– ಪ್ರಣಾಳಿಕೆ ನಮಗೆ ಭಗವದ್ಗೀತೆ ಇದ್ದಂತೆ, ಸುಳ್ಳು ಹೇಳುವುದಿಲ್ಲ
ಚಿಕ್ಕಬಳ್ಳಾಪುರ: ಹೆಚ್ಚು ಅನ್ನ ತಿಂದರೆ ಸಕ್ಕರೆ ಕಾಯಿಲೆ ಹೆಚ್ಚಾಗುತ್ತದೆ. ಇದರಿಂದಾಗಿ ಆರೋಗ್ಯಯುಕ್ತ ಆಹಾರ ನೀಡುವುದೇ ಬಿಜೆಪಿ (BJP) ಗುರಿಯಾಗಿದೆ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ (K Sudhakar) ತಿಳಿಸಿದರು.
ತಾಲೂಕಿನ ಪೋಶೆಟ್ಟಿಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಪ್ರಚಾರ ನಡೆಸಿದ ಅವರು, ಪ್ರತಿ ಮನೆಗೆ ಪ್ರತಿದಿನ ಅರ್ಧ ಲೀಟರ್ ಹಾಲು ನೀಡಲಾಗುತ್ತದೆ. ಹೆಚ್ಚು ಅನ್ನ ತಿಂದರೆ ಸಕ್ಕರೆ ಕಾಯಿಲೆ ಹೆಚ್ಚಾಗಲಿದೆ. ಆರೋಗ್ಯಯುಕ್ತ ಆಹಾರ ನೀಡುವುದು ಬಿಜೆಪಿ ಗುರಿಯಾಗಿದೆ. ಕಾಂಗ್ರೆಸ್ ನೀಡುವ 100 ರೂ. ಅಕ್ಕಿಗೆ ಬದಲಾಗಿ ಬಿಜೆಪಿ ತಿಂಗಳಿಗೆ 600 ರೂ. ಮೌಲ್ಯದ ಹಾಲು ನೀಡುತ್ತಿದೆ. ಇದೇ ರೀತಿ 60 ವರ್ಷದಿಂದ ಕಾಂಗ್ರೆಸ್ (Congress) ಜನರನ್ನು ಯಾಮಾರಿಸಿದೆ ಎಂದು ಆರೋಪಿಸಿದರು.
Advertisement
Advertisement
ಕಾಂಗ್ರೆಸ್ ಪಕ್ಷಕ್ಕೆ ಗ್ಯಾರೆಂಟಿ ಇಲ್ಲದ ಸ್ಥಿತಿ ಇದೆ. ಇವರು ಗ್ಯಾರೆಂಟಿ ಕಾರ್ಡ್ ನೀಡುತ್ತಿದ್ದಾರೆ. 2013 ರಿಂದ 2018ರವರೆಗೂ ಆಡಳಿತ ನಡೆಸಿದ ಕಾಂಗ್ರೆಸ್ ರಿಪೋರ್ಟ್ ಕಾರ್ಡ್ ನೀಡಬೇಕಿತ್ತು. ಅಲ್ಲದೇ ಅವರ ಮೇಲೆ ಗ್ಯಾರೆಂಟಿ ಇಲ್ಲದ ಕಾರಣ 2018ರಲ್ಲಿ ಅವರನ್ನು ಮನೆಗೆ ಕಳುಹಿಸಲಾಗಿದೆ. ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಮುಂದಿನ ತಿಂಗಳಿನಿಂದಲೇ 5 ಕೆಜಿ ಅಕ್ಕಿಯೊಂದಿಗೆ, 5 ಕೆಜಿ ಸಿರಿ ಧಾನ್ಯ ನೀಡಿ ಎಲ್ಲರ ಆರೋಗ್ಯ ಕಾಪಾಡಲಾಗುವುದು ಎಂದು ತಿಳಿಸಿದರು.
Advertisement
Advertisement
ಬಿಜೆಪಿ ಪ್ರಕಟಿಸಿರುವ ಪ್ರಣಾಳಿಕೆಯನ್ನು ಭಗವದ್ಗೀತೆಯಷ್ಟೇ ಪವಿತ್ರಭಾವದಿಂದ ನೋಡಲಿದ್ದು, ಬದ್ಧತೆಯಿಂದ ಎಲ್ಲ ಭರವಸೆಗಳನ್ನು ಹಂತ ಹಂತವಾಗಿ ಅನುಷ್ಠಾನ ಮಾಡಲಾಗುವುದು. ಆದರೆ ಕಾಂಗ್ರೆಸ್ ನಿರಂತರವಾಗಿ ಯಾಮಾರಿಸುತ್ತಲೇ ಬಂದಿದೆ. ಈ ಬಗ್ಗೆ ಮತದಾರರು ಎಚ್ಚರದಿಂದ ಇರಬೇಕು, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ವರ್ಷಕ್ಕೆ ಮೂರು ಅಡುಗೆ ಅನಿಲ ಸಿಲಿಂಡರ್ ಉಚಿತವಾಗಿ ನೀಡಲಾಗುತ್ತದೆ. ಪರಿಶಿಷ್ಟ ಜಾತಿಯ ಎಲ್ಲ ಮಹಿಳೆಯರ ಖಾತೆಯಲ್ಲಿ 10 ಸಾವಿರ ರೂ. ಎಫ್‌ಡಿ ಮಾಡಲಾಗುತ್ತದೆ. ಹಾಗಾಗಿ ಮತ್ತೊಮ್ಮೆ ಬಿಜೆಪಿಯನ್ನು ಆಶೀರ್ವಾದಿಸಬೇಕು ಎಂದರು. ಇದನ್ನೂ ಓದಿ: ಭಕ್ತ ಅಂತ ಹೇಳಿಕೊಳ್ಳೋದಲ್ಲ ಆಂಜನೇಯನ ತರ ಕೆಲಸ ಮಾಡಬೇಕು: ಡಿಕೆಶಿಗೆ ಸುಧಾಕರ್ ತಿರುಗೇಟು
ಬಿಪಿಎಲ್ ಕುಟುಂಬದಲ್ಲಿರುವ ಎಲ್ಲರಿಗೂ ಆಯುಷ್ಮಾನ್ ಭಾರತ್ ಯೋಜನೆ ಮೂಲಕ ಆರೋಗ್ಯಕ್ಕಾಗಿ ಪ್ರತಿ ವರ್ಷ 10 ಲಕ್ಷ ರೂ. ನೀಡಲಾಗುತ್ತದೆ. ಎಪಿಎಲ್ ಕುಟುಂಬಗಳಿಗೆ ವಾರ್ಷಿಕ 5 ಲಕ್ಷ ರೂ. ಆರೋಗ್ಯ ವಿಮೆ ನೀಡಲಾಗುತ್ತದೆ. ಹಾಲಿನ ಪ್ರೋತ್ಸಾಹ ಧನ ಪ್ರತಿ ಲೀಟರ್‌ಗೆ 7 ರೂಗೆ ಹೆಚ್ಚಿಸಲಾಗುವುದು. ವಸತಿ ಯೋಜನೆಗಳಲ್ಲಿ ಪ್ರತಿ ಮನೆಗೆ 5 ಲಕ್ಷ ರೂ. ಅನುದಾನ ನೀಡಲಿದೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ರುವಾಂಡದಲ್ಲಿ ಭೀಕರ ಪ್ರವಾಹ – 109 ಮಂದಿ ಬಲಿ