ಬೆಂಗಳೂರು: ನೂರು ಬಾರಿ ಅಮಿತ್ ಶಾ ಹಾಗೂ ಪ್ರಧಾನಿ ಮೋದಿ (Narendra Modi) ರಾಜ್ಯಕ್ಕೆ ಬಂದರೂ ಕೂಡ ಈ ಬಾರಿ ಕಾಂಗ್ರೆಸ್ ನೂರಕ್ಕೆ ನೂರು ಗೆಲ್ಲುತ್ತದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಹೇಳಿದರು.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸುಧಾಕರ್ (Sudhakar) ತನಿಖೆ ಮಾಡುವ ಮಾತೇ ಆಡಲ್ವಲ್ಲ. ಒಂದಂಕಿ ಲಾಟರಿ ಬಗ್ಗೆ ದೇವೇಗೌಡರು ಪ್ರಸ್ತಾಪ ಮಾಡಿದ್ದರು. ನನ್ನ ಮೇಲೆ ಜಾರ್ಜ್ ಮೇಲೆ ಆರೋಪ ಮಾಡಿದರು. ನಾನು ಕೂಡಲೇ ಸಿಬಿಐ ತನಿಖೆಗೆ ಕೊಟ್ಟೆ, ಆ ಸಮಯದಲ್ಲಿ ಏನಾದರೂ ದಾಖಲೆ ಕೊಟ್ಟಿದ್ದರಾ? ಡಿಕೆ ರವಿ (DK Ravi) ಪ್ರಕರಣ ಸಿಬಿಐಗೆ ಕೊಟ್ಟೆ, ಡಿವೈಎಸ್ಪಿ ಗಣಪತಿ ಕೇಸ್ ಸಿಬಿಐಗೆ ಕೊಟ್ಟೆ. ಏನಾದರೂ ದಾಖಲಾತಿ ಕೊಟ್ಟಿದ್ದರಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಟಿಕೆಟ್ ಘೋಷಣೆ ವೇಳೆ ಸಮಸ್ಯೆ, ಸವಾಲು ನಿರ್ವಹಣೆಗೆ ಬಿಜೆಪಿ ಹೈಕಮಾಂಡ್ ಪ್ರೀಪ್ಲಾನ್
Advertisement
Advertisement
ತನಿಖೆ ಮಾಡಿಸಿ ಮೊದಲು, ತನಿಖೆಗೂ ಮೊದಲೇ ದಾಖಲಾತಿ ಕೊಟ್ಟಾರಾ? ಶ್ವೇತಪತ್ರ ಅನ್ನೋದು ಒಂದು ಸುಳ್ಳಿನ ಕಂತೆ. ಅದೊಂದು ಹೇಳಿಕೆ ಅಷ್ಟೇ. ಸಮ್ಮಿಶ್ರ ಸರ್ಕಾರದ ಪ್ರಾರಂಭದಲ್ಲೇ ಯಾಕೆ ಹೇಳಲಿಲ್ಲ? ಒಂದು ವರ್ಷ ಇದ್ರಲ್ಲ ಆಗ ಸಮ್ಮಿಶ್ರ ಸರ್ಕಾರದ ಬಗ್ಗೆ ವಿರೋಧ ಯಾಕೆ ಮಾಡಲಿಲ್ಲ? ಬಿಜೆಪಿಯವರು (BJP) ಇವರು ಎಲ್ಲರೂ ಕೂಡ ಭ್ರಷ್ಟಾಚಾರಿಗಳಾಗಿ ಹೆಸರು ಕೆಡಿಸಿಕೊಂಡಿದ್ದಾರೆ. ಪಾಪ ಅಮಿತ್ ಶಾ (Amit Shah) ಕೂಡ ಜೈಲಿಗೆ ಹೋದವರು, ಅವರನ್ನು ಕರೆಸಿಕೊಂಡು ವೋಟು ಕೇಳಿದ್ರೆ ಆಗತ್ತಾ? ನೂರು ಬಾರಿ ಅಮಿತ್ ಶಾ, ಮೋದಿ ಬಂದರೂ ಕೂಡ ಕಾಂಗ್ರೆಸ್ (Congress) ನೂರಕ್ಕೆ ನೂರು ಗೆಲ್ಲುತ್ತದೆ ಈ ಬಾರಿ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಸಿದ್ದರಾಮಯ್ಯ ಹೃದಯದಿಂದ ಮಾತನಾಡ್ತಿಲ್ಲ, ಗಂಟಲಿನಿಂದ ಮಾತನಾಡ್ತಿದ್ದಾರೆ: ಸೋಮಣ್ಣ
Advertisement
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k