Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಕಾಂಗ್ರೆಸ್ ಸಂಸ್ಕೃತಿ ಯೂಸ್ ಆ್ಯಂಡ್ ಥ್ರೋ: ಬಿಜೆಪಿ ತೊರೆದ ನಾಯಕರಿಗೆ ಸಿಎಂ ಟಾಂಗ್
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಕಾಂಗ್ರೆಸ್ ಸಂಸ್ಕೃತಿ ಯೂಸ್ ಆ್ಯಂಡ್ ಥ್ರೋ: ಬಿಜೆಪಿ ತೊರೆದ ನಾಯಕರಿಗೆ ಸಿಎಂ ಟಾಂಗ್

Bengaluru City

ಕಾಂಗ್ರೆಸ್ ಸಂಸ್ಕೃತಿ ಯೂಸ್ ಆ್ಯಂಡ್ ಥ್ರೋ: ಬಿಜೆಪಿ ತೊರೆದ ನಾಯಕರಿಗೆ ಸಿಎಂ ಟಾಂಗ್

Public TV
Last updated: April 17, 2023 1:23 pm
Public TV
Share
3 Min Read
BASAVARAJ BOMMAI 6
SHARE

ಬೆಂಗಳೂರು: ಕಾಂಗ್ರೆಸ್‌ನ (Congress) ಸಂಸ್ಕೃತಿ ಯೂಸ್ ಆ್ಯಂಡ್ ಥ್ರೋ. ಚುನಾವಣೆ ಮುಗಿಯುವವರೆಗೆ ಬಿಜೆಪಿಯಿಂದ (BJP) ಹೋದವರಿಗೆ ಸನ್ಮಾನ ಮಾಡುತ್ತಾರೆ. ಚುನಾವಣೆ ಮುಗಿದ ಮೇಲೆ ಅವರಿಗೆ ಅವಮಾನ ಮಾಡುವುದು ಕಾಂಗ್ರೆಸ್‌ನ ಸಂಸ್ಕೃತಿ ಎಂದು ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಕಾಂಗ್ರೆಸ್ ಪಕ್ಷವನ್ನು ಲೇವಡಿ ಮಾಡಿದರು.

ಪ್ಲಾನ್ ಮಾಡಿ ನನ್ನನ್ನು ಬಿಜೆಪಿಯಿಂದ ಹೊರದಬ್ಬಿದ್ದಾರೆ ಎಂಬ ಜಗದೀಶ್ ಶೆಟ್ಟರ್ (Jagadish Shettar) ಹೇಳಿಕೆಗೆ ಬೆಂಗಳೂರಿನಲ್ಲಿ (Bengaluru) ಪ್ರತಿಕ್ರಿಯಿಸಿದ ಅವರು, ಯಾರಾದರೂ ಪಕ್ಷ ಬಿಟ್ಟು ಹೋದಾಗ ಏನಾದರು ಒಂದು ಕಾರಣ ಕೊಡಬೇಕು. ಬಿಜೆಪಿ ಜಗದೀಶ್ ಶೆಟ್ಟರ್ ಅವರಿಗೆ ಸ್ಥಾನಮಾನಗಳನ್ನು ಕೊಡುವುದರ ಜೊತೆಗೆ ಅವರನ್ನು ಅತ್ಯಂತ ಗೌರವಯುತವಾಗಿ ಕಂಡಿದೆ. ಇದರಲ್ಲಿ ಎರಡನೇ ಮಾತಿಲ್ಲ. ಕಳೆದ 25 ವರ್ಷದ ಅವರ ಬೆಳವಣಿಗೆಯಲ್ಲಿ ಬಿಜೆಪಿಯೇ ಪ್ರಮುಖವಾದ ಪಾತ್ರವನ್ನು ವಹಿಸಿದೆ. 25 ವರ್ಷ ಅವರನ್ನು ಬೆಳೆಸಿದ ಬಿಜೆಪಿ ಈಗ ಅವರನ್ನು ಕೆಳಗಿಳಿಸುವ ಪ್ರಯತ್ನವನ್ನು ಮಾಡಿಲ್ಲ. ಷಡ್ಯಂತ್ರದ ಪ್ರಶ್ನೆಯೇ ಇಲ್ಲ. ಪಕ್ಷದ ವರಿಷ್ಠರಿಗೂ ಕೂಡಾ ಇದರ ಬಗ್ಗೆ ಮಾಹಿತಿಯಿದೆ. ಪ್ರಮುಖ ನಾಯಕರಲ್ಲಿ ಶೆಟ್ಟರ್ ಕೂಡಾ ಒಬ್ಬರಾಗಿದ್ದರು. ಹೀಗಾಗಿ ಇದರಲ್ಲಿ ಷಡ್ಯಂತ್ರವಿದೆ ಅಥವಾ ಕೇಂದ್ರೀಕೃತವಾಗಿದೆ ಎಂಬುದು ಸತ್ಯಕ್ಕೆ ದೂರವಾದ ಮಾತು. ಶೆಟ್ಟರ್ ಕಾಂಗ್ರೆಸ್ ಪಕ್ಷಕ್ಕೆ ಹೋಗಿದ್ದಾರೆ. ಹೋಗುವಾಗ ಒಂದು ನೆಪ ಹೇಳಿದ್ದಾರೆ ಅಷ್ಟೇ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ಹೆಚ್‍ಡಿಡಿ ಮುಂದೆ ಗಳಗಳನೆ ಅತ್ತ ನಿಖಿಲ್ ಕುಮಾರಸ್ವಾಮಿ 

BJP Congress

ಬಿಜೆಪಿ ಜನ ಸಮುದಾಯದಿಂದ ಹಾಗೂ ಕಾರ್ಯಕರ್ತರಿಂದ ಬೆಳೆದಿರುವ ಪಕ್ಷ. ಇಂತಹ ಘಟನೆಗಳನ್ನು ಸಂಪೂರ್ಣವಾಗಿ ನಿಭಾಯಿಸುವ ಶಕ್ತಿ ಬಿಜೆಪಿಗಿದೆ. ನಾವು ಖಂಡಿತವಾಗಿಯೂ ನಮ್ಮ ಕ್ಷೇತ್ರವನ್ನು ಗಟ್ಟಿಯಾಗಿ ಇಟ್ಟುಕೊಳ್ಳುತ್ತೇವೆ. ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ ಸೇರಿದಂತೆ ಎಲ್ಲಾ ಕಡೆ ನಮ್ಮ ಹಿಡಿತವನ್ನು ಸಾಧಿಸುವುದಕ್ಕೆ ಬೇಕಾಗಿರುವ ಎಲ್ಲಾ ಕ್ರಮಗಳನ್ನು ನಾವು ತೆಗೆದುಕೊಳ್ಳತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆ – ಪೊಲಿಟಿಕಲ್ ಸೂಸೈಡ್ ಎಂದ ಸುಧಾಕರ್

ಕಳೆದ 50 ವರ್ಷಗಳಿಂದ ಲಿಂಗಾಯತ ನಾಯಕರನ್ನು ತುಳಿದಿದ್ದು ಇದೇ ಕಾಂಗ್ರೆಸ್ ಪಕ್ಷ. ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರಿಗೆ ಲಿಂಗಾಯತರ ಮೇಲೆ ಯಾಕಿಷ್ಟು ಪ್ರೀತಿ ಬಂತೋ ಗೊತ್ತಿಲ್ಲ. ಲಿಂಗಾಯತ ಸಮುದಾಯ ಜಾಗೃತ ಸಮುದಾಯವಾಗಿದ್ದು, ಇದುವರೆಗೂ ಯಾರು ಅವರನ್ನು ಬೆಂಬಲಿಸಿದ್ದಾರೆ ಎಂಬುದು ಅವರಿಗೆ ಗೊತ್ತಿದೆ. ಯಡಿಯೂರಪ್ಪನವರಂತಹ (B.S.Yediyurappa) ಮೇರು ನಾಯಕತ್ವ ಹೊಂದಿರುವ ನಾಯಕರು ನಮ್ಮ ಜೊತೆ ಇರುವವರೆಗೂ ಲಿಂಗಾಯತರು ನಮ್ಮ ಜೊತೆಗೆ ಇರುತ್ತಾರೆ ಎಂದರು. ಇದನ್ನೂ ಓದಿ: ಲಿಂಗಾಯತ ನಾಯಕ ಶೆಟ್ಟರ್‌ಗೆ ಬಿಜೆಪಿಯಿಂದಾದ ಅವಮಾನ ಯಾವ ನಾಯಕನಿಗೂ ಆಗದಿರಲಿ: ಸಿದ್ದು 

Jagadish Shettar Hubli National Flag Congress Narendra Modi

ಕಾಂಗ್ರೆಸ್‌ನಲ್ಲಿ ಇದೇ ರೀತಿ ಅವತ್ತಿನ ಜನತಾ ಪಾರ್ಟಿಯಲ್ಲಿದ್ದ ವೀರೇಂದ್ರ ಪಾಟೀಲ್ ಅವರನ್ನು ಕರೆದುಕೊಂಡು ರಾಜ್ಯ ಸುತ್ತಿಸಿ ಅವರ ಮುಖಾಂತರವೇ 180 ಸೀಟ್ ಗೆದ್ದುಕೊಂಡಿದ್ದರು. ಅನಾರೋಗ್ಯಕ್ಕೆ ತುತ್ತಾದಾಗ ಅವರನ್ನು ತೆಗೆದುಹಾಕಿ ಅವಮಾನ ಮಾಡಿರುವಂತಹ ಉದಾಹರಣೆಗಳು ನಮ್ಮ ಕಣ್ಣಮುಂದಿದೆ. ಅಲ್ಲದೇ ಬಂಗಾರಪ್ಪನವರನ್ನು ಉಪಯೋಗಿಸಿಕೊಂಡು ಮುಂದೆ ಅವರನ್ನು ತಿರಸ್ಕಾರ ಮಾಡಿರುವುದೂ ನಮಗೆ ಗೊತ್ತಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ವಿಭಜನೆಯಾದಾಗ ಗಟ್ಟಿಯಾಗಿ ಇಂದಿರಾ ಕಾಂಗ್ರೆಸ್ ಅವರೊಂದಿಗೆ ನಿಂತ ದೇವರಾಜ್ ಅರಸ್ ಅವರನ್ನು ಯೂಸ್ ಆ್ಯಂಡ್ ಥ್ರೋ (Use And Throw) ಮಾಡಿ ಅವಮಾನ ಮಾಡಿದ್ದು ಕಾಂಗ್ರೆಸ್ ಪಕ್ಷ. ಇದೆಲ್ಲವೂ ಗೊತ್ತಿದ್ದು ಜಗದೀಶ್ ಶೆಟ್ಟರ್ ಕಾಂಗ್ರೆಸ್ ಪಕ್ಷ ಯಾಕೆ ಸೇರಿದರು ಎಂಬುದು ನನಗೆ ಇನ್ನೂ ಕೂಡಾ ಆಶ್ಚರ್ಯವಾಗುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು. ಇದನ್ನೂ ಓದಿ: ಪ್ರಧಾನಿಯಾಗಲು ಶೆಟ್ಟರ್ ಕಾಂಗ್ರೆಸ್ ಸೇರಿದ್ದಾರೆ: ಬಿ.ಸಿ.ಪಾಟೀಲ್‌ 

ಜಗದೀಶ್ ಶೆಟ್ಟರ್ ಅವರ ಕಾಂಗ್ರೆಸ್ ಸೇರ್ಪಡೆಯಿಂದಾಗಿ ನಮ್ಮ ಪಕ್ಷದಲ್ಲಿ ಹೊಸ ನಾಯಕತ್ವಕ್ಕೆ ಅವಕಾಶ ಸಿಗುತ್ತಿದೆ. ಖಂಡಿತವಾಗಿಯೂ ಸಂಪೂರ್ಣ ಬಹುಮತದೊಂದಿಗೆ ಹೊಸ ನಾಯಕತ್ವ ಆಡಳಿತಕ್ಕೆ ಬರಲಿದೆ. ಎಲ್ಲಾ ಸಮುದಾಯಗಳು ಕೂಡಾ ನಮ್ಮ ಬೆಂಬಲಕ್ಕೆ ನಿಲ್ಲುತ್ತವೆ. ಕಾಂಗ್ರೆಸ್ ಪಕ್ಷದ ಈ ಹುನ್ನಾರ ಕೆಲವೇ ದಿನಗಳಲ್ಲಿ ಬಯಲಾಗುತ್ತದೆ ಎಂದರು. ಇದನ್ನೂ ಓದಿ: ಶೆಟ್ಟರ್ ಕಾಂಗ್ರೆಸ್ ಸೇರ್ಪಡೆ ಪೂರ್ವ ನಿಯೋಜಿತ: ಆರ್.ಅಶೋಕ್ ಟೀಕೆ 

ರಾಹುಲ್ ಗಾಂಧಿಯವರ (Rahul Gandhi) 40% ಕಮಿಷನ್ ಆರೋಪದ ಕುರಿತು ಪ್ರತಿಕ್ರಿಯಿದ ಅವರು, ರಾಹುಲ್ ಗಾಂಧಿ ಪಾದಯಾತ್ರೆ ಮಾಡುತ್ತಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಹಗರಣದ ಬಗ್ಗೆ ನಾನೇ ಅವರಿಗೆ ಕಳುಹಿಸಿಕೊಟ್ಟಿದ್ದೇನೆ. 40% ಭ್ರಷ್ಟಾಚಾರದ ಚಾರ್ಜ್‌ಶೀಟ್‌ ಅವರ ಮೇಲಿದೆ. ಅದಕ್ಕೆ ಇದುವರೆಗೂ ಉತ್ತರ ಬಂದಿಲ್ಲ. ಮೊದಲು ಅವರ ಸರ್ಕಾರದಲ್ಲಿ ನಡೆದಂತಹ 40% ಭ್ರಷ್ಟಾಚಾರಕ್ಕೆ (Corruption) ಉತ್ತರ ಕೊಡಲಿ ಎಂದು ಕಿಡಿ ಕಾರಿದರು. ಇದನ್ನೂ ಓದಿ: ಶೆಟ್ಟರ್‌ನಿಂದ ಉತ್ತರ ಕರ್ನಾಟಕದಲ್ಲೂ ಕಾಂಗ್ರೆಸ್‌ಗೆ ಹೆಚ್ಚಿನ ಶಕ್ತಿ ಸಿಗುವ ವಿಶ್ವಾಸವಿದೆ: ಖರ್ಗೆ

TAGGED:B. S.YediyurappaBasavaraj BommaibengalurubjpcongresscorruptionelectionJagadish ShettarRahul Gandhiಕಾಂಗ್ರೆಸ್ಚುನಾವಣೆಜಗದೀಶ್ ಶೆಟ್ಟರ್ಬಸವರಾಜ ಬೊಮ್ಮಾಯಿಬಿಎಸ್ ಯಡಿಯೂರಪ್ಪಬಿಜೆಪಿಬೆಂಗಳೂರುಭ್ರಷ್ಟಾಚಾರರಾಹುಲ್ ಗಾಂಧಿ
Share This Article
Facebook Whatsapp Whatsapp Telegram

Cinema news

TVK Vijay
ಅಫಿಡವಿಟ್‌ನಲ್ಲಿ 105 ಕೋಟಿ ವ್ಯತ್ಯಾಸ – ನಾಮಪತ್ರ ತಿರಸ್ಕಾರ ಆತಂಕದಲ್ಲಿ ವಿಜಯ್‌
Cinema Court Latest Main Post National
Maharashtra Man Arrest
ಮಹಾರಾಷ್ಟ್ರ ‘ಲವ್ ಟ್ರ್ಯಾಪ್’ ಸಂತ್ರಸ್ತೆ ಆತ್ಮಹತ್ಯೆಗೆ ಯತ್ನ – ಮತ್ತೋರ್ವ ಆರೋಪಿ ಅಂದರ್
Cinema Latest National Top Stories
Atlee
ಹೆಣ್ಣು ಮಗು ಜನಿಸಿದ ಸಂಭ್ರಮದಲ್ಲಿ ನಿರ್ದೇಶಕ ಅಟ್ಲೀ ದಂಪತಿ
Cinema Latest Top Stories
Deepika Padukone Ranveer Singh
2ನೇ ಮಗುವಿನ ನಿರೀಕ್ಷೆಯಲ್ಲಿ ದೀಪಿಕಾ ಪಡುಕೋಣೆ, ರಣವೀರ್‌ ಸಿಂಗ್‌ ದಂಪತಿ
Bollywood Cinema Latest Top Stories

You Might Also Like

Sharad Pawar
Latest

ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಆಸ್ಪತ್ರೆಗೆ ದಾಖಲು

Public TV
By Public TV
15 minutes ago
Mohammed Nalapad ED Raid
Bengaluru City

ಬಿಟ್ ಕಾಯಿನ್ ಕೇಸಲ್ಲಿ ನಲಪಾಡ್‌ಗೆ ಶಾಕ್ – ಸತತ 21 ಗಂಟೆಗಳ ಸುದೀರ್ಘ ಶೋಧ ಕಾರ್ಯ ಮುಗಿಸಿದ ಇಡಿ

Public TV
By Public TV
1 hour ago
karnataka High Court
Court

SSLC ತೃತೀಯ ಭಾಷೆಗೆ ಈ ವರ್ಷ ಗ್ರೇಡ್ ಬೇಡ, ಅಂಕವನ್ನೇ ನೀಡಿ: ಹೈಕೋರ್ಟ್ ಆದೇಶ

Public TV
By Public TV
2 hours ago
Public tv Vidhyapeeta 2026 9th edition karnataka biggest education Expo April 25 27 Palace ground Bengaluru
Bengaluru City

ಪಬ್ಲಿಕ್‌ ಟಿವಿ ‘ವಿದ್ಯಾಪೀಠ’ಕ್ಕೆ ಬನ್ನಿ.. ಲ್ಯಾಪ್‌ಟಾಪ್‌ ಗೆಲ್ಲಿ

Public TV
By Public TV
2 hours ago
Weather
Bengaluru City

ಬೆಂಗಳೂರು ಸೇರಿ ರಾಜ್ಯಾದ್ಯಂತ ಇನ್ನೊಂದು ವಾರ ಹೆಚ್ಚಾಗಲಿದೆ ಬಿಸಿಲು

Public TV
By Public TV
2 hours ago
Bengaluru B.Tech Student Missing
Bengaluru City

ಖಾಸಗಿ ಫೋಟೋ ಇಟ್ಟುಕೊಂಡು ಸೈಬರ್ ವಂಚಕರ ಕಿರುಕುಳ – ಬೆಂಗಳೂರಿನಲ್ಲಿ ಬಿ.ಟೆಕ್ ವಿದ್ಯಾರ್ಥಿ ನಾಪತ್ತೆ

Public TV
By Public TV
3 hours ago

Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?