ದಾವಣಗೆರೆ: ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Election 2023) ಹಿನ್ನೆಲೆಯಲ್ಲಿ ಮತದಾನಕ್ಕೆ ಅಮೆರಿಕ (America) ದಿಂದ ಬಂದರೂ ಮತದಾರರ ಪಟ್ಟಿಯಲ್ಲಿ ಹೆಸರೇ ನಾಪತ್ತೆಯಾಗಿರುವ ವಿಚಾರವೊಂದು ದಾವಣಗೆರೆ (Davanagere) ಯಲ್ಲಿ ಬೆಳಕಿಗೆ ಬಂದಿದೆ.
Advertisement
ಹೌದು, ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ರಾಘವೇಂದ್ರ ಕಮಲಾಕರ ಶೇಟ್ ಅವರು ತಮ್ಮ ಹಕ್ಕು ಚಲಾಯಿಸಲೆಂದು ಅತ್ಯಂತ ಉತ್ಸಾಹದಿಂದಲೇ ಅಮೆರಿಕಾದಿಂದ ಬಂದಿದ್ದಾರೆ. ಆದರೆ ಇಲ್ಲಿ ಬಂದು ನೋಡಿದಾಗ ತಮ್ಮ ಹೆಸರು ಮತದಾರರ ಪಟ್ಟಿಯಲ್ಲೇ ಇಲ್ಲದಿರುವುದರಿಂದ ಅವರು ನಿರಾಸೆಗೊಂಡಿದ್ದಾರೆ.
Advertisement
Advertisement
ಕಳೆದ 15 ವರ್ಷಗಳಿಂದ ಅಮೆರಿಕಾದಲ್ಲಿ ಇರುವ ರಾಘವೇಂದ್ರ (Raghavendra) ಅವರು ಇದೀಗ ಮತದಾನ ಮಾಡಲೆಂದು ಲಕ್ಷಾಂತರ ರೂಪಾಯಿ ಖರ್ಚು ಮಾಡಿಕೊಂಡು ಊರಿಗೆ ಬಂದಿದ್ದಾರೆ. 14 ಸಾವಿರ ಕಿಲೋಮೀಟರ್ ದೂರದಿಂದ ಮತದಾನಕ್ಕೆ ಬಂದರೂ ಪ್ರಯೋಜನವಾಗಿಲ್ಲ ಎಂದು ರಾಘವೇಂದ್ರ ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: Karnataka Election 2023 Live – ಕರ್ನಾಟಕದಲ್ಲಿ 11 ಗಂಟೆವರೆಗೆ 20.99% ಮತದಾನ
Advertisement
ನಾನು ಒಂದು ಪಕ್ಷದ ಜೊತೆ ನಾನು ಗುರುತಿಸಿಕೊಂಡಿದ್ದೆ. ಅದೇ ಕಾರಣಕ್ಕೆ ನನ್ನ ಹೆಸರು ಡಿಲೀಟ್ ಆಗಿರುವ ಶಂಕೆ ಇದೆ ಎಂದು ಆರೋಪ ಮಾಡಿದರು.