ಬೆಂಗಳೂರು: ದಿನಕ್ಕೊಂದು ವದಂತಿ ದಿನಕ್ಕೊಂದು ಹೊಸ ಮಾತು, ಯಾವುದು ಸತ್ಯ ಯಾವುದು ಮಿತ್ಯ? ಚುನಾವಣಾ (Election) ಹೊಸ್ತಿಲಲ್ಲಿ ಬಿಜೆಪಿ ಪಾಳಯದ ಸಚಿವರು, ಶಾಸಕರು ವಲಸೆಗೆ ಮುಂದಾದರೆ ಬಿಜೆಪಿಯಲ್ಲಿ (BJP) ತಡೆಯೋರು ಯಾರು ಎಂಬ ಮಾತು ಕೇಳಿ ಬರುತ್ತಿದೆ.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಂದ ಮಾತ್ರ ಸಾಧ್ಯನಾ? ಬಿಎಸ್‌ವೈನಿಂದ (BS Yediyurappa) ಮಾತ್ರ ಸಾಧ್ಯವಾ? ಸದ್ಯಕ್ಕೆ ಹಲವರಿಗೆ ಬ್ರೇಕ್ ಹಾಕಿದ್ರಾ ಯಡಿಯೂರಪ್ಪ? ವಲಸಿಗರು ಸೇರಿದಂತೆ ಹಲವು ನಾಯಕರು ಕಾಂಗ್ರೆಸ್‌ನತ್ತ (Congress) ಮುಖ ಮಾಡಬಹುದು ಎಂಬ ಮಾತುಗಳು ಆಗಾಗ ಕೇಳಿ ಬರುತ್ತಿದೆ. ಆದರೆ ಎಲ್ಲರನ್ನು ತಡೆದು ನಿಲ್ಲಿಸುವ ಹಿಡಿದಿಟ್ಟುಕೊಳ್ಳಬಲ್ಲ ನಾಯಕ ಯಾರು ಎಂಬ ಪ್ರಶ್ನೆಗೆ ಯಾರ ಬಳಿಯೂ ಉತ್ತರವಿಲ್ಲ. ಇದನ್ನೂ ಓದಿ: ಬಿಜೆಪಿಗೆ ಎರಡನೇ ಗೆಲುವಿನ ಕೊಡುಗೆ ನೀಡಲಿದೆಯೇ ಮೂಡಬಿದ್ರೆ ಕ್ಷೇತ್ರ?
Advertisement
Advertisement
ಹಿಂದೆಲ್ಲ ಪಕ್ಷಕ್ಕೆ ಬರುವವರನ್ನು ಕರೆತರುವ ಸಾಮರ್ಥ್ಯ ಯಡಿಯೂರಪ್ಪನವರಿಗಿತ್ತು. ಪಕ್ಷ ಬಿಡಲು ಮುಂದಾದವರನ್ನು ತಡೆಯುವ ಶಕ್ತಿಯೂ ಯಡಿಯೂರಪ್ಪನವರೇ ಆಗಿದ್ದರು. ಆದರೆ ಇಂದಿನ ಪರಿಸ್ಥಿತಿಯಲ್ಲಿ ಯಡಿಯೂರಪ್ಪನವರೇ ಎಲ್ಲವನ್ನು ನಿಭಾಯಿಸಲು ಸಾಧ್ಯವಾ? ಭವಿಷ್ಯದ ದೃಷ್ಟಿಯಿಂದ ವಲಸಿಗರು ಸೇರಿದಂತೆ ಇತರೆ ಸಚಿವರು ಹಾಗೂ ಶಾಸಕರು ಪಕ್ಷಾಂತರಕ್ಕೆ ಮುಂದಾದರೆ ತಡೆಯುವ ನಾಯಕ ಯಾರು? ಸಮರ್ಪಕ ಭರವಸೆ ಕೊಟ್ಟು ಮನವೊಲಿಕೆ ಮಾಡುವ ನಾಯಕ ಯಾರು? ಬಿಜೆಪಿ ಪಾಳಯಕ್ಕೆ ಇದೇ ದೊಡ್ಡ ಮಟ್ಟದ ಸವಾಲಾಗಿದೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಕಾಂಗ್ರೆಸ್‌ನಲ್ಲಿ 2 ಕ್ಷೇತ್ರದಿಂದ ಸ್ಪರ್ಧೆ ಮಾಡೋರೆ ಪವರ್‌ಫುಲ್ ಲೀಡರಾ?