ಚಾಮರಾಜನಗರ: ಹುಲಿಗಳ ನಾಡು ಎಂದು ಖ್ಯಾತಿ ಪಡೆದ ಗುಂಡ್ಲುಪೇಟೆಯಲ್ಲಿ 2 ರಾಷ್ಟ್ರೀಯ ಪಕ್ಷಗಳು ಕೂಡ ಅಸ್ತಿತ್ವಕ್ಕೆ ಫೈಟ್ ಮಾಡುತ್ತಿವೆ. ಗುಂಡ್ಲುಪೇಟೆ ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್ ನಡುವೆ ನೇರಾ ಹಣಾಹಣಿಯಿದೆ. ಕ್ಷೇತ್ರದಲ್ಲಿ ಕೃಷಿಯೇ ಮುಖ್ಯ ಕಸುಬಾಗಿದೆ. ಮೊದಲಿನಿಂದಲೂ ಕೂಡ ಕ್ಷೇತ್ರದಲ್ಲಿ ವ್ಯಕ್ತಿ ಆಧಾರಿತವಾಗಿಯೇ ಚುನಾವಣೆ ನಡೆದಿವೆ. ಒಬ್ಬೊಬ್ಬರನ್ನೇ ಹೆಚ್ಚು ಬಾರಿ ಗೆಲ್ಲಿಸಿಕೊಂಡ ಕ್ಷೇತ್ರ ಇದಾಗಿದೆ. ಇಲ್ಲಿಯವರೆಗೂ ಕೂಡ ಐದೇ ಮಂದಿಯಷ್ಟೇ ವಿಧಾನಸಭೆ ಪ್ರವೇಶಿಸಿದ್ದಾರೆ. ರಾಜ್ಯ ವಿಧಾನಸಭೆ ಮೊದಲ ಮಹಿಳಾ ಸ್ಪೀಕರ್ ನಾಗರತ್ನಮ್ಮ ಗುಂಡ್ಲುಪೇಟೆ ಕ್ಷೇತ್ರ ಪ್ರತಿನಿಧಿಸಿ ಅಮ್ಮ ಎಂದು ಹೆಸರು ಪಡೆದಿದ್ದರು.
Advertisement
ಈವರೆಗೆ ಗೆಲುವು ಸಾಧಿಸಿದ ಅಭ್ಯರ್ಥಿಗಳು:
1952- ದ್ವಿಸದಸ್ಯ ಕ್ಷೇತ್ರ ಎಚ್ .ಕೆ.ಶಿವರುದ್ರಪ್ಪ, ಸಿದ್ದಯ್ಯ – ಪಕ್ಷೇತರ
1957- ಕೆ.ಎಸ್.ನಾಗರತ್ನಮ್ಮ – ಪಕ್ಷೇತರ
1962- ಕೆ.ಎಸ್.ನಾಗರತ್ನಮ್ಮ – ಪಕ್ಷೇತರ
1967 – ಕೆ.ಎಸ್ .ನಾಗರತ್ನಮ್ಮ – ಕಾಂಗ್ರೆಸ್
1972- ಕೆ.ಎಸ್.ನಾಗರತ್ನಮ್ಮ – ಕಾಂಗ್ರೆಸ್
1978- ಎಚ್.ಕೆ.ಶಿವರುದ್ರಪ್ಪ – ಕಾಂಗ್ರೆಸ್
1983-ಕೆ.ಎಸ್.ನಾಗರತ್ನಮ್ಮ – ಕಾಂಗ್ರೆಸ್
1985- ಕೆ.ಎಸ್.ನಾಗರತ್ನಮ್ಮ – ಕಾಂಗ್ರೆಸ್
1989- ಕೆ.ಎಸ್.ನಾಗರತ್ನಮ್ಮ – ಕಾಂಗ್ರೆಸ್
1994- ಎಚ್.ಎಸ್. ಮಹಾದೇವಪ್ರಸಾದ್ – ಜನತಾದಳ
1999- ಎಚ್.ಎಸ್. ಮಹಾದೇವಪ್ರಸಾದ್ – ಸಂ.ದಳ
2004 – ಎಚ್.ಎಸ್. ಮಹಾದೇವಪ್ರಸಾದ್ – ಜಾ.ದಳ
2008-ಎಚ್.ಎಸ್. ಮಹಾದೇವಪ್ರಸಾದ್ – ಕಾಂಗ್ರೆಸ್
2013- ಎಚ್.ಎಸ್. ಮಹಾದೇವಪ್ರಸಾದ್ – ಕಾಂಗ್ರೆಸ್
2017- ಉಪ ಚುನಾವಣೆ ಗೀತಾ ಮಹದೇವಪ್ರಸಾದ್ – ಕಾಂಗ್ರೆಸ್
2018 ನಿರಂಜನ್ ಕುಮಾರ್ – ಬಿಜೆಪಿ
Advertisement
Advertisement
ಕಳೆದ ಚುನಾವಣೆ ಫಲಿತಾಂಶ:
ಸಿ.ಎಸ್.ನಿರಂಜನಕುಮಾರ್ (ಬಿಜೆಪಿ): 94151 ಮತ
ಗೀತಾ ಮಹಾದೇವಪ್ರಸಾದ್ (ಕಾಂಗ್ರೆಸ್) – 77,467 ಮತ
16 ಸಾವಿರ ಅಂತರದಿಂದ ಮೊದಲ ಬಾರಿಗೆ ಬಿಜೆಪಿ ಅಭ್ಯರ್ಥಿ ನಿರಂಜನ್ ಕುಮಾರ್ ಕಳೆದ ಬಾರಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು.
Advertisement
ಜಾತಿವಾರು ಲೆಕ್ಕಾಚಾರ:
ಒಟ್ಟು ಮತದಾರರ ಸಂಖ್ಯೆ: 2,13,836
ಪುರುಷರು- 105020
ಮಹಿಳೆಯರು- 108797
ಯಾರ ವೋಟು ಎಷ್ಟು?:
ವೀರಶೈವ – 71,000
ದಲಿತ – 41000
ನಾಯಕ – 20,000
ಉಪ್ಪಾರ – 18,000
ಕುರುಬರು – 20,000
ಮುಸ್ಲಿಂ – 5,000
ಸೋಲಿಗರು – 8,000
ಇತರೆ – 22,000
ಈ ಬಾರಿ ಕಣದಲ್ಲಿರುವ ಅಭ್ಯರ್ಥಿಗಳು:
ಕಾಂಗ್ರೆಸ್- ಗಣೇಶ್ ಪ್ರಸಾದ್
ಬಿಜೆಪಿ- ನಿರಂಜನ್ ಕುಮಾರ್
ಜೆಡಿಎಸ್ – ಕಡಬೂರು ಮಂಜುನಾಥ್
ಬಿಜೆಪಿ ಬಂಡಾಯ ಅಭ್ಯರ್ಥಿ- ಎಂ.ಪಿ. ಸುನೀಲ್ ಕುಮಾರ್
ಬಿಜೆಪಿ ಪ್ಲಸ್: ಈ ಭಾರೀ ಬಿಜೆಪಿ ಅಭ್ಯರ್ಥಿ ನಿರಂಜನ್ ಕುಮಾರ್ ಅವರ ಪರ ಕೇಂದ್ರ ಸಚಿವ ಅಮಿತ್ ಶಾ ಸೇರಿದಂತೆ ರಾಷ್ಟ್ರೀಯ, ರಾಜ್ಯ ನಾಯಕರ ಪ್ರಚಾರ ನಡೆಸುತ್ತಿದ್ದಾರೆ. ಅಷ್ಟೇ ಅಲ್ಲದೇ ಶಾಸಕ ನಿರಂಜನ್ ಕುಮಾರ್ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿರುವುದರಿಂದ ಅವರ ಗೆಲುವಿಗೆ ಸಹಾಯವಾಗಬಹುದು. ಅಭಿವೃದ್ಧಿ ಕಾರ್ಯದಿಂದ ಜನರು ಕೈ ಹಿಡಿಯುವ ಬಿಜೆಪಿ ಅಭ್ಯರ್ಥಿಯ ನಂಬಿಕೆಯಿದೆ.
ಬಿಜೆಪಿ ಮೈನಸ್: ಬಿಜೆಪಿ ಮುಖಂಡರಲ್ಲಿ ಅಸಮಾಧಾನದ ಜೊತೆಗೆ ಬಂಡಾಯ ಅಭ್ಯರ್ಥಿ ಸ್ಪರ್ಧಿಸುವುದು ನಿರಂಜನ್ ಕುಮಾರ್ ಗೆಲುವಿಗೆ ಹಿನ್ನಡೆಯಾಗುವ ಸಾಧ್ಯತೆಯಿದೆ. ನಿರೀಕ್ಷೆಯಂತೆ ಅಭಿವೃದ್ಧಿ ಮಾಡುಲು ಸಾಧ್ಯವಾಗಿಲ್ಲ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಇದರ ಜೊತೆಗೆ ಆಡಳಿತ ವಿರೋಧಿ ಅಲೆಯಿದ್ದು, ಜೆಡಿಎಸ್ ಅಭ್ಯರ್ಥಿಯಿಂದಲೂ ಡ್ಯಾಮೇಜ್ ಆಗುವ ಸಾಧ್ಯತೆಯಿದೆ. ಇದನ್ನೂ ಓದಿ: ಸಿಲಿಕಾನ್ ಸಿಟಿಯಲ್ಲಿ ಮೋದಿ ಬೃಹತ್ ರೋಡ್ ಶೋ – ರೇಷ್ಮೆಯ ಮೈಸೂರು ಪೇಟಾದಲ್ಲಿ ಕಂಗೊಳಿಸುತ್ತಿರುವ ಪಿಎಂ
ಕಾಂಗ್ರೆಸ್ ಪ್ಲಸ್: ತಂದೆ ದಿ.ಮಹದೇವ ಪ್ರಸಾದ್ ಅಭಿವೃದ್ಧಿ ಕಾರ್ಯ ಹಾಗೂ ಅನುಕಂಪವೂ ಕಾಂಗ್ರೆಸ್ ಅಭ್ಯರ್ಥಿ ಗಣೇಶ್ ಪ್ರಸಾದ್ ಅವರ ಮೇಲೆ ಇದೆ. ಅಷ್ಟೇ ಅಲ್ಲದೇನ ಬಿಜೆಪಿ ಬಂಡಾಯ ವರವಾಗುವ ಸಾಧ್ಯತೆಯಿದೆ. ಮಾಜಿ ಸಿಎಂ ಸಿದ್ದರಾಮಯ್ಯ, ಡಿಕೆಶಿ ಶ್ರೀರಕ್ಷೆಯೂ ಗಣೇಶ್ ಪ್ರಸಾದ್ ಗೆಲುವಿಗೆ ಸಹಕಾರಿಯಾಗುತ್ತದೆ.
ಕಾಂಗ್ರೆಸ್ ಮೈನಸ್: ಪಕ್ಷದಳಗೆ ಒಳೇಟಿನ ಭೀತಿಯಿದೆ. ಇದರ ಜೊತೆಗೆ ಲಿಂಗಾಯತ ಮತದಾರರು ಹೆಚ್ಚಿರುವುದು ಕಾಂಗ್ರೆಸ್ ಅಭ್ಯರ್ಥಿ ಗಣೇಶ್ ಪ್ರಸಾದ್‍ಗೆ ಹಿನ್ನಡೆಯಾಗಬಹುದು. ಇದನ್ನೂ ಓದಿ: ಜಾತಿಯೇ ನಿರ್ಣಾಯಕ – ತರೀಕೆರೆಯಲ್ಲಿ ಈ ಬಾರಿ ಗೆಲುವು ಯಾರಿಗೆ?
ಒಟ್ಟಿಲ್ಲಿ ಸದ್ಯ ಗುಂಡ್ಲುಪೇಟೆ ಕ್ಷೇತ್ರದಲ್ಲಿ ಎರಡು ರಾಷ್ಟ್ರೀಯ ಪಕ್ಷದ ಅಭ್ಯರ್ಥಿಗಳ ನಡುವೆ ಬ್ಯಾಟಲ್ ನಡೆದಿದೆ. ದಿ. ಮಹದೇವ ಪ್ರಸಾದ್ ಅಭಿವೃದ್ಧಿ, ಅನುಕಂಪ ವರ್ಕೌಟ್ ಆದ್ರೆ ಕಾಂಗ್ರೆಸ್ ಅಭ್ಯರ್ಥಿಗೆ ಗೆಲುವು ಸುಲಭವಾಗುತ್ತದೆ. ಯಡಿಯೂರಪ್ಪ ಆಶೀರ್ವಾದ ಮೋದಿ, ಅಮಿತ್ ಶಾ ಅವರ ಪ್ರಚಾರದ ಇಂಪ್ಯಾಕ್ಟ್ ಕ್ಷೇತ್ರದಲ್ಲಿ ಪ್ರಭಾವ ಬೀರಿದರಷ್ಟೇ ಬಿಜೆಪಿ ಅಭ್ಯರ್ಥಿ ಜಯಗಳಿಸುತ್ತಾರೆ. ಕೈ – ಕಮಲ ನಡುವೆ ಬಿಗ್ ಫೈಟ್ ಇದ್ದು, ಮತದಾರ ಯಾರಿಗೆ ಜೈ ಅಂತಾನೇ ಎನ್ನುವುದನ್ನು ಕಾದುನೋಡಬೇಕಾಗಿದೆ.