪ್ಪಚ್ಚು ರಂಜನ್ ಕಳೆದ 6 ಬಾರಿ ಚುನಾವಣೆ ಎದುರಿಸಿದ್ದು, 5 ಬಾರಿ ಗೆಲುವು ಸಾಧಿಸಿದ್ದಾರೆ ಅಲ್ಲದೇ ಕಳೆದ ಚುನಾವಣೆಯಲ್ಲಿ 16 ಸಾವಿರ ಮತಗಳ ಅಂತರದಿಂದ ಗೆದ್ದು ಬೀಗಿದ್ದಾರೆ. ಈ ಬಾರಿ 7ನೇ ಸಲ ಚುನಾವಣಾ ಕಣದಲ್ಲಿ ಇರುವ ಅಪ್ಪಚ್ಚು ರಂಜನ್ ಈ ಚುನಾವಣೆಯಲ್ಲಿ 30 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ತಮ್ಮ ಎದುರಾಳಿ ಕಾಂಗ್ರೆಸ್ ಅಭ್ಯರ್ಥಿ ನಮಗೆ ಸಮರ್ಥವಾದ ಅಭ್ಯರ್ಥಿಯೇ ಅಲ್ಲ, ಜೊತೆಗೆ ಅವರು ಹೊರಗಿನ ಜಿಲ್ಲೆಯವರಾಗಿದ್ದಾರೆ. ಹೀಗಾಗಿ ಜಿಲ್ಲೆಯ ಜನರು ಅವರಿಗೆ ಮಣೆ ಹಾಕುವುದಿಲ್ಲ ಎಂದು ಜಿಲ್ಲೆಯ ಮತದಾರರಲ್ಲಿ ಮನವರಿಕೆ ಮಾಡಲು ಮುಂದಾಗಿದ್ದಾರೆ.
Advertisement
Advertisement
ಕಾಂಗ್ರೆಸ್ (Congress) ಅಭ್ಯರ್ಥಿ ಮಂಥರ್ ಗೌಡ ಮಾಜಿ ಸಚಿವ ಎ. ಮಂಜು (A Manju) ಅವರ ಪುತ್ರರಾಗಿದ್ದಾರೆ. ಹಾಸನ ಜಿಲ್ಲೆಯಲ್ಲಿ ತಮ್ಮ ರಾಜಕೀಯ ಪ್ರವೇಶ ಮಾಡಿರುವ ಮಂಥರ್ ಗೌಡ ಕಳೆದ ಬಾರಿ ಎಂಎಲ್‍ಸಿ ಚುನಾವಣೆಯಲ್ಲಿ ಮಡಿಕೇರಿಯಿಂದ ಸ್ಪರ್ಧೆ ಮಾಡಿ ಅಲ್ಪ ಮತಗಳಿಂದ ಸೋಲು ಕಂಡಿದ್ರು. ಇದೀಗ ವಿಧಾನಸಭೆ ಚುನಾವಣೆಗೂ ಮಂಥರ್ ಗೌಡಗೆ ಟಿಕೆಟ್ ಸಿಕ್ಕ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಗೆಲುವಿಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಕಳೆದ ಕೋವಿಡ್ ಸಮಯದಿಂದಲೂ ಮಡಿಕೇರಿ ಕ್ಷೇತ್ರದ ಹಲವೆಡೆಗಳಲ್ಲಿ ಸಂಚಾರ ಮಾಡಿ ಪಕ್ಷ ಸಂಘಟನೆ ಮಾಡಿದ್ದಾರೆ. ಹೀಗಾಗಿ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ನಿಶ್ಚಿತ ಎಂದು ಹೇಳುತ್ತಿದ್ದಾರೆ. ಇದನ್ನೂ ಓದಿ: ರಾಮಮಂದಿರ ಉದ್ಘಾಟನೆಗೆ ಉತ್ತರ ಪ್ರದೇಶಕ್ಕೆ ಬನ್ನಿ: ಯೋಗಿ ಆಹ್ವಾನ
Advertisement
ಅಪ್ಪಚ್ಚುರಂಜನ್ ಪ್ಲಸ್ ಹಾಗೂ ಮೈನಸ್ ಏನು?
ಪ್ಲಸ್ ಏನು?: ಕಳೆದ 25 ವರ್ಷಗಳಿಂದ ಮಡಿಕೇರಿ ಕ್ಷೇತ್ರದ ಶಾಸಕರಾಗಿ ಹಲವಾರು ಯೋಜನೆ ಹಾಗೂ ಜನ ಸಾಮಾನ್ಯರಿಗೆ ಕೈಗೆ ಸಿಗುತ್ತಾರೆ. ಕ್ಷೇತ್ರದ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದು, ಅಲ್ಲದೇ ಮೆಡಿಕಲ್ ಕಾಲೇಜು, ಎಂಜಿನಿಯರಿಂಗ್ ಕಾಲೇಜು ನಂತಹ ಯೋಜನೆಗಳನ್ನು ತಂದಿದ್ದು ಜನಪ್ರಿಯ ಶಾಸಕರಾಗಿದ್ದಾರೆ. ಹೀಗಾಗಿ ಮಡಿಕೇರಿ ಕ್ಷೇತ್ರದಲ್ಲಿ ಮತದಾರರು ಹೆಚ್ಚು ಈ ಬಾರಿಯು ಒಲವು ತೊರುವ ಲಕ್ಷಣಗಳು ಕಂಡು ಬರುತ್ತಿದೆ.
ಮೈನಸ್ ಏನು?: ಆರ್‍ಎಸ್‍ಎಸ್ (RSS) ಸಂಘಟನೆಯ ಕೆಲವರ ಮಾತಿಗೆ ಬೆಲೆ ಕೊಡದೆ ಇರುವುದರಿಂದ ಸಂಘಪರಿವಾರದವರು ಹೊಸ ಮುಖ ಬೇಕು ಎಂದು ಮಣೆ ಹಾಕಿದ್ರು. ಆದರೆ ಹೈಕಮಾಂಡ್ ಅಪ್ಪಚ್ಚು ರಂಜನ್ ಟಿಕೆಟ್ ನೀಡಿರುವುದರಿಂದ ಸ್ವಲ್ಪ ಒಳ ಏಟು ಬೀಳುವ ಸಾಧ್ಯತೆಯಿದೆ.
ಕಾಂಗ್ರೆಸ್ ಅಭ್ಯರ್ಥಿ ಮಂಥರ್ ಗೌಡ ಪ್ಲಸ್ ಹಾಗೂ ಮೈನಸ್ ಏನು?:
ಪ್ಲಸ್ ಏನು?: ಮಂಥರ್ ಗೌಡ ಕಳೆದ ಎರಡು ವರ್ಷಗಳಿಂದ ಕೊಡಗಿನಲ್ಲಿ ಹಲವಾರು ಜನಪರ ಕೆಲಸ ಮಾಡಿದ್ರು. ಕೋವಿಡ್ ಹಾಗೂ ಮಳೆಗಾಲ ಸಮಯದಲ್ಲಿ ಜನಸಾಮಾನ್ಯರ ಸಂಕಷ್ಟಕ್ಕೆ ಸಹಾಯ ಮಾಡಿದ್ದಾರೆ. ಮಂಥರ್ ಗೌಡ ಕಳೆದ ಎಂಎಸ್ ಸಿ ಚುನಾವಣೆಯಲ್ಲಿ ಕಡಿಮೆ ಅಂತರದಲ್ಲಿ ಸೋಲು ಕಂಡಿದ್ರು. ನಂತರ ಕೊಡಗಿನಲ್ಲಿ ಹಲವಾರು ತಿಂಗಳಿನಿಂದ ಯುವಕ ಕ್ರೀಡೆಗಳಿಗೆ ಸಹಾಯ ಹಾಗೂ ಇನ್ನಿತರ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಯುವಕರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾದರು. ಇದೀಗ ಈ ಚುನಾವಣೆಯಲ್ಲಿ ಮಡಿಕೇರಿ ಕ್ಷೇತ್ರದ ಯುವಕರು ಸಂಪೂರ್ಣವಾಗಿ ಮಂಥರ್ ಗೌಡರ ಪರವಾಗಿ ಇದ್ದಾರೆ ಹಿರಿಯರು ಎಲ್ಲಾ ಬಿಜೆಪಿ ಪರವಾಗಿ ಇರುವುದು ಹೆಚ್ಚಾಗಿ ಕಂಡುಬಂದಿದೆ.
ಮೈನಸ್ ಏನು?: ಮಂಥರ್ ಗೌಡ ಅರಕಲಗೂಡು ತಾಲೂಕಿನ ರಾಮನಾಥಪುರದಲ್ಲಿ ಜಿಲ್ಲಾ ಪಂಚಾಯತಿ ಸದಸ್ಯ ಅಗಿರುವಾಗ ಹೈಟೆಕ್ ಊರು ಮಾಡುವುದಾಗಿ ಭರವಸೆ ನೀಡಿದ್ರು. ಅದು ಯಾವ ಕೆಲಸ ಮಾಡದೇ ಇರುವುದರಿಂದ ಇದೀಗ ಚುನಾವಣೆಯಲ್ಲಿ ಸಮಯದಲ್ಲಿ ಗ್ರಾಮಸ್ಥರೇ ಮಡಿಕೇರಿ ಕ್ಷೇತ್ರದ ಜನರು ಮತ ಹಾಕಬೇಡಿ ಸುಳ್ಳು ಹೇಳಿಕೊಂಡು ಜನರನ್ನು ದಿಕ್ಕು ತಪ್ಪಿಸುತ್ತಾರೆ ಎಂದು ಬಹಿರಂಗವಾಗಿ ಹೇಳತ್ತಾ ಇದ್ದಾರೆ. ಮಂಥರ್ ಗೌಡ ಮಡಿಕೇರಿ ಕ್ಷೇತ್ರದ ಅಭ್ಯರ್ಥಿ ಅದ್ರೆ ಅವರ ತಂದೆ ಎ ಮಂಜು ಅರಕಲಗೂಡು ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿ ತಂದೆ ಪರವಾಗಿ ರಾತ್ರಿ ಸಮಯದಲ್ಲಿ ಜೆಡಿಎಸ್ ಪರ ಪ್ರಚಾರ ಮಾಡುತ್ತಾರೆ ಅನ್ನೋ ಅರೋಪವು ಇದೆ. ಹಾಗೂ ಕಾಂಗ್ರೆಸ್ ಪಕ್ಷದ ಹಲವಾರು ನಾಯಕರು ಮಂಥರ್ ಗೌಡ ಸರಿಯಾಗಿ ತಮ್ಮನ್ನು ಬಳಸಿಕೊಳ್ಳುತ್ತಿಲ್ಲ ಅನ್ನೋ ಅರೋಪವು ಇರುವುದರಿಂದ ಅನೇಕರು ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಪಕ್ಷ ಸೇರುತ್ತಿದ್ದಾರೆ. ಇದು ಮೈನಸ್ ಅಗಬಹುದು.
ಮಡಿಕೇರಿ ಕ್ಷೇತ್ರದ ಜಾತಿವಾರು ಲೆಕ್ಕಾಚಾರ ನೋಡೋದಾದ್ರೆ:
ಲಿಂಗಾಯತ_ 24219
ಒಕ್ಕಲಿಗ ಹಾಗೂ ಅರೇಬಾಷೆ ಗೌಡ _51126
ಪ.ಪಂಗಡ _3456
ಕುರುಬ _6849
ಮುಸಲ್ಮಾನ_23554
ಕ್ರೈಸ್ತ_9464
ಬ್ರಾಹ್ಮಣ_3258
ಕೊಡವ ಹಾಗೂ ಕೊಡವ ಬಾಷಿಕ_24856
ಮಲಯಾಳಿ_15624
ತಮಿಳ_6038
ಬಿಲ್ಲವ_1962
ಬಂಟ್ಸ್_3264
ವಿಶ್ವಕರ್ಮ_3542
ಮಡಿವಾಳ_1503
ದೇವಾಂಗ ಶೆಟ್ಟಿ_4865
ಸವಿತಾ ಸಮಾಜ_1256
ನಾಯಕ್_563
ಜೈನರು _253
ಇತರೆ_1735