ಬಿಜೆಪಿಯದ್ದು ಹಳಿ ತಪ್ಪಿದ ಡಬ್ಬಾ ಇಂಜಿನ್ ಸರ್ಕಾರ: ಸಲೀಂ ಅಹ್ಮದ್

Public TV
1 Min Read
salim ahmed

ಕೋಲಾರ : ಬಿಜೆಪಿ (BJP) ಅವರದ್ದು ಡಬಲ್ ಇಂಜಿನ್ ಸರ್ಕಾರ ಅಲ್ಲ, ಇದು ಹಳಿ ತಪ್ಪಿದ ಡಬ್ಬಾ ಇಂಜಿನ್ ಸರ್ಕಾರ ಎಂದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ (Salim Ahmed) ವ್ಯಂಗ್ಯವಾಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರಿಗೆ ಇವತ್ತಿಗೂ ಪಟ್ಟಿ ಬಿಡುಗಡೆ ಮಾಡುವ ಶಕ್ತಿ ಇಲ್ಲ. ಬಿಜೆಪಿ ಅವರದ್ದು ಡಬಲ್ ಇಂಜಿನ್ ಸರ್ಕಾರ ಅಲ್ಲ, ಇದು ಹಳಿ ತಪ್ಪಿದ ಡಬ್ಬಾ ಇಂಜಿನ್ ಸರ್ಕಾರ, ಈ ಸರ್ಕಾರಕ್ಕೆ ಯಾವುದೇ ಬದ್ಧತೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.

bjp flag

ಕಾಂಗ್ರೆಸ್‌ನಲ್ಲಿ (Congress) ಎದ್ದಿರುವ ಸಿಎಂ ಅಭ್ಯರ್ಥಿ ವಿಚಾರವಾಗಿ ಮಾತನಾಡಿದ ಅವರು, ಕಾಂಗ್ರೆಸ್‌ನಲ್ಲಿ ಯಾರು ಸಹ ಸಿಎಂ ಆಕಾಂಕ್ಷಿ ಆಗುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ ನಮ್ಮ ಮೊದಲನೇ ಕರ್ತವ್ಯ ನಾವು ಅಧಿಕಾರಕ್ಕೆ ಬರಬೇಕು. ಜನ ವಿರೋಧಿ ಸರ್ಕಾರ ಹೋಗಬೇಕು, ಈ ಸರ್ಕಾರವನ್ನು ತೆಗೆಯಬೇಕು ಎನ್ನುವುದಾಗಿದೆ. ಈಗಾಗಲೇ ಸಿದ್ದರಾಮಯ್ಯ (Siddaramaiah) ಹಾಗೂ ಡಿಕೆಶಿ (DK Shivakumar) ಅವರು ಈ ಕುರಿತು ಸ್ಪಷ್ಟನೆ ನೀಡಿದ್ದಾರೆ. ರಾಜ್ಯದಲ್ಲಿ ಮೊದಲು ಭ್ರಷ್ಟ ಹಾಗೂ ಲೂಟಿಕೋರರ ಸರ್ಕಾರವನ್ನು ತೆಗೆಯುವಂತಹ ಕೆಲಸ ಆಗಬೇಕು. ನಂತರ ಶಾಸಕರು ಹಾಗೂ ಹೈಕಮಾಂಡ್ ಈ ಕುರಿತು ಚರ್ಚೆ ನಡೆಸಿ ತೀರ್ಮಾನ ಮಾಡುತ್ತಾರೆ ಎಂದರು. ಇದನ್ನೂ ಓದಿ: ಸರ್ಕಾರವನ್ನು ಟೀಕಿಸಿದ ಮಾತ್ರಕ್ಕೆ ಮಾಧ್ಯಮ ನಿಯಂತ್ರಿಸಲು ಸಾಧ್ಯವಿಲ್ಲ: ಕೇಂದ್ರಕ್ಕೆ ಸುಪ್ರೀಂ ತರಾಟೆ

congress

ಯಾರು ಸಹ ಸಿಎಂ ಆಕಾಂಕ್ಷಿ ಆಗುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ ನಮ್ಮ ಮೊದಲನೇ ಕರ್ತವ್ಯ ನಾವು ಅಧಿಕಾರಕ್ಕೆ ಬರಬೇಕು. ಜನ ವಿರೋಧಿ ಸರ್ಕಾರ ಹೋಗಬೇಕು. ಈ ಸರ್ಕಾರವನ್ನು ತೆಗೆಯಬೇಕು ಎನ್ನುವುದು ಗುರಿ ಎಂದು ಹೇಳಿದರು. ಕಾಂಗ್ರೆಸ್‌ನಲ್ಲಿ ಯಾವ ಗೊಂದಲ ಇಲ್ಲ, ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಮಾಡುತ್ತಿದ್ದೇವೆ. ಈಗಾಗಲೇ ಮೊದಲನೇ ಪಟ್ಟಿ ಬಿಡುಗಡೆ ಮಾಡಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಕಲ್ಯಾಣಿಯಲ್ಲಿ ಮುಳುಗಿ ಐವರು ಸಾವು

Share This Article