ಬೆಂಗಳೂರು: ನಾನು ವರುಣಾ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ, ಅದು ಮುಗಿದ ಅಧ್ಯಾಯ, ನಾನು ಕೇಳಿರೋದು ಚಾಮರಾಜನಗರ, ಗೋವಿಂದರಾಜನಗರವಾಗಿದೆ ಎಂದು ಸಚಿವ ವಿ. ಸೋಮಣ್ಣ (V Somanna) ತಿಳಿಸಿದರು.
ಪಬ್ಲಿಕ್ ಟಿವಿಗೆ ಮಾತನಾಡಿದ ಅವರು, ಇದರಲ್ಲಿ ಚಾಮರಾಜನಗರ (Chamarajanagar), ಗೋವಿಂದರಾಜನಗರದಲ್ಲಿ (Govindraj Nagar) ಒಂದನ್ನು ಕೊಟ್ಟರೆ ಸ್ಪರ್ಧೆ ಮಾಡುತ್ತೇನೆ. ವರುಣಾದಿಂದ (Varuna) ಸ್ಪರ್ಧೆ ಇಲ್ಲ. ಇದು ಹೈಕಮಾಂಡ್‍ಗೆ ಕೂಡ ಗೊತ್ತಿದೆ. ಹೈಕಮಾಂಡ್ ಏನು ಮಾಡುತ್ತೆ ನೋಡೋಣ ಎಂದು ಹೇಳಿದರು.
Advertisement
Advertisement
ಬೇರೆ ಅವರ ಮಕ್ಕಳಿಗೆ ಟಿಕೆಟ್ ಕೊಟ್ಟರೆ ನನ್ನ ಮಗನಿಗೂ ಟಿಕೆಟ್ ಕೊಡಿ, ಸಾಕಷ್ಟು ನಾಯಕರ ಮಕ್ಕಳು ಟಿಕೆಟ್ ಕೇಳುತ್ತಿದ್ದಾರೆ. ಅದಕ್ಕೆ ನಾನು ಕೇಳಿದ್ದೀನಿ, ಕೇಳೋದ್ರಲ್ಲಿ ಏನು ತಪ್ಪಿಲ್ಲ. ಹೈಕಮಾಂಡ್ ನಾಯಕರ ಭೇಟಿ ಮಾಡಿದ್ದೀನಿ, ಯಾರ‍್ಯಾರಿಗೆ ಮನವರಿಕೆ ಮಾಡಬೇಕೋ ಅವರಿಗೆ ಮನವರಿಕೆ ಆಗಿದೆ. ಹೇಗೆ ಮಾಡ್ತಾರೆ ನೋಡೋಣ. ನನ್ನ ಮಗನಿಗೂ ಕೊಡ್ತಾರಾ ನೋಡ್ತೀನಿ. ಬೇರೆ ಅವರಿಗೆ ಕೊಡೋದ್ರಿಂದ ನಾನು ಗುಬ್ಬಿಗೆ ಟಿಕೆಟ್ ಕೊಡಿ ಅಂತ ಕೇಳಿದ್ದೀನಿ ಎಂದರು. ಇದನ್ನೂ ಓದಿ: ಭಾರತದ ಪ್ರಾದೇಶಿಕ ಸಮಗ್ರತೆಯನ್ನು ಯಾರೂ ಪ್ರಶ್ನಿಸುವಂತಿಲ್ಲ: ಅಮಿತ್ ಶಾ
Advertisement
Advertisement
ವಿಜಯೇಂದ್ರ ಅವರಿಗೆ ಟಿಕೆಟ್ ಕೊಡ್ತಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ವಿಜಯೇಂದ್ರ ಅಂತ ಪ್ರತ್ಯೇಕವಾಗಿ ಬೊಟ್ಟು ಮಾಡೋದು ಬೇಡ. ಎಲ್ಲಾ ನಾಯಕರ ಮಕ್ಕಳ ಲೆಕ್ಕದಲ್ಲಿ ನಾನು ಟಿಕೆಟ್ ಕೇಳಿದ್ದೀನಿ ಅಷ್ಟೇ ಎಂದು ತಿಳಿಸಿದರು. ಇದನ್ನೂ ಓದಿ: ನಟರು ರಾಜಕೀಯ ಹಂಗು, ಹಗರಣದಲ್ಲೇಕೆ ಸಿಕ್ಕಿಕೊಳ್ತಾರೆ – ವಿಶ್ವನಾಥ್ ಪ್ರಶ್ನೆ