ಬೆಂಗಳೂರು: ಕ್ಷೇತ್ರ ಆಯ್ಕೆಯ ಗೊಂದಲದಲ್ಲಿರುವ ಸಿದ್ದರಾಮಯ್ಯ (Siddaramaiah) ಪರಿಹಾರ ಹುಡುಕಲು ಇದೇ ಮೊದಲ ಬಾರಿಗೆ ಕುಟುಂಬಸ್ಥರ ಮೊರೆ ಹೋಗಿದ್ದಾರೆ.
ಪತ್ನಿ ಪಾರ್ವತಿ (Parvathy) ಹಾಗೂ ಪುತ್ರ ಯತೀಂದ್ರರ (Yatindra) ಅಭಿಪ್ರಾಯ ಕೇಳಿದ್ದಾರೆ. ಇಬ್ಬರು ನೀಡಿದ ವಿಭಿನ್ನ ಸಲಹೆಗಳು ಸಿದ್ದರಾಮಯ್ಯರನ್ನು ಮತ್ತಷ್ಟು ಗೊಂದಲಕ್ಕೆ ತಳ್ಳಿದೆ.
Advertisement
ಸಿದ್ದರಾಮಯ್ಯ ಪತ್ನಿ ಸಲಹೆ ಕೇಳಲು ಕಾರಣವೂ ಇದೆ. ಕಳೆದ ಬಾರಿ ಚಾಮುಂಡೇಶ್ವರಿಯಲ್ಲಿ(Chamundeshwari Constituency) ಸ್ಪರ್ಧಿಸಬೇಡಿ. ಬೇರೆ ಕ್ಷೇತ್ರವನ್ನು ಆಯ್ಕೆ ಮಾಡಿ ಎಂದು ಪತ್ನಿ ಸಲಹೆ ಕೊಟ್ಟಿದ್ದರು. ಆದರೆ ಈ ಸಲಹೆ ಪರಿಗಣಿಸದ ಸಿದ್ದರಾಮಯ್ಯ ಚಾಮುಂಡೇಶ್ವರಿಯಲ್ಲಿ ಜೆಡಿಎಸ್‌ನ ಜಿಟಿ ದೇವೇಗೌಡ (GT Devegowda) ವಿರುದ್ಧ ನಿಂತು ಸೋಲನ್ನು ಅನುಭವಿಸಿದ್ದರು. ಇದನ್ನೂ ಓದಿ: ದೆಹಲಿಯ ಬ್ರಿಟಿಷ್ ಹೈಕಮೀಷನ್‌ಗೆ ನೀಡಿದ ಭದ್ರತೆ ತೆಗೆದು ಯುಕೆಗೆ ಬಿಸಿ ಮುಟ್ಟಿಸಿದ ಭಾರತ
Advertisement
Advertisement
ಪತ್ನಿ ಹೇಳಿದ್ದೇನು?
ವರುಣಾಗೆ ಹೋಗಿ ಮಗನ ಭವಿಷ್ಯ ಹಾಳು ಮಾಡುವುದು ಸರಿಯಲ್ಲ. ಮಗನ ರಾಜಕೀಯ ಭವಿಷ್ಯ ಒಮ್ಮೆ ಬಿದ್ದರೆ ಮತ್ತೆ ಏಳುವುದು ಕಷ್ಟವಾಗುತ್ತದೆ. ಹೀಗಾಗಿ ವರುಣಾದಲ್ಲಿ (Varuna) ಮಗನನ್ನು ಗೆಲ್ಲಿಸಿ ಒಂದು ಅವಧಿಗೆ ಮಂತ್ರಿ ಮಾಡಿ. ನೀವು ಕೋಲಾರಕ್ಕೆ (Kolara) ಹೋದರೆ ಗೆಲ್ಲಬಹುದು ಎಂದು ಪತ್ನಿ ಪಾರ್ವತಿ ಸಲಹೆ ನೀಡಿದ್ದಾರೆ.
Advertisement
ಸಿದ್ದು ಪುತ್ರ ಹೇಳೋದೇನು?
ಕೋಲಾರದಲ್ಲಿ ಹೇಳಿದಷ್ಟು ಸುಲಭ ಇಲ್ಲ. ಕೊನೆಯ ಚುನಾವಣೆಯಲ್ಲಿ ವಿಪರೀತ ರಿಸ್ಕ್ ತೆಗೆದುಕೊಳ್ಳುವುದು ಬೇಡ. ವರುಣಾ ಕ್ಷೇತ್ರದಲ್ಲಿ ಸುಲಭವಾಗಿ ಗೆಲ್ಲಬಹುದು. ನಾನು ಬೇರೆ ಎಲ್ಲಿಯೂ ಸ್ಪರ್ಧೆ ಮಾಡುವುದಿಲ್ಲ ನಿಮ್ಮನ್ನು ಗೆಲ್ಲಿಸಿಕೊಡುತ್ತೇನೆ ಎಂದು ಪುತ್ರ ಯತೀಂದ್ರ ಹೇಳಿದ್ದಾರೆ.
ಸಿದ್ದು ಮನಸ್ಸಲ್ಲಿ ಏನಿದೆ?
ಕೋಲಾರದಲ್ಲಿ ರಿಸ್ಕ್ ಜಾಸ್ತಿ ಎಂಬ ಹಿರಿಯ ನಾಯಕರು, ಕಾಂಗ್ರೆಸ್ ಹೈಕಮಾಂಡ್ ಅಭಿಪ್ರಾಯಕ್ಕೆ ಸಿದ್ದರಾಮಯ್ಯ ಸಹಮತ ವ್ಯಕ್ತಪಡಿಸಿದ್ದಾರೆ. ಹೀಗಾಗಿ ವರುಣಾದಿಂದ ಸ್ಪರ್ಧಿಸುವ ಆಸೆ ಇದ್ದರೂ ಇದಕ್ಕೆ ಪುತ್ರ ವ್ಯಾಮೋಹ ಅಡ್ಡಿಯಾಗುತ್ತಿದೆ. ನಾನು ಸ್ಪರ್ಧಿಸಿದರೆ ಪುತ್ರ ಯತೀಂದ್ರ ರಾಜಕೀಯ ಜೀವನಕ್ಕೆ ಅಡ್ಡಿಯಾಗಬಹದು ಎಂಬ ಭೀತಿ ಕಾಡುತ್ತಿದೆ. ಈ ಕಾರಣಕ್ಕೆ ಇನ್ನೂ ಯಾವ ಕ್ಷೇತ್ರದಲ್ಲಿ ಸ್ಪರ್ಧಿಸಬೇಕು ಎಂಬ ಗೊಂದಲದಲ್ಲಿ ಸಿದ್ದರಾಮಯ್ಯ ಇದ್ದಾರೆ.